#Exclusive NewsTop Newsದೇಶ/ವಿದೇಶಸುದ್ದಿ

ಮಂತ್ರಾಲಯಕ್ಕೆ ಹರಿದು ಬರುತ್ತಿರುವ ಸಾಲು… ಸಾಲು… ಭಕ್ತರ ದಂಡು…..!

ಕ್ರಿಸ್​ಮಸ್   ಮತ್ತು ಹೊಸ ವರ್ಷದ  ರಜೆ  ಇರುವ ಕಾರಣ   ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ   ಹರಿದುಬರುತ್ತಿರುವ ಭಕ್ತಸಾಗರ. ಮಂತ್ರಾಲಯದಲ್ಲಿ ಭಕ್ತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಕಾಣುತ್ತಿದೆ. ರಾಯರ ಸನ್ನಿಧಿ ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಮಂತ್ರಾಲಯದ ರಾಯರ ಮಠದಲ್ಲಿ ಪ್ರತಿನಿತ್ಯ ವಿವಿಧ ರೀತಿಯ ಸೇವೆಗಳನ್ನು ರಾಯರಿಗೆ ಆಯೋಜಿಸಲಾಗುತ್ತದೆ. ಡಿಸೆಂಬರ್ 25ರಿಂದ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಜನವರಿ 2ರವರೆಗೂ ಇದೇ ರೀತಿ ಮುಂದುವರೆಯಲಿದೆ ಎಂದು ಶ್ರೀ ಮಠ ಮಾಹಿತಿ ನೀಡಿದೆ. ಮಠದ ರೂಂಗಳಿಗೆ ಆನ್​ಲೈನ್​ ಬುಕಿಂಗ್ ಬಂದ್ ಮಾಡಲಾಗಿದ್ದು, ಆಫ್​ಲೈನ್​ ಬುಕಿಂಗ್​ಗೆ ಅವಕಾಶ ಕಲ್ಪಿಸಲಾಗಿದೆ. ಮಂತ್ರಾಲಯದಲ್ಲಿ ಎಲ್ಲಿ ನೋಡಿದರಲ್ಲಿ ಜನರು ತುಂಬಿ ತುಳುಕುತ್ತಿರುವ ದೃಶ್ಯ ಇಲ್ಲಿದೆ.

Comments (0)

Your email address will not be published. Required fields are marked *

Back to top button