Top Newsಕ್ರೈಂ ಸ್ಟೋರಿಸುದ್ದಿ
ಸ್ನೇಹಿತರ ಮುಂದೆಯೇ ನಾಲೆಯಲ್ಲಿ ಕೊಚ್ಚಿ ಹೋದ ಯುವಕ

ಮಂಡ್ಯ: ಈಜಲು ಹೋಗಿ ನಾಲೆಯಲ್ಲಿ ಯುವಕ ಕೊಚ್ಚಿ ಹೋದ ಘಟನೆ ಯಲಿಯೂರು ಬಳಿ ನಡೆದಿದೆ. ಯಶ್ವಂತ್ (20) ನಾಲೆಯಲ್ಲಿ ಕೊಚ್ಚಿ ಹೋದ ಮೃತದುರ್ದೈವಿ.
ನಾಲೆಯಲ್ಲಿ ಕೊಚ್ಚಿ ಹೋದ ಯುವಕ ಮದ್ದೂರಿನ ಸೋಮನಹಳ್ಳಿ ಗ್ರಾಮದ ಅನಿಲ್ ಕುಮಾರ್ ಹಾಗೂ ಉಮಾ ದಂಪತಿಯ ಪುತ್ರನಾಗಿದ್ದಾನೆ. ಯಶ್ವಂತ್ ಮಂಡ್ಯದ ಕಾವೇರಿ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಬಿಇ ಓದುತ್ತಿದ್ದ. ಕಾಲೇಜಿನಿಂದ ಮಧ್ಯಾಹ್ನ ಸ್ನೇಹಿತರೊಡನೆ ಈಜಲು ತೆರಳಿದ್ದಾಗ ಈ ಘಟನೆ ನಡೆದಿದೆ.
ಯಶ್ವಂತ್ ಹಾಗೂ ಇಬ್ಬರು ಸ್ನೇಹಿತರು ಈಜು ಬಾರದಿದ್ದರೂ ನಾಲೆಗೆ ಇಳಿದಿದ್ದರಂತೆ. ಆದರೆ ಇದೇ ವೇಳೆ ನಾಲೆಯಲ್ಲಿ ನೀರು ರಭಸವಾಗಿದ್ದರಿಂದ ಮೂವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಇನ್ನು, ಅಲ್ಲೇಯಿದ್ದ ಇಬ್ಬರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಆದರೆ ಅದೇ ಸ್ನೇಹಿತರ ಕಣ್ಣು ಮುಂದೆಯೇ ಯಶ್ವಂತ್ ಕೊಚ್ಚಿ ಹೋಗಿದ್ದಾನೆ. ಈ ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಕಾರ್ಯಾಚರಣೆ ನಡೆಸುತ್ತಿದ್ದಾರೆ.




