#Exclusive NewsHealthTop Newsಸುದ್ದಿ

ಭಾರತದಲ್ಲಿ ಮೊದಲ ಪ್ರಕರಣ ; ಬೆಂಗಳೂರಿಗೆ ಎಂಟ್ರಿ ಕೊಟ್ಟೆ ಬಿಟ್ತು ಮಹಾಮಾರಿ…!

ಬೆಂಗಳೂರು: ಎಂಟು ತಿಂಗಳ ಮಗುವಿನಲ್ಲಿ ಹ್ಯೂಮನ್ ಮೆಟಾಪ್ನ್ಯೂಮೋವೈರಸ್  ಮೊದಲ ಪ್ರಕರಣವನ್ನು ಬೆಂಗಳೂರು ನಗರದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಪತ್ತೆ ಮಾಡಿದೆ.ಸದ್ಯ ಚೀನಾದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಹ್ಯೂಮನ್ ಮೆಟಾನ್ಯೂಮೋ ವೈರಸ್ ಬೆಂಗಳೂರಿನ  ಪತ್ತೆಯಾಗಿದೆ.

ಯಾವುದೇ ಟ್ರಾವೆಲ್‌ ಹಿಸ್ಟರಿ ಇಲ್ಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗುವಿನಲ್ಲಿ ಪತ್ತೆಯಾಗಿದೆ. ಮಗುವಿಗೆ ಜ್ವರ (Fever) ಬಂದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಈ ವೇಳೆ ರಕ್ತ ಪರೀಕ್ಷೆ ಮಾಡಿಸಿದಾಗ ಹೆಚ್‌ಎಂವಿಪಿ ವೈರಸ್ ಇರುವುದು ದೃಢಪಟ್ಟಿದೆ.ಸದ್ಯಕ್ಕೆ ಒಂದು ಕೇಸ್ ಪತ್ತೆಯಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಕಡೆ ಎಲ್ಲೆಲ್ಲಿ ಈ ರೀತಿಯ ಸೋಂಕು ಪತ್ತೆಯಾಗಿದೆ ಎಂಬುದರ ಮಾಹಿತಿ ಕಲೆ ಹಾಕಲು ಆರೋಗ್ಯ ಇಲಾಖೆ ಮುಂದಾಗಿದೆ.

ಹೊಸ ವೈರಸ್ ಚೀನಾದಲ್ಲಿ ವೇಗವಾಗಿ ಹರಡುತ್ತಿದೆ ಎಂದು ಅನೇಕ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ತಿಳಿಸಿವೆ. ಚೀನಾದ ಆಸ್ಪತ್ರೆಗಳು ಮತ್ತು ಸ್ಮಶಾನಗಳು ಜನರಿಂದ ತುಂಬಿವೆ ಎಂದು ಚೀನಾದ ಮೇಲೆ ಕಣ್ಣಿಟ್ಟಿರುವ ಹಲವರು ಹೇಳಿಕೊಳ್ಳುತ್ತಿದ್ದಾರೆ.

Comments (0)

Your email address will not be published. Required fields are marked *

Back to top button