ಮನರಂಜನೆ

ಸಖತ್​ ಖುಷಿಯಲ್ಲಿದ್ದಾರೆ ಸ್ಯಾಂಡಲ್​ವುಡ್​ ಸ್ಟಾರ್​ ದಂಪತಿ

ಸ್ಯಾಂಡಲ್​ವುಡ್ ಸ್ಟಾರ್​ ಜೋಡಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಇತ್ತೀಚೆಗಷ್ಟೇ ಮುದ್ದಾದ ಹೆಣ್ಣು ಮಗುವನ್ನು ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ತಮ್ಮ ಮನೆಗೆ ಅದ್ಧೂರಿಯಾಗಿ ಬರಮಾಡಿಕೊಂಡಿದ್ದರು.

ಆದ್ರೆ ಇದೀಗ ನಟಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರ ಮುದ್ದಾದ ಮಗಳಿಗೆ 7 ತಿಂಗಳು ತುಂಬಿದೆ. ಇದೇ ಖುಷಿಯಲ್ಲಿ ದಂಪತಿ ಸ್ಪೆಷಲ್ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಹೌದು, ಸ್ಟಾರ್ ದಂಪತಿ ಲವ್ ಮಾಕ್ಟೇಲ್ ಸಿನಿಮಾದ ಲವ್​ ಯೂ ಕಂದ ಎಂದು ಹಾಡು ಹಾಡಿದ್ದಾರೆ. ಅದಕ್ಕೆ ಮಿಲನಾ ನಾಗರಾಜ್​ ಕಂದಾ ಸಖತ್​ ಆಗಿ ರೆಸ್ಪಾನ್ಸ್ ಮಾಡಿದೆ.

ಇದೇ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು ಎಷ್ಟು ಕ್ಯೂಟ್​ ಆಗಿದ್ದಾರೆ ಈ ಪರಿ.. ಸಖತ್​ ಚಿಟ್ಟೆ ಹಾಗೇ ಇರೋ ಪರಿಗೆ ದೃಷ್ಟಿ ತೆಗೆಯಿರಿ ಅಂತ ಕಾಮೆಂಟ್ಸ್​ ಹಾಕಿದ್ದಾರೆ.

ಈ ಹಿಂದೆ ಶಿವರಾತ್ರಿ ಹಬ್ಬದ ದಿನ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಅಂತ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟಿತ್ತು ಈ ಜೋಡಿ. ಇದಾದ ಬಳಿಕ ಗರ್ಭಿಣಿಯಾಗಿದ್ದ ಮಿಲನಾ ನಾಗರಾಜ್ ಅವರು ಹೊಸ ಹೊಸ ಬೇಬಿ ಬಂಪ್​ ಲುಕ್​ನಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುವ ಮೂಲಕ ಖುಷಿ ಪಡುತ್ತಿದ್ದರು. ಸೆಪ್ಟೆಂಬರ್ 05ರಂದು ಮುಂಜಾನೆ ನಟಿ ಮಿಲನಾ ನಾಗರಾಜ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಇದಾದ ಬಳಿಕ ಸೆಪ್ಟೆಂಬರ್ 27ರಂದು ಮುದ್ದಾದ ಮಗಳಾದ ಪರಿಯನ್ನು ತಮ್ಮ ನಿವಾಸಕ್ಕೆ ಗ್ರ್ಯಾಂಡ್​ ಆಗಿ ವೆಲ್​ಕಮ್​ ಮಾಡಿದ್ದರು. ಆ ವಿಡಿಯೋವನ್ನು ದಂಪತಿ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋ ನೋಡಿದ ಫ್ಯಾನ್ಸ್​ ಮುದ್ದಾದ ಪರಿಗೆ ಶುಭ ಹಾರೈಸುತ್ತಿದ್ದಾರೆ. ಮುದ್ದಾದ ನಿದಿಮಾ ಅಂತ ಕಾಮೆಂಟ್ಸ್​ ಹಾಕಿದ್ದರು.

Comments (0)

Your email address will not be published. Required fields are marked *

Back to top button
Verified by MonsterInsights