Top Newsಜಿಲ್ಲೆಜ್ಯೋತಿಷ್ಯದೇಶ/ವಿದೇಶರಾಜಕೀಯವೈರಲ್ ನ್ಯೂಸ್ಸುದ್ದಿ

ಖಮೇನಿ ಅಂತ್ಯ ಮೊದಲೇ ಊಹಿಸಿದ್ದ ಭಾರತೀಯ ಜ್ಯೋತಿಷಿ

ಇರಾನ್ ದೇಶದ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯ ಹಾಗೂ ಅಮೆರಿಕ-ಇಸ್ರೇಲ್ ಜಂಟಿ ಕಾರ್ಯಾಚರಣೆಯ ಬಗ್ಗೆ ಭಾರತೀಯ ಮೂಲದ ಜ್ಯೋತಿಷಿಯೊಬ್ಬರು ನುಡಿದಿದ್ದ ಭವಿಷ್ಯ ಈಗ ಅಕ್ಷರಶಃ ನಿಜವಾಗಿರುವುದು ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಮೆರಿಕ ಮೂಲದ ಭಾರತೀಯ ಜ್ಯೋತಿಷಿ ಪಿ.ವಿ.ಆರ್. ನರಸಿಂಹ ರಾವ್ ಅವರು ಕಳೆದ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲೇ ಇರಾನ್‌ನಲ್ಲಿ ನಡೆಯಲಿರುವ ಮಹತ್ತರ ಬದಲಾವಣೆಗಳ ಬಗ್ಗೆ ಮುನ್ಸೂಚನೆ ನೀಡಿದ್ದರು.

ನರಸಿಂಹ ರಾವ್ ಅವರು ತಮ್ಮ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಹಾಗೂ ವಿವಿಧ ವಿಡಿಯೋಗಳ ಮೂಲಕ ಇರಾನ್ ಯುದ್ಧ ಮತ್ತು ಖಮೇನಿ ಅವರ ಪತನದ ಸಾಧ್ಯತೆಯನ್ನು ವಿವರಿಸಿದ್ದರು. ವಿಶೇಷವಾಗಿ ಏಪ್ರಿಲ್ 2ರವರೆಗೆ ಇರಾನ್‌ನಲ್ಲಿ ಖಮೇನಿ ಅವರ ಆಡಳಿತ ಮತ್ತು ಜೀವಕ್ಕೆ ಸುರಕ್ಷತೆ ಇಲ್ಲ ಎಂಬ ಅವರ ಎಚ್ಚರಿಕೆ ಈಗ ನಿಜವಾಗಿದೆ. ಖಮೇನಿ ಹತ್ಯೆಯ ಸುತ್ತ ನಡೆದ ಬೆಳವಣಿಗೆಗಳು ಅವರು ಜನವರಿಯಲ್ಲೇ ಅಂದಾಜಿಸಿದ ರೀತಿಯಲ್ಲೇ ನಡೆದಿರುವುದು ಅಚ್ಚರಿ ಮೂಡಿಸಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಸುದೀರ್ಘ ಸಂಘರ್ಷ ಹಾಗೂ ಈ ಯುದ್ಧದ ಕಾರ್ಮೋಡದ ಬಗ್ಗೆ ನರಸಿಂಹ ರಾವ್ ಅವರು ಸರಣಿ ಭವಿಷ್ಯವಾಣಿಗಳನ್ನು ನುಡಿದಿದ್ದರು. ಈಗ ಖಮೇನಿ ಸಾವಿನ ಸುದ್ದಿಯ ಬೆನ್ನಲ್ಲೇ ಅವರ ಹಳೆಯ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಗಣಿತ ಮತ್ತು ಗ್ರಹಗತಿಗಳ ಆಧಾರದ ಮೇಲೆ ಅವರು ನುಡಿದಿದ್ದ ಪ್ರತಿಯೊಂದು ಮಾತುಗಳು ಈಗ ವಾಸ್ತವಕ್ಕೆ ಹತ್ತಿರವಾಗಿರುವುದು ಜ್ಯೋತಿಷ್ಯ ಲೋಕದ ಶಕ್ತಿಯನ್ನು ಸಾಬೀತುಪಡಿಸಿದಂತಿದೆ.

Comments (0)

Your email address will not be published. Required fields are marked *

Back to top button