Top Newsವೈರಲ್ ನ್ಯೂಸ್ಸುದ್ದಿ

ನಾಯಿ ಬಾಲಕ್ಕೆ ಪಟಾಕಿ ಕಟ್ಟಿ ಬೆಂಕಿ ಇಟ್ಟ ಯುವಕರ ಗುಂಪು: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಜನರು

ದೀಪಾವಳಿ ಸಂದರ್ಭದಲ್ಲಿ ಪಟಾಕಿಯಿಂದ ಪ್ರಾಣಿ ಪಕ್ಷಿಗಳು ಸಾಕಷ್ಟು ತೊಂದರೆ ಅನುಭವಿಸುತ್ತವೆ. ಅದರಲ್ಲೂ ಹೆಚ್ಚಿನ ಸಾಕು ಪ್ರಾಣಿಗಳು ಭಯಪಟ್ಟು ಮನೆ ಬಿಟ್ಟು ಓಡಿ ಹೋಗುವ ಪ್ರಸಂಗಗಳೂ ಇವೆ. ಆದರೆ ಕೆಲವರು ಈ ಸಾಕು ಪ್ರಾಣಿಗಳ ಭಯವನ್ನು ಸಂಭ್ರಮಿಸುವ ಕ್ರೂರ ಮನಸ್ಸಿನವರಾಗಿರುತ್ತಾರೆ ಎಂಬುದಕ್ಕೆ ಸಾಕ್ಷಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೊ.

ಯುವಕನೊಬ್ಬ ದೀಪಾವಳಿ ಆಚರಿಸುವ ನೆಪದಲ್ಲಿ ನಾಯಿಯ ಬಾಲಕ್ಕೆ ಪಟಾಕಿಗಳನ್ನು ಕಟ್ಟಿ ಬೆಂಕಿ ಕೊಟ್ಟಿದ್ದಾನೆ. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಎಕ್ಸ್‌ನಲ್ಲಿ ವೈರಲ್ ಆಗಿರುವ ಆಘಾತಕಾರಿ ಈ ವಿಡಿಯೊಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದು, ಅನೇಕರು ಈ ದುಷ್ಕೃತ್ಯ ಎಸಗಿರುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ದೀಪಾವಳಿ ಆಚರಿಸುವ ಸೋಗಿನಲ್ಲಿ ಕೆಲವು ಯುವಕರು ಮೂಕ ಪ್ರಾಣಿಗೆ ಭಯ ಉಂಟು ಮಾಡುವಂತೆ ಮಾಡಿದರು. ನಾಯಿಯ ಬಾಲಕ್ಕೆ ಪಟಾಕಿ ಕಟ್ಟಿ ಅದಕ್ಕೆ ಬೆಂಕಿ ಹಚ್ಚಿದ್ದಾರೆ. ಅದು ಉರಿಯಲು ಪ್ರಾರಂಭಿಸುತ್ತಿದ್ದಂತೆ ನಾಯಿ ಭಯಭೀತವಾಗಿ ಎಲ್ಲೆಂದರಲ್ಲಿ ಓದಲಾರಂಭಿಸಿದೆ. ಈ ಘಟನೆಯಲ್ಲಿ ನಾಯಿಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.

ಈ ಘಟನೆ ಎಲ್ಲಿ ನಡೆದಿರುವುದು ಎನ್ನುವುದು ತಿಳಿದು ಬಂದಿಲ್ಲ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಸಾಕಷ್ಟು ಮಂದಿ ಯುವಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

Comments (0)

Your email address will not be published. Required fields are marked *

Back to top button