ಜಿಲ್ಲೆ

ಹಾವೇರಿ ಎಸ್​ಪಿ ಅಂಶುಕುಮಾರ್​ ಸೇರಿ ಮೂವರಿಗೆ ಸಿಎಂ ಮೆಡಲ್​

ಬೆಂಗಳೂರು: ರಾಜ್ಯ ಸರ್ಕಾರ 2024ನೇ ಸಾಲಿನ ಮುಖ್ಯಮಂತ್ರಿ ಪದಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪೋಲಿಸ್​ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಪೋಲಿಸ್​​​ ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಲಾಗುತ್ತೆ.

ಇನ್ನು ಮುಖ್ಯಮಂತ್ರಿ ಪದಕಕ್ಕೆ ಹಾವೇರಿ ಜಿಲ್ಲಾ ಎಸ್​ಪಿ ಅಂಶುಕುಮಾರ್​​, ಶಿಗ್ಗಾಂವಿ ಪೋಲಿಸ್​ ಠಾಣೆಯ ಸಿಬ್ಬಂದಿ, ಎಚ್​ ತಿಪ್ಪೆಸ್ವಾಮಿ ಹಾಗೂ ಸವಣೂರು ಪೋಲಿಸ್​​ ಠಾಣೆಯ ಬಸವರಾಜ ಡಿ ಮಲ್ಲೂರ್​​​ ಅವರಿಗೂ ಸಿಎಂ ಪದಕ ಲಭಿಸಿದೆ.

ಅಲ್ಲದೇ ರಾಜ್ಯದ ಮೂವರು ಪೋಲಿಸ್​ ಅಧಿಕಾರಿಗಳು ಸೇರಿಂದೆ ಒಟ್ಟು 197 ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಲಭಿಸಿದೆ.

Comments (0)

Your email address will not be published. Required fields are marked *

Back to top button