ವಿಶೇಷವೈರಲ್ ನ್ಯೂಸ್ಸುದ್ದಿ

ಮೊಟ್ಟೆಯ ಮೇಲೆ 60 ಯೋಗಾಸನ ಭಂಗಿ; ಬೆರಗು ಮೂಡಿಸಿದ ಕಲಾವಿದ

ಆಂಧ್ರಪ್ರದೇಶ: ಇಂದು ವಿಶ್ವಯೋಗದಿನಾಚರಣೆಯನ್ನು ಎಲ್ಲಡೆ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಚಿತ್ರ ಕಲಾವಿದ ಕೋಟೇಶ್ ಬಿಡಿಸಿದ ಅದ್ಭುತ ಚಿತ್ರಗಳು ಎಲ್ಲರ ಮನಸೆಳೆಯುತ್ತಿವೆ. ಕರ್ನೂಲು ಜಿಲ್ಲೆಯ ನಿವಾಸಿ ಕೋಟೇಶ್ ಕೋಳಿ ಮೊಟ್ಟೆಯ ಮೇಲೆ ಬಿಡಿಸಿದ ವಿವಿಧ ರೀತಿಯ ಯೋಗಭಂಗಿ ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್​​ ಆಗುತ್ತಿದೆ. ಇವರು ಕೋಳಿ ಮೊಟ್ಟೆಯ ಮೇಲೆ ಮೈಕ್ರೋ ಬ್ರಷ್ ಸಹಾಯದಿಂದ 60 ಪ್ರಮುಖ ಯೋಗ ಆಸನಗಳನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ. ಸುಮಾರು ಎರಡು ಗಂಟೆಗಳಲ್ಲಿ ಸಾಕಷ್ಟು ಶ್ರಮವಹಿಸಿ ಯೋಗಾಸನಗಳ ಸುಂದರ ಚಿತ್ರಗಳನ್ನು ಬಿಡಿಸಿದ್ದು ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button