Freedom TV

ತಹಶೀಲ್ದಾರ್ ಕಚೇರಿಯಲ್ಲಿ ಲಂಚಾವತಾರ-ಪ್ರತಿ ಕೆಲಸಕ್ಕೂ ರೇಟು ಫಿಕ್ಸ್!

Bribe at basava kalayana tahashiladar office

ಬೀದರ್: ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ತಹಶೀಲ್ದಾರ್ ಕಚೇರಿ ಹಾಗೂ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಲ್ಲಿ ಸಾರ್ವಜನಿಕರ ಸೇವೆಗಳಿಗಿಂತ ಹೆಚ್ಚಾಗಿ ಹಣದ ‘ಡೀಲ್’ಗಳದ್ದೇ ಕಾರುಬಾರು.ಸಾರ್ವಜನಿಕರಿಂದ ರಾಜಾರೋಷವಾಗಿ ಲಂಚ ಪಡೆಯುತ್ತಿರುವ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭ್ರಷ್ಟ ಆಡಳಿತದ ಬಣ್ಣ ಬಯಲು ಬಯಲಾಗಿದೆ.

ಲಂಚ ಕೊಟ್ರೆ ಮಾತ್ರ ಕೆಲಸ !
ಬಸವಕಲ್ಯಾಣದ ತಹಶೀಲ್ದಾರ್ ಕಚೇರಿಗೆ ಕೆಲಸಕ್ಕಾಗಿ ಬರುವ ರೈತರು ಮತ್ತು ಸಾಮಾನ್ಯ ಜನರಿಂದ ಪ್ರತಿ ಕೆಲಸಕ್ಕೂ ಲಂಚದ ಬೇಡಿಕೆ ಇಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ವಿಶೇಷವಾಗಿ ಜಮೀನಿನ ಹೆಸರು ನೋಂದಣಿ (Registration) ಪಹಣಿ ಬದಲಾವಣೆ (Mutation) ಖಾತೆ ಬದಲಾವಣೆ Khatha Transfer)

ಹಾಗೂ ವಿವಿಧ ಪ್ರಮಾಣಪತ್ರಗಳಿಗೆ ಕಚೇರಿಯ ಸಿಬ್ಬಂದಿಗಳು ಸಾವಿರಾರು ರೂಪಾಯಿ ಹಣವನ್ನು ಬೇಡಿಕೆಯಿಡುತ್ತಿದ್ದಾರೆ. ಹಣ ನೀಡದಿದ್ದರೆ ತಿಂಗಳುಗಟ್ಟಲೆ ಅಲೆದಾಡಿಸುವ ಕೆಲಸ ಇಲ್ಲಿ ಅವ್ಯಾಹತವಾಗಿ ನಡೆಯುತ್ತಿರುವುದು ನಾಡಿನ ದುರ್ದೈವ.

ಮೊಬೈಲ್ ನಲ್ಲಿ ಸೆರೆಯಾಯ್ತು ಭ್ರಷ್ಟಾಚಾರ!
ಕಚೇರಿಯಲ್ಲಿ ಸಿಬ್ಬಂದಿಗಳು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿರುವ ದೃಶ್ಯವನ್ನು ಆದರ್ಶ ನಾಗರಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋದಲ್ಲಿ ಸಿಬ್ಬಂದಿಗಳು ಯಾವುದೇ ಭಯವಿಲ್ಲದೆ ಹಣವನ್ನು ಎಣಿಸಿ ಜೇಬಿಗೆ ಹಾಕಿಕೊಳ್ಳುವುದು ಸ್ಪಷ್ಟವಾಗಿ ಕಂಡುಬಂದಿದೆ. ಈ ವಿಡಿಯೋ ಈಗ ವಾಟ್ಸಾಪ್ ಮತ್ತು ಫೇಸ್‌ಬುಕ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಣ್ಮುಚ್ಚಿ ಕುಳಿತಿದ್ದಾರೆ ಹಿರಿಯ ಅಧಿಕಾರಿಗಳು!
ಬಸವಕಲ್ಯಾಣದ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲೂ ಇದೇ ಲಂಚಗುಳಿತನದ ಚಾಳಿ ಮುಂದುವರೆದಿದ್ದು, ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ ಎನ್ನಲಾಗಿದೆ.ಕಣ್ಣೆದುರೇ ಲಂಚದ ವ್ಯವಹಾರ ನಡೆಯುತ್ತಿದ್ದರೂ ಹಿರಿಯ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಅವರು ಲಂಚ ವ್ಯವಹಾರದಲ್ಲಿ ಭಾಗಿಯಾಗಿರುವುದಕ್ಕೆ ಸಾಕಷ್ಟು ಇಂಬು ನೀಡಿದೆ.ಭ್ರಷ್ಟ ಸಿಬ್ಬಂದಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.”ಸರ್ಕಾರಿ ಕಚೇರಿಗಳು ಜನಸೇವೆಯ ಕೇಂದ್ರಗಳಾಗುವ ಬದಲು ಹಣ ಲೂಟಿ ಮಾಡುವ ಅಡ್ಡೆಗಳಾಗಿ ಬದಲಾಗುತ್ತಿರುವುದು ದುರದೃಷ್ಟಕರ.”

#Basavakalyana #Bidar #Corruption #TahsildarOffice #BribeVideoViral #KarnatakaCorruption #PublicOutrage #FreedomTV #BidarNews #Lanchavatara #GovernmentStaff #ViralVideo #SubRegistrarOffice

Comments (0)

Your email address will not be published. Required fields are marked *

Back to top button