Top Newsಕ್ರೈಂ ಸ್ಟೋರಿಸುದ್ದಿ

ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ 3 ಆರೋಪಿಗಳಿಗೆ ಜಾಮೀನು

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ  ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಆಗಿದೆ. ಕೇಶವಮೂರ್ತಿಗೆ ಹೈಕೋರ್ಟ್‌ನಿಂದ  ಕಾರ್ತಿಕ್‌, ನಿಖಿಲ್‌ ನಾಯಕ್‌ಗೆ 57ನೇ ಸಿಸಿಹೆಚ್ ಕೋರ್ಟ್ ನಿಂದ ಜಾಮೀನು ಸಿಕ್ಕಿದೆ.

ದರ್ಶನ್ ಮತ್ತು ಗ್ಯಾಂಗ್​ನಿಂದ ರೇಣುಕಾಸ್ವಾಮಿ ಹತ್ಯೆ ನಡೆಯಿತು ಎಂಬ ಆರೋಪ ಇದೆ. ಘಟನೆ ನಡೆದ ಬಳಿಕ ಕೆಲವರು ಸೆರೆಂಡರ್​ ಆಗಿದ್ದರು. ಆ ಪೈಕಿ ಕಾರ್ತಿಕ್​, ನಿಖಿಲ್​ ನಾಯಕ್ ಮತ್ತು ಕೇಶವಮೂರ್ತಿ ಪ್ರಮುಖರು. ಈ ಕೇಸ್​ನಲ್ಲಿ ಕಾರ್ತಿಕ್​ ಎ15, ಕೇಶವಮೂರ್ತಿ ಎ16 ಹಾಗೂ ನಿಖಿಲ್ ನಾಯಕ್​ ಎ17 ಆಗಿದ್ದಾರೆ. ಈ ಮೂವರಿಗೂ ಜಾಮೀನು ನೀಡಲಾಗಿದ್ದು, ಸದ್ಯಕ್ಕೆ ರಿಲೀಫ್ ಸಿಕ್ಕಂತಾಗಿದೆ.

57ನೇ ಸಿಸಿಹೆಚ್ ಕೋರ್ಟ್‌ನಿಂದ ಎ15 ಕಾರ್ತಿಕ್​ ಹಾಗೂ ಎ17 ನಿಖಿಲ್ ನಾಯಕ್​ಗೆ ಜಾಮೀನು ಮಂಜೂರಾಗಿದೆ. ಎ16 ಆಗಿರುವ ಕೇಶವಮೂರ್ತಿಗೆ ಹೈಕೋರ್ಟ್​ ಜಾಮೀನು ನೀಡಿದೆ. ಸಾಕ್ಷ್ಯ ನಾಶ ಮಾಡಿದ ಆರೋಪ ಆ ಮೂವರ ಮೇಲಿದೆ. ಪಟ್ಟಣಗೆರೆ ಶೆಡ್​ನಲ್ಲಿ ಕಾರ್ತಿಕ್​ ಕೆಲಸ ಮಾಡಿಕೊಂಡಿದ್ದ. ಶವ ಸಾಗಿಸಿದವರ ಗ್ಯಾಂಗ್​ನಲ್ಲಿ ನಿಖಿಲ್, ಕಾರ್ತಿಕ್ ಇದ್ದರು. ಬಳಿಕ ಅವರ ಜೊತೆ ಕೇಶವಮೂರ್ತಿ ಕೂಡ ಶರಣಾಗಿದ್ದ.

ಎ1 ಆಗಿರುವ ಪವಿತ್ರಾ ಗೌಡ ಮತ್ತು ಎ2 ದರ್ಶನ್​ ಕೂಡ ಜಾಮೀನಿಗಾಗಿ ಕಾಯುತ್ತಿದ್ದಾರೆ. ಅವರು ಕೂಡ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಇಂದು ಇಬ್ಬರ ಜಾಮೀನು ಅರ್ಜಿಯ ವಿಚಾರಣೆ ಕೂಡ ಮುಂದೂಡಿಕೆ ಆಗಿದೆ. ಸೆಪ್ಟೆಂಬರ್​ 25ರಂದು ಪವಿತ್ರಾ ಗೌಡ ಜಾಮೀನು ಅರ್ಜಿ ಹಾಗೂ ಸೆಪ್ಟೆಂಬರ್​ 27ಕ್ಕೆ ದರ್ಶನ್​ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಸದ್ಯಕ್ಕೆ ದರ್ಶನ್ ಬಳ್ಳಾರಿ ಜೈಲಿನಲ್ಲಿ ಇದ್ದಾರೆ. ಜಾರ್ಜ್​ಶೀಟ್​ ಸಲ್ಲಿಕೆ ಬಳಿಕ ಅವರು ಜಾಮೀನು ಪಡೆಯುವ ಬಗ್ಗೆ ಕುಟುಂಬದವರು ಹಾಗೂ ವಕೀಲರ ಜೊತೆ ಚರ್ಚೆ ಮಾಡುತ್ತಿದ್ದಾರೆ.

Comments (0)

Your email address will not be published. Required fields are marked *

Back to top button