#Exclusive NewsHealthSportsTop Newsಕ್ರಿಕೆಟ್ಸುದ್ದಿ

ವಿನೋದ್ ಕಾಂಬ್ಳಿ ಆರೋಗ್ಯದಲ್ಲಿ ಚೇತರಿಕೆ : ಆಸ್ಪತ್ರೆಯಲ್ಲೆ ನೃತ್ಯ..!

ನವದೆಹಲಿ ; ಅನಾರೋಗ್ಯದ ಹಿನ್ನೆಲೆಯಲ್ಲಿ ಥಾಣೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಾರತದ ಮಾಜಿ ಬ್ಯಾಟ್ಸ್‌ಮನ್ ವಿನೋದ್ ಕಾಂಬ್ಳಿ ಅವರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಆಸ್ಪತ್ರೆಯಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ನೃತ್ಯ ಶೈಲಿಯು ಅವರ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಗತಿಯನ್ನು ತೋರಿಸುತ್ತದೆ. ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಸುಖ್ವಿಂದರ್ ಸಿಂಗ್ ಹಾಡಿರುವ ಚಕ್ ದೇ ಇಂಡಿಯಾ… ಹಾಡಿಗೆ ಕಾಂಬ್ಳಿ ನೃತ್ಯ ಮಾಡುತ್ತಿದ್ದಾರೆ.

ಆಸ್ಪತ್ರೆಯಲ್ಲಿ ಮಹಿಳೆಯೊಂದಿಗೆ ನೃತ್ಯ ಮಾಡುತ್ತಿರುವ ವಿನೋದ್ ಕಾಂಬ್ಳಿ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರೊಂದಿಗೆ ಅವರ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡು ಬಂದಿರುವುದು ಬಹಿರಂಗವಾಗಿದೆ.

ಇನ್ನು ಆಕೃತಿ ಆಸ್ಪತ್ರೆಯ ಉಸ್ತುವಾರಿಯಾಗಿರುವ ಎಸ್.ಸಿಂಗ್ ಅವರು ಕಾಂಬ್ಳಿಗೆ ಅವರಿಗೆ ಜೀವನ ಪರ್ಯಂತ ಉಚಿತ ಚಿಕಿತ್ಸೆ ನೀಡಲು ನಿರ್ಧರಿಸಿದ್ದಾರೆ ಎಂದು ಡಾ. ವಿವೇಕ್ ತ್ರಿವೇದಿ ತಿಳಿಸಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದ ಮಾಜಿ ಆಟಗಾರ ಯಾವುದೇ ಚಿಕಿತ್ಸೆಯ ಬಗ್ಗೆ ಚಿಂತಿಸಬೇಕಿಲ್ಲ.

 

Comments (0)

Your email address will not be published. Required fields are marked *

Back to top button