#Exclusive NewsTop News

ಸೈಬರ್ ವಂಚಕರ ಹೊಸ ಹಾದಿ: ವಂಚಿಸಲು ಪೊಲೀಸ್ ಠಾಣೆ ನಿರ್ಮಿಸಿದ ವಂಚಕರು

 


ಬೆಂಗಳೂರು: ನೋಡೋಕೆ ಅದು ಪೊಲೀಸ್ ಠಾಣೆ ರೀತಿ ಇರುತ್ತೆ ಆದ್ರೆ ಅದು ಪೊಲೀಸ್ ಠಾಣೆಯಲ್ಲ. ಖಾಕಿ ಬಟ್ಟೆ ಹಾಕೊಂಡು ಪೊಲೀಸ್ರ ರೀತಿ ಮಾತಾಡ್ತಾರೆ ಆದ್ರೆ ಅವ್ರು ಪೊಲೀಸ್ರಲ್ಲ. ಆದ್ರೆ ಅವರನ್ನ ನೀವು ನಂಬಿದ್ರೆ ನಿಮ್ಮ‌ಹಣ ಮಂಗಮಾಯ ಆಗೋದು ಪಕ್ಕ. ಸೈಬರ್ ಪೊಲೀಸ್ರ ಹೆಸ್ರಲ್ಲಿ ನಿಮ್ಮ ಹೆಸ್ರಲ್ಲಿ ಡ್ರಗ್ ಬಂದಿದೆ ಅಂತ ಕಾಲ್ ಮಾಡಿ ಹೌಸ್ ಅರೆಸ್ಟ್ ಮಾಡಿ ಹಣ ಪೀಕ್ತಿದ್ದ ವಂಚಕರು ಸದ್ಯ ಹೊಸ ಪ್ಲಾನ್ ಮಾಡಿದ್ದಾರೆ. ಪೊಲೀಸರೇ ವಿಡಿಯೋ ಕಾಲ್ ಬಂದಿದೆ ಅಂತ ಮಾಹಿತಿ ನೀಡೋ ಮುನ್ನ ಎಚ್ಚರ. ಸೈಬರ್ ವಂಚಕರ ಖತರ್ನಾಕ್ ಪ್ಲಾನ್ ಕಂಡು ಬೆಂಗಳೂರು ಟ್ರಕ್ಕಿನ ಜೊತೆಗೆ ಪೊಲೀಸ್ರೆ ಕಂಗಾಲಾಗಿದ್ದಾರೆ.

ನಾವು ಪೊಲೀಸರು ಅಂತ ನಂಬಿಸಲು ವಿಡಿಯೋ ಕಾಲ್ ಮಾಡಿ ವಂಚನೆಗೆ ಯತ್ನಿಸಿದ್ದಾರೆ.ಕಳೆದ‌ ಕೆಲ ದಿನಗಳ ಹಿಂದೆ ಟೆಕ್ಕಿ ಡಿಂಟೂ ಜೋಸೆಫ್ ಎಂಬುವವರಿಗೆ ವಿಡಿಯೋ ಕಾಲ್ ಬಂದಿದೆ. ವಿಡಿಯೋ ಕಾಲ್ ರಿಸೀವ್ ಮಾಡಿದಾಗ ಪೊಲೀಸ್ ಯೂನಿಫಾರ್ಮ್ ಹಾಕಿದ್ದ ವ್ಯಕ್ತಿ ಕಾಣಿಸಿದ್ದಾನೆ‌. ಬ್ಯಾಗ್ರೌಂಡ್ ನೋಡಲು ಪೊಲೀಸ್ ಠಾಣೆಯ ರೀತಿಯೇ ಇದ್ದನ್ನ ನೋಡಿ ಮೊದಲಿಗೆ ಟೆಕ್ಕಿ ಕೂಡ ನಂಬಿದ್ದಾನೆ. ನಾವು ಮುಂಬೈನ ಜೂಹೂ ಠಾಣೆಯಿಂದ ಮಾತನಾಡ್ತಿದ್ದಾಗಿ ಪರಿಚಯ ಮಾಡಿಕೊಂಡಿದ್ದು ಪೊಲೀಸ್ ಅಂತ ನಂಬಿ ವಂಚಕ ಕೇಳಿದ ಮಾಹಿತಿ ನೀಡಿದ್ದಾರೆ. ಪಾನ್ ಕಾರ್ಡ್, ಆದಾರ್ ಕಾರ್ಡ್ ಸೇರಿ ಕೆಲ ಮಾಹಿತಿ ನೀಡಿದ್ದಾನೆ. ಬಳಿಕ ಆ ಕಡೆಯಿಂದ ಮಾತನಾಡುತ್ತಿದ್ದ ವ್ಯಕ್ತಿ ಬ್ಯಾಂಕ್ ಖಾತೆ ಮಾಹಿತಿ ಕೇಳಿದ್ದಾನೆ. ಎಷ್ಟು ಅಕೌಂಟ್ ಇದ್ದಾವೆ, ಯಾವ ಖಾತೆಯಲ್ಲಿ ಎಷ್ಟು ಹಣ ಇದೆ ಅಂತ ಕೇಳಿದ್ದಾನೆ. ಆಗ ಅನುಮಾನ ಬಂದು ಕಾಲ್ ಮಾಡಿದ್ದ ಟೆಕ್ಕಿ ಡಿಂಟೂ ಜೋಸೆಫ್ ಕಾಲ್ ಕಟ್ ಮಾಡಿ ಮತ್ತೆ ಕರೆ ಮಾಡಿದಾಗ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಹೆಚ್.ಎ.ಎಲ್ ಪೊಲೀಸರಿಗೆ ತಿಳಿಸಿಲಾಗಿದೆ. ಸದ್ಯ ಜೊಸೆಫ್ ಎಚ್ಚರಗೊಂಡು ಯಾವೂದೇ ಅಕೌಂಟ್ ಮಾಹಿತಿ ನೀಡಿಲ್ಲ.

Comments (0)

Your email address will not be published. Required fields are marked *

Back to top button
Verified by MonsterInsights