ಜಿಲ್ಲೆ

ಚಿಕ್ಕೋಡಿ ಜಿಲ್ಲೆಯಾಗಿ ಘೋಷಣೆ ಮಾಡಿ; ಪ್ರಕಾಶ್ ಹುಕ್ಕೇರಿ

ಬೆಂಗಳೂರು: ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಕಾಂಗ್ರೆಸ್​ ಸದಸ್ಯ ಪ್ರಕಾಶ್​ ಹುಕ್ಕೇರಿ ಪರಿಷತ್​ನಲ್ಲಿ ಒತ್ತಾಯಿಸಿದ್ದಾರೆ.

ಬಜೆಟ್​ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ಅತಿಡೊಡ್ಡ ಪಟ್ಟಣವಾಗಿರುವ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು, ಚಿಕ್ಕೋಡಿ ಗಡಿಭಾಗದ ಜನರು ತಮ್ಮ ಕೆಲಸ ಕಾರ್ಯಗಳಿಗೆ 190 ಕಿ.ಮೀ ದೂರದ ಬೆಳಗಾವಿಗೆ ಬರಬೇಕಾಗಿದೆ. ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಬೆಳಗಾವಿ ಸೂಕ್ತ ಪಟ್ಟಣವಾಗಿದೆ. ಇದರಿಂದ ಆ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಪ್ರಕಾಶ್ ಬಾಬಣ್ಣ ಆಗ್ರಹಿಸಿದರು.

Comments (0)

Your email address will not be published. Required fields are marked *

Back to top button