ದೇಶ/ವಿದೇಶ

ಭಾರತಕ್ಕೆ ಬಂದಿಳಿದ ಅಮೆರಿಕ ಉಪಾಧ್ಯಕ್ಷ

ಅಮೆರಿಕ ಉಪಾಧ್ಯಕ್ಷ ಜೆ ಡಿ ವ್ಯಾನ್ಸ್​ ಅವರು ತಮ್ಮ ಪತ್ನಿ ಉಷಾ ಮತ್ತು ತಮ್ಮ ಇಬ್ಬರು ಗಂಡು ಮಕ್ಕಳಾದ ಇವಾನ್​, ವಿವೇಕ್​ ಮತ್ತು ಮಗಳು ಮಿರಾಬೆಲ್​ ಜೊತೆಗೆ ಭಾರತಕ್ಕೆ ಭೇಟಿ ನೀಡಿದ್ದಾರೆ. ಇವತ್ತು ಬೆಳಗ್ಗೆ ದೆಹಲಿಯ ಪಲ್ಲಂ ವಿಮಾನನಿಲ್ದಾಣದಲ್ಲಿ ಬಂದಿಳಿದ ಅಮೆರಿಕದ ಉಪ ರಾಷ್ಟ್ರಪತಿಯವರಿಗೆ ಸೇನಾ ಗೌರವಗಳ ಮೂಲಕ ಸ್ವಾಗತ ಕೋರಲಾಯಿತು. ಭಾರತಕ್ಕೆ ಬಂದಿಳಿಯುವ ವೇಳೆ ವ್ಯಾನ್ಸ್​​ ಮಗ ಇವಾನ್, ವಿವೇಕ್​​ ಕುರ್ತಾ ಪೈಜಾಮಾ ಧರಿಸಿದ್ದರೆ, ಅನಾರ್ಕಲಿ ಉಡುಪು ಧರಿಸಿ ಮಗಳು ಮಿರಾಬೆಲ್​ ವಿಮಾನದಿಂದ ಇಳಿಯುತ್ತಿರುವ ದೃಶ್ಯ ನೋಡುಗರ ಪ್ರಶಂಸೆಗೆ ಪಾತ್ರವಾಗಿದೆ. ವ್ಯಾನ್ಸ್​ ಪತ್ನಿ ಉಷಾ ಅವರು ಆಂಧ್ರಪ್ರದೇಶದ ತೆಲುಗು ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು. ಬಳಿಕ ವ್ಯಾನ್ಸ್​ ಕುಟುಂಬ ದೆಹಲಿಯಲ್ಲಿರುವ ಸ್ವಾಮಿನಾರಾಯಣ ಅಕ್ಷರಧಾಮ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ಭೇಟಿ ವೇಳೆ ದೇವಸ್ಥಾನದಲ್ಲಿ ಲಭಿಸಿದ ಆತಿಥ್ಯ ಮತ್ತು ದೇವಸ್ಥಾನದ ವಾಸ್ತುಶಿಲ್ಪದ ಬಗ್ಗೆ ಹೊಗಳಿದರು ಎಂದು ಸ್ವಾಮಿನಾರಾಯಣ ಅಕ್ಷರಧಾಮ ದೇವಸ್ಥಾನ ಹೇಳಿದೆ. ಇದಾದ ಬಳಿಕ ಸಂಜೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮೋದಿ ಸರ್ಕಾರದ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ವ್ಯಾನ್ಸ್​​ ಪ್ರಧಾನಿ ಮೋದಿಯವರ ಆತಿಥ್ಯ ಸ್ವೀಕರಿಸಿದ್ದಾರೆ.

Comments (0)

Your email address will not be published. Required fields are marked *

Back to top button