ಕ್ರೈಂ ಸ್ಟೋರಿ

ಕರ್ನಾಟಕದ ಜನತೆ ಕ್ಷಮೆ ಕೇಳುತ್ತೇನೆ – ನೇಹಾ ಕೊಲೆಗಾರನ ತಾಯಿ ಮುಮ್ತಾಜ್ ಕಣ್ಣೀರು

ಧಾರವಾಡ: ನನ್ನ ಮಗ ಮಾಡಿದ ಘೋರ ಅಪರಾಧಕ್ಕೆ ಕರ್ನಾಟಕದ ಜನತೆ ಕ್ಷಮೆ ಕೇಳುತ್ತೇನೆ ಎಂದು ಫಯಾಜ್ ತಾಯಿ ಮುಮ್ತಾಜ್ ಹೇಳಿದ್ದಾರೆ.

ಮಾಧ್ಯಮದ ಮುಂದೆ ಮಾಡಿದ ಅವರು, ಮಗನ ಕೃತ್ಯಕ್ಕೆ ಕುಟುಂಬಕ್ಕೆ  ಕ್ಷಮೆ ಕೇಳುತ್ತೇನೆ, ನೇಹಾ ತಂದೆ ತಾಯಿ ಕುಟುಂಬಕ್ಕೆ ಅದಷ್ಟು ದುಃಖ ನನ್ನಗೂ ಆಗಿದೆ. ಅವರ ಮಗಳು ಬೇರೆ ಅಲ್ಲ, ಅವಳು ಕೂಡಾ ನನ್ನ ಮಗಳು ಇದ್ದಗೆ, ನನ್ನ ಮಗ ಮಾಡಿರುವುದು ತಪ್ಪು, ಮಾಡಿದ ತಪ್ಪಿಗೆ ನನ್ನ ಮಗನಿಗೆ ಕಾನೂನು ರೀತಿಯಲ್ಲಿಯೇ ಶಿಕ್ಷೆಯಾಗಲಿ ಎಂದರು.

ನೇಹಾ ಫಯಾಜ್ ಇಬ್ಬರು ಪ್ರೀತಿ‌ ಮಾಡುತ್ತಿದ್ದರು. ನೇಹಾ ನನ್ನನ್ನು ತುಂಬಾ ಹಚ್ಚಕೊಂಡಿರುವುದಾಗಿ ಮಗ ಹೇಳಿದ್ದ  ಲವ್ ಮಾಡುತ್ತಿರುವುದಾಗಿ ಹೇಳ್ಕೊಂಡಿದ್ದಆಗ ನಾವು ಅವನಿಗೆ ಬೇಡ ಅಂತಾ ಹೇಳಿದ್ದು, ರ್ಯಾಂಕ್ ಸ್ಟೂಡೆಂಟ್ ಆಗಿದ್ದ ಅವನನ್ನು ನಾವು ಐಎಎಸ್ ಆಫೀಸರ್ ಮಾಡೋ ಕನಸು ಕಂಡಿದ್ದು ಎಂದು ಕಣ್ಣೀರು ಹಾಕಿದರು.

ಈ ಲವ್‌ಲ್ಲಿ ಬಿದ್ದು ಶಿಕ್ಷಣದಲ್ಲಿ ಮಗ ಹಿಂದೆ ಬಿದಿದ್ದ, ಒಬ್ಬರು ಲವ್ ಮಾಡತ್ತಿದ್ದರು, ಒನ್ ಸೈಡ್ ಲವ್ ಅಲ್ಲ, ನೇಹಾ ಕೂಡಾ ಒಳ್ಳೆಯ ಹುಡಿಗಿ, ಇಬ್ಬರು ಮದುವೆ ಆಗುವುದಾಗಿ ಮಗ ಹೇಳಿದ್ದ, ಮಗ ಘೋರ ಕೃತ್ಯಕ್ಕೆ ತಕ್ಕ ಶಿಕ್ಷೆಯಾಗಲಿ ಎಂದರು.

Comments (0)

Your email address will not be published. Required fields are marked *

Back to top button