Tuesday, February 10, 2026
19.8 C
Bengaluru
Google search engine
LIVE
ಮನೆSportsಆರ್‌ಸಿಬಿ ಮತ್ತು ಡೆಲ್ಲಿ ನಡುವೆ ಪ್ರಶಸ್ತಿ ಫೈಟ್! 'ಈ ಸಲವೂ ಕಪ್ ನಮ್ದೇ'

ಆರ್‌ಸಿಬಿ ಮತ್ತು ಡೆಲ್ಲಿ ನಡುವೆ ಪ್ರಶಸ್ತಿ ಫೈಟ್! ‘ಈ ಸಲವೂ ಕಪ್ ನಮ್ದೇ’

ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-4ರ ಮೆಗಾ ಫೈನಲ್ ಪಂದ್ಯಕ್ಕೆ ಕೌಂಟ್-ಡೌನ್ ಆರಂಭವಾಗಿದ್ದು, ಕ್ರಿಕೆಟ್ ಲೋಕದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಬರೋಡಾದಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ರಶಸ್ತಿಗಾಗಿ ಮುಖಾಮುಖಿಯಾಗುತ್ತಿವೆ.

ಎರಡನೇ ಟ್ರೋಫಿ ಮೇಲೆ ಆರ್‌ಸಿಬಿ ಕಣ್ಣು; ಡೆಲ್ಲಿಗೆ ಚೊಚ್ಚಲ ಪ್ರಶಸ್ತಿಯ ಕನಸು
ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿ ನೇರವಾಗಿ ಫೈನಲ್ ಪ್ರವೇಶಿಸಿರುವ ಆರ್‌ಸಿಬಿ, ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರುವ ತವಕದಲ್ಲಿದ್ದರೆ, ಎಲಿಮಿನೇಟರ್ ಪಂದ್ಯದಲ್ಲಿ ಜಯಗಳಿಸಿ ಬಂದಿರುವ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಚೊಚ್ಚಲ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿದ್ದು, ಫೈನಲ್‌ನಲ್ಲೂ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದಾರೆ.

ಅವರ ಜೊತೆಗೆ ಬಿರುಸಿನ ಬ್ಯಾಟಿಂಗ್‌ಗೆ ಹೆಸರಾದ ಗ್ರೇಸ್ ಹ್ಯಾರಿಸ್, ಗೇಮ್ ಚೇಂಜರ್ ರಿಚಾ ಘೋಷ್ ಮತ್ತು ನಾಡಿನ್ ಡಿ ಕ್ಲಾರ್ಕ್ ಮಧ್ಯಮ ಕ್ರಮಾಂಕದ ಬಲವಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಲಾರೆಲ್ ಬೆಲ್, ಶ್ರೇಯಾಂಕ ಪಾಟೀಲ್ ಮತ್ತು ರಾಧಾ ಯಾದವ್ ಅವರು ಎದುರಾಳಿಗಳನ್ನು ಕಟ್ಟಿಹಾಕಲು ಸಜ್ಜಾಗಿದ್ದಾರೆ. ಲೀಗ್ ಹಂತದ ಸೋಲಿಗೆ ಸೇಡು ತೀರಿಸಿಕೊಂಡು ‘ಈ ಸಲವೂ ಕಪ್ ನಮ್ದೇ’ ಎನ್ನುವ ವಿಶ್ವಾಸದಲ್ಲಿ ಬೆಂಗಳೂರು ತಂಡವಿದೆ.

ಜೆಮಿಮಾ ರಾಡ್ರಿಗ್ಸ್ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಸಬಲವಾಗಿದೆ. ಶಫಾಲಿ ವರ್ಮಾ, ಲಿಝೆಲ್ ಲೀ ಮತ್ತು ಮಾರಿಝಾನ್ ಕಾಪ್ ಅವರಂತಹ ಸ್ಫೋಟಕ ಆಟಗಾರ್ತಿಯರು ತಂಡದಲ್ಲಿದ್ದು, ಬ್ಯಾಟಿಂಗ್‌ನಲ್ಲಿ ಪ್ರಬಲ ಪೈಪೋಟಿ ನೀಡಲು ಸಿದ್ಧರಾಗಿದ್ದಾರೆ. ಮೂರು ಬಾರಿ ಫೈನಲ್ ತಲುಪಿ ಪ್ರಶಸ್ತಿ ವಂಚಿತವಾಗಿದ್ದ ಡೆಲ್ಲಿಗೆ ಈ ಬಾರಿ ಇತಿಹಾಸ ಸೃಷ್ಟಿಸುವ ಹಂಬಲವಿದೆ. ಒಟ್ಟಾರೆಯಾಗಿ, ವಡೋದರಾದಲ್ಲಿ ನಡೆಯಲಿರುವ ಈ ಸಮರವು ಸ್ಮೃತಿ ಮತ್ತು ಜೆಮಿಮಾ ನಾಯಕತ್ವದ ನಡುವಿನ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಲಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments