ಸುದ್ದಿ

ಪಾಕ್​ ಪರ ಘೋಷಣೆ ಪ್ರಕರಣ : ಮೊಹಮ್ಮದ್​ ಶಫಿ ನಾಶಿಪುಡಿ ಮತ್ತೆ ಪೊಲೀಸರ ವಶಕ್ಕೆ

ಬೆಂಗಳೂರು : ವಿಧಾನಸೌಧದಲ್ಲಿ ಪಾಕ್​ ಪರ ಘೊಷಣೆ ಕೂಗಿದ ಪ್ರಕರಣದ ಆರೋಪಿ ಮೊಹಮ್ಮದ್​​ ಶಫಿ  ನಾಶಿಪುಡಿ ಪೊಲೀಸ್​ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಒಬ್ಬ ಆರೋಪಿಯನ್ನ ಹೆಚ್ಚಿನ ವಿಚಾರಣೆಗೆ ಮತ್ತೆ ಮಾರ್ಚ್​ 7 ತನಕ ಪೊಲೀಸ್​ ಕಸ್ಟಡಿಗೆ ಪಡೆಯಲಾಗಿದೆ. ವಿಧಾನಸೌಧ ಪೊಲೀಸರು ಬುಧವಾರ ಎಸಿಎಮ್​ಎಮ್​ ನ್ಯಾಯಾಲಯ ಮುಂದೆ ಮೂವರನ್ನು ಹಾಜರು ಪಡಿಸಿದ್ದರು. ಇದರಲ್ಲಿ ಆರ್​ ಟಿ ನಗರದ ಮುನ್ನಾವರ್​ ಮತ್ತು ದೆಹಲಿ ಮೂಲದ ಮೊಹಮ್ಮದ್​ ಇಲ್ಲಾತಜ್​ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮತ್ತೊಬ್ಬ ಆರೋಪಿ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೊಹಮ್ಮದ್​ ಶಫಿ ನಾಶಿಪುಡಿಯನ್ನು ಗುರುವಾರದವರೆಗು ಕಸ್ಟಡಿಗೆ ಪಡೆಯಲಾಗಿದೆ. ನೆನ್ನೆಯಿಂದ ನಾಶಿಪುಡಿಯನ್ನು ತೀವ್ರ ವಿಚಾರಣೆ ನಡೆಸುತ್ತಿರುವ ವಿಧಾನಸೌಧ ಠಾಣಾ ಪೊಲೀಸರು ಇಂದು  ಕೋರ್ಟ್​ಗೆ ಹಾಜರುಪಡಿಸಲಿದ್ದಾರೆ.

Comments (0)

Your email address will not be published. Required fields are marked *

Back to top button