ಕ್ರೈಂ ಸ್ಟೋರಿ

ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ..!​

ಬೆಂಗಳೂರು: ಮಾಜಿ ಡಾನ್​ ಮುತ್ತಪ್ಪ ರೈ ಪುತ್ರ  ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಬಿಡದಿಯ ಮುತ್ತಪ್ಪ ರೈ ನಿವಾಸದ ಕೂಗಳತೆಯಲ್ಲೇ ಅಪರಿಚಿತರು ಫೈರಿಂಗ್ ಮಾಡಿ ಓಡಿ ಹೋಗಿದ್ದಾರೆ. ರಿಕ್ಕಿ ರೈ ಮೂಗು ಹಾಗೂ ಬಲ ಭುಜಕ್ಕೆ ಗುಂಡು ತಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ  ಮುತ್ತಪ್ಪ ರೈ ಪುತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ.

2 ದಿನಗಳ ಹಿಂದಷ್ಟೇ ರಿಕ್ಕಿ ರೈ ರಷ್ಯಾದಿಂದ ಬೆಂಗಳೂರಿಗೆ ಬಂದಿದ್ದರು. ಬಿಡದಿಯ ಮುತ್ತಪ್ಪ ರೈ ನಿವಾಸಕ್ಕೆ ಆಗಮಿಸಿದ್ದ ರಿಕ್ಕಿ, ಒಬ್ಬರೇ ವಾಸವಾಗಿದ್ದರು. ತಡರಾತ್ರಿ ಬಿಡದಿಯಿಂದ ಬೆಂಗಳೂರಿನತ್ತ ಕಾರಿನಲ್ಲಿ ಹೊರಟಾಗ ಗುಂಡಿನ ದಾಳಿಯಾಗಿದೆ. ಮಧ್ಯರಾತ್ರಿ ರಿಕ್ಕಿ ಮೇಲೆ ಎರಡು ಸುತ್ತು ಫೈರ್ ಮಾಡಿದ್ದಾರೆ.

ಪಕ್ಕಾ ಪ್ರೀ ಪ್ಲ್ಯಾನ್ಡ್ ಅಟೆಂಪ್ಟ್..!

ಘಟನಾ ಸ್ಥಳದ ಸುತ್ತಲೂ ಎಲ್ಲೂ ಸಿಸಿ ಟಿವಿ ಇಲ್ಲ‌. ಅಕ್ಕಪಕ್ಕ ಮನೆಗಳು ಇಲ್ಲ. ನೇರ ಅಟ್ಯಾಕ್ ಮಾಡಿದ್ರೆ ಪ್ಲ್ಯಾನ್ ಸಕ್ಸಸ್ ಆಗುತ್ತೆ ಅನ್ನೋ ತಯಾರಿಯೊಂದಿಗೆ ದಾಳಿ ಮಾಡಿದ್ದಾರೆ. ರಿಕ್ಕಿ ರೈ ಪ್ರತಿ ಸ್ಟೆಪ್ ಬಗ್ಗೆ ಮಾಹಿತಿ ಪಡೆದೆ, ಯೋಜನೆ ರೂಪಿಸಿದ್ದ ದಾಳಿಕೋರರು.

ಕೊನೆ ಹಂತದ ವರೆಗೂ ಪಿನ್ ಟು ಪಿನ್ ಪರ್ಫೆಕ್ಟ್ ಮಾಹಿತಿ ಪಡೆದು ರಿಕ್ಕಿ ರೈ ಮೇಲೆ ದಾಳಿ ಮಾಡಿದ್ದಾರೆ. ಆದರೆ ನಿನ್ನೆ ಡ್ರೈವಿಂಗ್ ಸೀಟ್ ನಲ್ಲಿ ರಿಕ್ಕಿ ಕೂರದೆ ಇದ್ದದ್ದೆ ಹಂತಕರ ಪ್ಲ್ಯಾನ್ ಫ್ಲಾಪ್ ಗೆ ಕಾರಣ. ಪ್ರತಿ ಬಾರಿ ಖುದ್ದು ತಾನೇ ಕಾರ್ ಡ್ರೈವಿಂಗ್ ಸೀಟ್ ನಲ್ಲಿ ಇರ್ತಿದ್ದ ರಿಕ್ಕಿ. ಅದೇ ಅಂದಾಜಿನ ಮೇಲೆ ನಿನ್ನೆ ಡ್ರೈವಿಂಗ್ ಸೀಟ್ ಟಾರ್ಗೆಟ್ ಮಾಡಿ ದಾಳಿಕೋರರು.

ಬಿಡದಿಯ ಖಾಸಗಿ ಆಸ್ಪತ್ರೆಯಲ್ಲಿ ರಿಕ್ಕಿ ರೈಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿತ್ತು. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳದಲ್ಲಿ ಸೋಕೋ, FSL ತಂಡ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಬಿಡದಿಯ ಇನ್ಸ್​ಪೆಕ್ಟರ್ ಶಂಕರ್ ನಾಯಕ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ರಿಕ್ಕಿ ಕಾರು ಚಾಲಕ ರಾಜುನಿಂದ ಘಟ‌ನೆ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗಿದೆ.

Comments (0)

Your email address will not be published. Required fields are marked *

Back to top button
Verified by MonsterInsights