ಜಿಲ್ಲೆ

‘ನಾನು 10ನೇ ತರಗತಿ ಪಾಸ್​ ಆದ್ರೆ ಮಾತ್ರ ನನ್ನ ಹುಡುಗಿ ಲವ್​ ಮಾಡ್ತಾಳೆ’ SSLC ವಿದ್ಯಾರ್ಥಿ ಅಳಲು

ಬೆಳಗಾವಿ: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯುತ್ತಿದ್ದು, ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ವಿಚಿತ್ರ ಬೇಡಿಕೆಯಿಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ  ಮೌಲ್ಯಮಾಪನ ಕೇಂದ್ರಗಳಲ್ಲಿಕಂಡು ಬಂದಿದೆ.

ನನ್ನನ್ನು ಪಾಸ್ ಮಾಡಿದ್ರೆ ಅಷ್ಟೇ ನನ್ನ ಲವ್ ಮಾಡುತ್ತೇನೆ ಅಂದಿದ್ದಾಳೆ. ಪ್ಲೀಸ್ ಪಾಸ್ ಮಾಡಿ ನನ್ನ ಲವ್ ನಿಮ್ಮ ಕೈಯಲ್ಲಿದೆ. ಈ 500 ರೂ. ಹಣದಲ್ಲಿ ಚಹಾ ಕುಡಿರಿ ಸರ್ ಎಂದು 500 ರೂ. ನೋಟು ಇಟ್ಟು ವಿದ್ಯಾರ್ಥಿಯೊಬ್ಬ ವಿಚಿತ್ರ ಬೇಡಿಕೆಯಿಟ್ಟಿರುವ ಬರವಣಿಗೆ ಪತ್ತೆಯಾಗಿದೆ.

ಪ್ಲೀಸ್ ಮಿಸ್, ಸರ್ ನನ್ನನ್ನು ಪಾಸ್ ಮಾಡಿ. ನೀವು ಪಾಸ್ ಮಾಡದಿದ್ದರೆ ನನ್ನ ಅಪ್ಪ ಅಮ್ಮ ಮುಂದೆ ಕಾಲೇಜಿಗೆ ಕಳಿಸಲ್ಲ ಎಂದು ಬರೆದಿದ್ದು, ಇನ್ನೊಂದು ಪತ್ರಿಕೆಯಲ್ಲಿ ನನ್ನ ಪಾಸ್ ಮಾಡಿದ್ರೆ ಹಣ ಕೊಡುತ್ತೇನೆ ಎಂದು ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ಬರೆದಿದ್ದಾರೆ.

ಹೀಗೆ ಹಲವು ಚಿತ್ರ, ವಿಚಿತ್ರ ಉತ್ತರ ಬರೆಯುವ ಮೂಲಕ ಬೇಡಿಕೆಯಿಟ್ಟಿರುವ ವಿದ್ಯಾರ್ಥಿಗಳ ಬರವಣಿಗೆಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

Comments (0)

Your email address will not be published. Required fields are marked *

Back to top button