ಮನರಂಜನೆ

ಫಿನಾಲೆ ತಲುಪಲು ಬಂಪರ್ ಚಾನ್ಸ್ ನೀಡಿದ ಬಿಗ್ ಬಾಸ್

Big boss 10 : ಬಿಗ್ ಬಾಸ್ ಕನ್ನಡ ಸೀಸನ್ 10 ಈಗಾಗಲೇ 87 ದಿನಗಳು ಕಳೆದಿದೆ. ಈ ಘೋಷಣೆ ಬಳಿಕ ದೊಡ್ಡ ಮನೆಯಲ್ಲಿ ಪೈಪೋಟಿ ಜೋರಾಗಿದೆ. ವಿನಯ್ ಗೌಡ, ಸಂಗೀತಾ ಶೃಂಗೇರಿ , ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್, ತನಿಷಾ ಕುಪ್ಪಂಡ , ತುಕಾಲಿ ಸಂತು, ವರ್ತೂರ್ ಸಂತೋಷ್ ಹಾಗೂ ನಮ್ರತಾ ಗೌಡ ನಡುವೆ ಸ್ಪರ್ಧೆ ನಡೆಯುತ್ತಿದೆ. ಯಾರಿಗೆ ಫಿನಾಲೆಯ ಟಿಕೇಟ್ ಸಿಗಲಿದೆ ಎಂಬುವುದು ಬಾರಿ ಕುತುಹಲ ಮೂಡಿಸಿದೆ.

 

ಇಷ್ಟು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಕಠಿಣ ಸ್ಪರ್ಧೆ ನೀಡಿದ ಎಲ್ಲರಿಗೂ ಫಿನಾಲೆ ತಲುಪಬೇಕು ಎಂಬ ಆಸೆ ಇದೆ. ವೀಕ್ಷಕರಿಂದ ಹೆಚ್ಚು ವೋಟ್ ಸಿಕ್ಕರೆ ಫಿನಾಲೆ ಎಂಟ್ರಿ ಪಡೆಯಬಹುದು. ಅದರ ಜೊತೆಗೆ  ಸ್ಪರ್ಧಿಗಳಿಗೆ  ಬಿಗ್ ಬಾಸ್ ಒಂದು ಆಫರ್ ನೀಡಿದ್ದಾರೆ.  ಈ ವಾರದ ಟಾಸ್ಕ್​ಗಳನ್ನು ಗೆದ್ದು ,ವಾರದ ಕೊನೆಯಲ್ಲಿ ಅತಿ ಹೆಚ್ಚು ಅಂಕ ಪಡೆಯುವ ಸದಸ್ಯರ ಪೈಕಿ ಒಬ್ಬರು ಫಿನಾಲೆ ಬಾರಕ್ಕೆ ನೇರವಾಗಿ ಟಿಕೇಟ್ ಪಡೆಯುತ್ತಾರೆ. ಎಂದು ಬಿಗ್ ಬಾಸ್ ಘೋಷಿಸಿದ್ದಾರೆ. ಈ ಟಾಸ್ಕ್ ಘೋಷಣೆ ಮಾಡಿದ ಬಳಿಕ ಪೈಪೋಟಿ ಜೋರಾಗಿದೆ.

 

Comments (0)

Your email address will not be published. Required fields are marked *

Back to top button