ವೈರಲ್ ನ್ಯೂಸ್ಸುದ್ದಿ

ಸ್ಕೂಟರನ್ನು ಸಮುದ್ರಕ್ಕೆ ಇಳಿಸಿದ ಯುವಕ, ಇದು ಹುಚ್ಚುತನದ ಪರಮಾವಧಿ

ಇತ್ತೀಚಿನ ದಿನಗಳಲ್ಲಿ ರೀಲ್ಸ್ ಮಾಡೋದು ಹೊಸ ಟ್ರೆಂಡ್ ಆಗಿದೆ. ರೀಲ್ಸ್ ಹೆಸರಲ್ಲಿ ಯುವ ಸಮುದಾಯ ಮಾಡ್ತಿರೋ ಹುಚ್ಚಾಟಗಳಿಗೆ ಕೊನೆಯೇ ಇಲ್ಲದಂತಾಗಿದೆ. ಈಗಾಗಲೇ ಈ ರೀಲ್ಸ್ ಹುಚ್ಚಾಟಕ್ಕೆ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಆದರೆ ಇಲ್ಲೊಬ್ಬ ರೀಲ್ಸ್ ಸಾಹಸಕ್ಕೆ ಬಿದ್ದು ಸ್ಕೂಟರ್ ನೊಂದಿಗೆ ಸಮುದ್ರಕ್ಕೆ ಇಳಿದಿದ್ದಾನೆ. ಹೌದು, ಯುವಕನೊಬ್ಬನು ದೊಡ್ಡ ಗಾತ್ರದ ಅಲೆಗಳು ಬರುತ್ತಿದ್ದರೂ ಸ್ಕೂಟರ್‌ ಜೊತೆಗೆ ನೀರಿಗೆ ಇಳಿಸಿದ್ದು, ಈ ವಿಡಿಯೋ ನೋಡಿದರೆ ಮೈ ಜುಮ್ಮ್ ಎನ್ನುತ್ತದೆ.

ಎನ್ನುವ ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಗೂಗಲ್ ಮ್ಯಾಪ್ ನಂಬಿ ಹೋದರೆ ಹೀಗೆ ಆಗೋದು ಎಂದು ಬರೆದುಕೊಳ್ಳಲಾಗಿದೆ. ಆದರೆ ಈ ವೀಡಿಯೋವನ್ನು ಯಾವಾಗ ಹಾಗೂ ಎಲ್ಲಿ ಚಿತ್ರೀಕರಿಸಲಾಗಿದೆ ಎನ್ನುವ ಬಗ್ಗೆ ಮಾಹಿತಿಯಿಲ್ಲ. ಆದರೆ ವೈರಲ್ ಆಗಿರುವ ವೀಡಿಯೋದಲ್ಲಿ ಯುವಕನೊಬ್ಬ ತನ್ನ ಸ್ಕೂಟರ್‌ನಲ್ಲಿ ಕುಳಿತಿರುವುದನ್ನು ಕಾಣಬಹುದು. ಆದರೆ ಯುವಕನು ಹೆಲ್ಮೆಟ್ ಹಾಕಿದ್ದು, ತನ್ನ ಸ್ಕೂಟರ್ ಅನ್ನು ಸಮುದ್ರದ ನೀರಿನಲ್ಲಿ ಓಡಿಸಿದ್ದಾನೆ.

ಯುವಕ ಸಮುದ್ರದತ್ತ ಚಲಿಸುತ್ತಿದ್ದಾಗ ಮುಂಭಾಗದಿಂದ ದೈತ್ಯಾಕಾರದ ಅಲೆಗಳು ಬರುತ್ತಿದೆ. ಆದರೆ ಈತನು ಮಾತ್ರ ಯಾವುದಕ್ಕೂ ಭಯ ಪಡದೇ ಸ್ಕೂಟರನ್ನು ಮುಂದಕ್ಕೆ ಓಡಿಸುತ್ತಿದ್ದಾನೆ. ಕೊನೆಗೆ ದೊಡ್ಡದಾದ ಅಲೆ ಬಂದಿದ್ದು, ಸ್ಕೂಟರ್‌ ಅನ್ನು ಮತ್ತೆ ದಡದತ್ತ ತಿರುಗಿಸಿದ್ದಾನೆ. ಈ ವಿಡಿಯೋವು ಈಗಾಗಲೇ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ನೆಟ್ಟಿಗರು ಈತನ ವಿರುದ್ಧ ಗರಂ ಆಗುವ ಮೂಲಕ ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಅದಲ್ಲದೇ ಈ ರೀತಿಯ ಸಾಹಸಕ್ಕೆ ಯಾರೂ ಕೈ ಹಾಕಬೇಡಿ ಎಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.

 

https://twitter.com/TheFigen_/status/1807823991324745951?ref_src=twsrc%5Etfw%7Ctwcamp%5Etweetembed%7Ctwterm%5E1807823991324745951%7Ctwgr%5E655a09743336a7d3807317ce4de5cd69af20539e%7Ctwcon%5Es1_&ref_url=https%3A%2F%2Ftv9kannada.com%2Ftrending%2Fa-young-man-rides-scooter-into-the-sea-video-goes-viral-kannada-news-siu-861638.html

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button