ವೈರಲ್ ನ್ಯೂಸ್ಸುದ್ದಿ

ಹೊಸ ಮನೆಯ ಮಹಡಿ ಮೇಲೆ ಆಟೋ ಇರಿಸಿದ ವ್ಯಕ್ತಿ! : ಕಾರಣ ಹೃದಯಸ್ಪರ್ಶಿ

ಪ್ರತಿಯೊಬ್ಬರಿಗೂ ಹೊಸ ಮನೆ ಕಟ್ಟುವುದು ಎಂಬುದು ಒಂದು ಕನಸು. ಇದಕ್ಕೆ ತನ್ನ ಸಂಪಾದನೆಯ ಹಣವನ್ನು ಜೋಪನದಿಂದ ಕಾಪಾಡಿಕೊಂಡು ಬರುತ್ತಾರೆ. ಹೀಗೆ ಕಷ್ಟಪಟ್ಟು, ಇಷ್ಟಪಟ್ಟು ಕಟ್ಟಿದ ಮನೆ ಖಂಡಿತಾ ಪ್ರತಿಯೊಬ್ಬರಿಗೂ ಸ್ಪೆಷಲ್. ಅಂತೆಯೇ ಇಲ್ಲೊಬ್ಬರು ಇದೇ ವಿಶೇಷ ಕ್ಷಣವನ್ನು ಇನ್ನಷ್ಟು ಸ್ಪೆಷಲ್ ಆಗಿಸಿದ್ದಾರೆ. ಅದು ಆಟೋವನ್ನು ತನ್ನ ಹೊಸ ಮನೆಯ ಮಹಡಿಯಲ್ಲಿ ಇರಿಸುವ ಮೂಲಕ!

ಅರೇ ಹೊಸ ಮನೆಯ ಮಹಡಿ ಮೇಲೆ ಆಟೋವನ್ನು ಯಾಕೆ ಇಟ್ಟಿದ್ದಾರೆ ಎಂದು ನೀವು ಕೇಳಬಹುದು. ಅದಕ್ಕೆ ಕಾರಣವೂ ಇದೆ. ಈ ವ್ಯಕ್ತಿಯ ಹೊಸ ಮನೆಯ ಕನಸು ಸಾಕಾರಗೊಳ್ಳಲು ಸಹಕಾರ ನೀಡಿದ ವಾಹನ ಇದು. ಅದೇ ಕಾರಣಕ್ಕೆ ತನ್ನ ನೆಚ್ಚಿನ ಆಟೋವನ್ನು ಈ ವ್ಯಕ್ತಿ ಮನೆಯ ಮಹಡಿಯ ಮೇಲೆ ಇರಿಸಿದ್ದಾರೆ. ಇದರಿಂದಲೇ ಗೊತ್ತಾಗುತ್ತದೆ ಇವರಿಗೆ ಈ ಆಟೋ ಅದೆಷ್ಟು ಸ್ಪೆಷಲ್ ಅಂತ.

ಆಟೋ ಚಾಲಕರೊಬ್ಬರ ಈ ಖುಷಿಯ ಕ್ಷಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಕ್ಲಿಪ್‌ನಲ್ಲಿ ಬೃಹತ್ ಕ್ರೇನ್‌ ಮೂಲಕ ಆಟೋವೊಂದನ್ನು ಮನೆಯ ಮಹಡಿ ಮೇಲೆ ಇರಿಸುವುದನ್ನು ನೋಡಬಹುದು. ಈ ವಿಡಿಯೋದ ಹಿನ್ನೆಲೆಯಲ್ಲಿ ಕೇಳಿಸುವ ಧ್ವನಿಯಂತೆ ಈ ಮನೆಯ ಮಾಲಿಕ ಒಬ್ಬರು ಆಟೋ ಡ್ರೈವರ್. ಇದೇ ಆಟೋದ ಮೂಲಕ ಸಂಪಾದಿಸಿದ ಹಣದ ಮೂಲಕ ಇವರು ಈಗ ಮನೆ ಕಟ್ಟಿದ್ದಾರೆ. ಹೀಗಾಗಿ ತನ್ನ ಈ ಕನಸು ಸಾಕಾರಗೊಳ್ಳಲು ಬೆಂಬಲವಾದ ಆಟೋಗೆ ಗೌರವ ಸಲ್ಲಿಸುವ ಸಲುವಾಗಿ ಇವರು ತನ್ನ ನೆಚ್ಚಿನ ಆಟೋವನ್ನು ಮನೆಯ ಮೇಲೆ ಇರಿಸಿದ್ದಾರೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button