Freedom TV

ನಾಗರಾಳ PKPS ರಾಸಲೀಲೆ-ಕಾಮಾಂಧನ ವಿರುದ್ಧ ಕ್ರಮ: ಫ್ರೀಡಂ ಟಿವಿ ಇಂಪ್ಯಾಕ್ಟ್

ಜಮಖಂಡಿ: ರೈತರ ಪವಿತ್ರ ದೇಗುಲದಂತಿರಬೇಕಾದ ಕಚೇರಿಯನ್ನು ಕಾಮದ ಅಡ್ಡೆ ಮಾಡಿಕೊಂಡಿದ್ದ ಕಾಮಾಂಧ PKPS ಕಾರ್ಯದರ್ಶಿ ಆನಂದ್ ದೇಶಪಾಂಡೆಯ ಬಣ್ಣ ಬಯಲಾಗಿದೆ. ನಾಗರಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (PKPS) ಕಚೇರಿಯಲ್ಲಿ ನಡೆದಿದ್ದ ಅನಾಚಾರದ ಬಗ್ಗೆ ‘ಫ್ರೀಡಂ ಟಿವಿ’ ಪ್ರಸಾರ ಮಾಡಿದ್ದ ವರದಿಗೆ ಈಗ ಬಿಗ್ ಇಂಪ್ಯಾಕ್ಟ್ ಸಿಕ್ಕಿದೆ.

ಕಾಮಕಾಂಡ ನಡೆಸಿದ ಸೆಕ್ರೆಟರಿ ವಿರುದ್ಧ ಶಿಸ್ತು ಕ್ರಮ

ನಾಗರಾಳ PKPS ಕಾರ್ಯದರ್ಶಿ ಆನಂದ್ ದೇಶಪಾಂಡೆ ಎಂಬಾತ ಮಹಿಳೆಯೊಬ್ಬರ ಜೊತೆ ಕಚೇರಿಯಲ್ಲೇ ಸರಸವಾಡುತ್ತಿದ್ದ ದೃಶ್ಯಗಳನ್ನು ಫ್ರೀಡಂ ಟಿವಿ ಸಾಕ್ಷ್ಯ ಸಮೇತ ಬಯಲಿಗೆಳೆದಿತ್ತು. ಈ ವರದಿ ಪ್ರಸಾರವಾಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದನ್ನು ಕಂಡು ಕೂಡಲೆ ಎಚ್ಚೆತ್ತ ಜಮಖಂಡಿ ಸಹಕಾರ ಸಂಘಗಳ ನಿಬಂಧಕರ ಕಚೇರಿ, ಇದೀಗ ಆರೋಪಿ ಸೆಕ್ರೆಟರಿ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕೃತ ಆದೇಶ ಹೊರಡಿಸಿದೆ.

ರೈತರಿಗೆ ಸೇವೆ ನೀಡಬೇಕಾದ ಕಚೇರಿಯಲ್ಲೇ ಮಹಿಳೆಯೊಂದಿಗೆ ರಾಸಲೀಲೆ ನಡೆಸುತ್ತಿದ್ದ ಕಾಮಾಂಧ ಸೆಕ್ರೆಟರಿಯ ಅಸಲಿ ಮುಖವನ್ನು ಫ್ರೀಡಂ ಟಿವಿ ರಾಜ್ಯದ ಜನತೆಯ ಮುಂದಿಟ್ಟಿತ್ತು.ಅನೈತಿಕ ಚಟುವಟಿಕೆ ನಡೆಸಿದ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಲು ಅಥವಾ ಶಿಸ್ತುಕ್ರಮ ಜರುಗಿಸಲು ಈಗ ಮೇಲಧಿಕಾರಿಗಳು ಸೂಚನೆ ನೀಡಿದ್ದಾರೆ.ರೈತರ ವ್ಯವಹಾರ ಮತ್ತು ವಹಿವಾಟು ನಡೆಯುವ ಸಹಕಾರ ಸಂಘಗಳಲ್ಲಿ ಇಂತಹ ಅಸಭ್ಯ ವರ್ತನೆಗಳು ನಿಷಿದ್ಧ. ಭ್ರಷ್ಟ ಮತ್ತು ಕಾಮುಕ ಅಧಿಕಾರಿಗಳ ವಿರುದ್ಧ ಫ್ರೀಡಂ ಟಿವಿ ನಡೆಸಿದ ಈ ಹೋರಾಟಕ್ಕೆ ಈಗ ಜಯ ಸಿಕ್ಕಂತಾಗಿದೆ. ಸಮಾಜಸ ಸ್ವಾಸ್ಥ್ಯ ಕಾಪಾಡುವುದೇ ಮಾಧ್ಯಮಗಳ ಕರ್ತವ್ಯ ಎಂಬುದಕ್ಕೆ ಈ ಸುದ್ದಿ ನಿದರ್ಶನವಾಗಿದೆ.

#FreedomTV #FreedomTVImpact #JamkhandiNews #NagaralPKPS #AnandDeshpande #BigDevelopment #BreakingNews #KannadaNews #ActionAgainstSecretary #BagalkotNews #Justice #CorruptionExposed #SocialImpact #KarnatakaNews #ರಾಸಲೀಲೆ #ಜಮಖಂಡಿ #ಫ್ರೀಡಂಟಿವಿಇಂಪ್ಯಾಕ್ಟ್ #ನಾಗರಾಳ #ಸಹಕಾರಸಂಘ

Comments (0)

Your email address will not be published. Required fields are marked *

Back to top button