Monday, June 23, 2025
26.3 C
Bengaluru
Google search engine
LIVE
ಮನೆ#Exclusive NewsTop Newsತರಗತಿಯಲ್ಲೇ ವಿದ್ಯಾರ್ಥಿಯನ್ನು ವರಿಸಿದ ಪ್ರಾಧ್ಯಾಪಕಿ! ತರಗತಿಯಲ್ಲಿ ನಡೆದ ಮದುವೆ ವಿಡಿಯೋ ವೈರಲ್.!

ತರಗತಿಯಲ್ಲೇ ವಿದ್ಯಾರ್ಥಿಯನ್ನು ವರಿಸಿದ ಪ್ರಾಧ್ಯಾಪಕಿ! ತರಗತಿಯಲ್ಲಿ ನಡೆದ ಮದುವೆ ವಿಡಿಯೋ ವೈರಲ್.!

ಪಶ್ಚಿಮ ಬಂಗಾಳ: ತರಗತಿಯಲ್ಲಿ ಪ್ರಾಧ್ಯಾಪಕಿ ಹಾಗೂ ವಿದ್ಯಾರ್ಥಿಯೊಬ್ಬ ತರಗತಿಯಲ್ಲಿ ಮದುವೆ ಆಗಿದ್ದಾರೆ ಎನ್ನಲಾದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪ್ರಾಧ್ಯಾಪಕಿ ಹಾಗೂ ವಿದ್ಯಾರ್ಥಿ ತರಗತಿಯೊಳಗೆ ಹೂಮಾಲೆಯನ್ನು ಪರಸ್ಪರ ಬದದಲಾವಣೆ ಮಾಡಿಕೊಳ್ಳುತ್ತಿರುವುದು, ಹಣೆಗೆ ಸಿಂಧೂರು ಇಡುತ್ತಿರುವುದು ಸೇರಿ ಹಿಂದೂ-ಬಂಗಾಳಿ ಸಂಪ್ರದಾಯದಂತೆ ಮದುವೆ ವಿಧಿಗಳನ್ನು ನಡೆಸುತ್ತಿರುವುದು’ ವೈರಲ್ ಆಗಿರುವ ವಿಡಿಯೋದಲ್ಲಿ ಕಂಡು ಬಂದಿದೆ. ಈ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿರುವ ಮೌಲಾನಾ ಅಬುಲ್ ಕಲಾಂ ಅಜಾದ್ ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ತರಗತಿಯಲ್ಲಿ ಪ್ರಾಧ್ಯಾಪಕಿ ಹಾಗೂ ವಿದ್ಯಾರ್ಥಿ ಮದುವೆ ಆಗಿದೆ ಎನ್ನಲಾದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕೂಡಲೇ ಎಚ್ಚೆತ್ತ ವಿಶ್ವವಿದ್ಯಾಲಯ, ಮಧ್ಯಪ್ರವೇಶಿಸಿ ಈ ವಿಷಯವನ್ನು ತನಿಖೆ ಮಾಡಲು ಮೂರು ಸದಸ್ಯರ ವಿಚಾರಣಾ ಸಮಿತಿಯನ್ನು ರಚಿಸಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಪ್ರಾಧ್ಯಾಪಕಿಗೆ ಕಡ್ಡಾಯ ರಜೆ ಸೂಚಿಸಿದೆ. ಹಾಗೂ ಕೆಲ ಸಮಯ ತರಗತಿಗೆ ಹಾಜರಾಗದಂತೆ ವಿದ್ಯಾರ್ಥಿಗೆ ಆದೇಶಿಸಿದೆ.

ತರಗತಿಯಲ್ಲಿ ಪ್ರಾಧ್ಯಾಪಕಿ ಹಾಗೂ ವಿದ್ಯಾರ್ಥಿ ಮದುವೆ ಆಗಿದೆ ಎನ್ನಲಾದ ವಿಡಿಯೋ ತುಣುಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕೂಡಲೇ ಎಚ್ಚೆತ್ತ ವಿಶ್ವವಿದ್ಯಾಲಯ, ಮಧ್ಯಪ್ರವೇಶಿಸಿ ಈ ವಿಷಯವನ್ನು ತನಿಖೆ ಮಾಡಲು ಮೂರು ಸದಸ್ಯರ ವಿಚಾರಣಾ ಸಮಿತಿಯನ್ನು ರಚಿಸಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಪ್ರಾಧ್ಯಾಪಕಿಗೆ ಕಡ್ಡಾಯ ರಜೆ ಸೂಚಿಸಿದೆ. ಹಾಗೂ ಕೆಲ ಸಮಯ ತರಗತಿಗೆ ಹಾಜರಾಗದಂತೆ ವಿದ್ಯಾರ್ಥಿಗೆ ಆದೇಶಿಸಿದೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿ ಪ್ರಾಧ್ಯಾಪಕಿ, ‘ಇದೊಂದು ಮನಸ್ಸಿಗೆ ಸಂಬಂಧಿಸಿದ ವಿಷಯ ವಸ್ತು ಹೊಂದಿರುವ ನಾಟಕವಾಗಿದೆ. ಪಠ್ಯದ ಭಾಗವಾಗಿ ಮದುವೆ ಸನ್ನಿವೇಶವನ್ನು ಸೃಷ್ಟಿಸಲಾಗಿದೆ. ಇದರ ಹಿಂದೆ ಯಾವುದೇ ದುರುದ್ಧೇಶ ಇಲ್ಲ. ದಾಖಲೆಗಾಗಿ ಮಾಡಲಾಗಿದ್ದ ವಿಡಿಯೋ ವೈರಲ್ ಆಗಿದೆ’ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments