ಕ್ರೈಂ ಸ್ಟೋರಿ

ಬೆಂಗಳೂರು ನಿವಾಸಿಗಳೇ ಎಚ್ಚರ..ಎಚ್ಚರ..

ಬೆಂಗಳೂರು ನಗರವಾಸಿಗಳೇ ಎಚ್ಚರ..ಎಚ್ಚರ.. ಬೇಸಿಗೆ ರಜೆ ಕಳೆಯಲು ತಮ್ಮೂರಿನತ್ತ ಹೋಗ್ತಿದ್ದೀರಾ?. ಮನೆಗೆ ಬೀಗ ಹಾಕಿ ಹೋಗುವ ಮುನ್ನ ಎಚ್ಚರವಹಿಸಿ. ದೀರ್ಘ ಅವಧಿಗೆ ಪ್ರವಾಸ ತೆರಳುವಾಗಲೂ ಅಲರ್ಟ್ ಆಗಿರಿ.

ಬೆಲೆ ಬಾಳುವ ವಸ್ತುಗಳು ಮನೆಯಲ್ಲಿದ್ದರೆ ಅಪಾಯ ತಪ್ಪಿದ್ದಲ್ಲ. ಮನೆಯ ಭದ್ರತೆ ವಿಚಾರದಲ್ಲಿ ಕಾಂಪ್ರಮೈಸ್ ಬೇಡ್ವೇಬೇಡ. ಯಾಕಂದ್ರೆ, ​ಬೆಂಗಳೂರಿನಂತಹ ನಗರಗಳಲ್ಲಿ ಕಳ್ಳಕಾಕರ ಭೀತಿ ಹೆಚ್ಚಾಗಿದ್ದು,
ಮನೆಯ ಭದ್ರತೆ, ಸುರಕ್ಷತೆ ವಿಚಾರದಲ್ಲಿ ಜಾಗರೂಕರಾಗಿರಿ ಅಂತಾ, ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಎಚ್ಚರಿಕೆ ನೀಡಿದ್ದಾರೆ. ದೀರ್ಘ ಅವಧಿಯ ಪ್ರವಾಸವಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ. ಮಾಹಿತಿ ನೀಡಿದಾಗ ಪೊಲೀಸರಿಗೆ ಗಸ್ತು ನಡೆಸುವುದು ಸುಲಭವಾಗುತ್ತದೆ. ಬೆಲೆ ಬಾಳುವ ವಸ್ತುಗಳನ್ನು ಬ್ಯಾಂಕ್​ ಅಥವಾ ಲಾಕರ್​​ನಲ್ಲಿಟ್ಟು ಹೋಗಿ. ಮನೆಗೆ ಗುಣಮಟ್ಟದ ಬೀಗ, ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಿ. ಯಾವುದೇ ಕಾರಣಕ್ಕೂ, ಮನೆಯ ಬೀಗದ ಕೀಯನ್ನು ಮನೆ ಹೊರಾಂಡದಲ್ಲಿಟ್ಟು ಹೋಗಬೇಡಿ. ಪೂರ್ವಾಪರ ತಿಳಿದುಕೊಂಡು ಮನೆ ಕೆಲಸದವರ ನೇಮಕ ಮಾಡಿಕೊಳ್ಳಿ ಅಂತಾ ಎಚ್ಚರಿಕೆ ನೀಡಿದ್ದಾರೆ.

Comments (0)

Your email address will not be published. Required fields are marked *

Back to top button