ಕ್ರೈಂ ಸ್ಟೋರಿ

ಕಾಮುಕನಿಂದ ಯುವತಿಯನ್ನು ಬಚಾವ್ ಮಾಡಿದ ಆ್ಯಪ್

ಬೆಂಗಳೂರು: ನಿನ್ನೆ ಯುವತಿ ಮೇಲಿನ ಅತ್ಯಾಚಾರ ಯತ್ನದ ಘಟನೆಯಲ್ಲಿ ಬದುಕುಳಿರೋದು ಒಂದು ಆ್ಯಪ್ ನಿಂದ. ಅದು ಹೇಗೆ ಅನ್ನೋದನ್ನ ಹೇಳ್ತಿವಿ ಅದಕ್ಕೂ ಮೊದಲು ಘಟನೆಯ ವಿವರ ನೋಡೊದಾದರೆ.

ಯುವತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿರೋ ಪ್ರಕರಣ ಸಿಲಿಕಾನ್ ಸಿಟಿಯನ್ನೆ ಬೆಚ್ಚಿ ಬೀಳಿಸಿದೆ. ಮಹಾರಾಷ್ಟ್ರ ಮೂಲದ ಯುವತಿ ಆನೇಕಲ್ ನ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದಳು. ನಿನ್ನೆ ಸ್ನೇಹಿತನ ಜೊತೆಗೆ ಕೋರಮಂಗಲದ ರೆಸ್ಟೋರೆಂಟ್ ನಲ್ಲಿ ಡಿನ್ನರ್ ಪಾರ್ಟಿಗರ ಜೊತೆ ಬಂದಿದ್ದಾರೆ. ವಾಪಸ್ ರೂಮಿಗೆ ಹೋಗುವಾಗ ಯುವತಿ ಸ್ನೇಹಿತನ ಕಾರನ್ನು ತಾನೇ ಓಡಿಸೋದಾಗಿ ಹೇಳಿ ಕಾರ್ ಚಾಲನೆ ಮಾಡಿದ್ದಾಳೆ. ದಾರಿ ಮಧ್ಯೆ ಮೂರು ಆಟೋಗಳಿಗೆ ಕಾರ್ ಟಚ್ ಆಗಿದೆ.‌ ಆಟೋ ಚಾಲಕರು ಯುವತಿ ಮೇಲೆ ಗಲಾಟೆ ಮಾಡ್ತಿದ್ದಂತೆ . ಯುವತಿಯೇ 112ಗೆ ಕರೆ ಮಾಡಿದ್ದಾಳೆ. ಕೂಡಲೆ ಸ್ಥಳಕ್ಕೆ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ. ಯುವತಿ ಅಲ್ಲೇ ಇದ್ದಿದ್ರೆ ಯಾವೂದೆ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಯುವತಿ ಪೊಲೀಸರು ಬರ್ತಿದ್ದಂತೆ ಗಾಬರಿಯಿಂದ ಕಾರು ಮತ್ತು ಸ್ನೇಹಿತನನ್ನ ಬಿಟ್ಟು ಅಲ್ಲಿಂದ ಹೊರಟಿದ್ದಾಳೆ. ಮೊದಲಿಗೆ ಬೈಕ್ ನ ಅಡ್ಡ ಹಾಕಿ ಡ್ರಾಪ್ ನೀಡುವಂತೆ ಕೇಳಿದ್ದಾಳೆ. ಆದ್ರೆ ಆ ಬೈಕ್ ಚಾಲಕ ನಾನು ಆ ಕಡೆ ಹೋಗಲ್ಲ ಅಂತ ಹೇಳಿದ್ದಾನೆ. ತಕ್ಷಣ ಇನ್ನೊಂದು ಬೈಕ್ ನ ಅಡ್ಡ ಹಾಕಿ ಡ್ರಾಪ್ ಕೇಳಿದ್ದಾಳೆ. ಆತ ಆಕೆಯನ್ನ ಬೈಕ್ ನಲ್ಲಿ ಕೂರಿಸಿಕೊಂಡು ಡ್ರಾಪ್ ಕೊಡೊ ನೆಪದಲ್ಲಿ ಆಕೆಯನ್ನ ಯಾವೂದೋ ಖಾಲಿ ಶೆಡ್ ಗೆ ಕರೆದೋಯ್ದಿದ್ದಾನೆ. ಈ ವೇಳೆ ಗಾಬರಿಗೊಂಡ ಯುವತಿ ಆಗ ಅಲರ್ಟ್ ಆ್ಯಪ್ ಆಕ್ಟಿವ್ ಮಾಡಿದ್ದಾಳೆ. ‌ಕೂಡಲೆ ಯುವತಿಯ ತಂದೆ ಹಾಗೂ ಆಕೆಯ ಸ್ನೇಹಿತೆಗೆ ಅಲರ್ಟ್ ಹೋಗಿದೆ.ಇದರಿಂದ ಸ್ನೇಹಿತೆ ಪೊಲೀಸರನ್ನು ಸಂಪರ್ಕಿಸಿ ಲೈವ್ ಲೊಕೇಷನ್ ಮೂಲಕ ಯುವತಿ ಇದ್ದ ಶೆಡ್ ತಲುಪಿದ್ದಾಳೆ. ಈ ವೇಳೆ ಯುವತಿಯ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದ ಆ ದುರುಳ ಆಕೆಯ ಬಟ್ಟೆಯನ್ನು ಹರಿದು ಹಾಕಿದರು. ಯುವತಿ ಸ್ನೇಹಿತೆ ಮತ್ತು ಪೊಲೀಸರು ಸ್ಥಳಕ್ಕೆ ಹೋಗ್ತಿದ್ದಂತೆ ಆತ ಎಸ್ಕೇಪ್ ಆಗಿದ್ದು, ಹರಿದ ಬಟ್ಟೆಯಲ್ಲಿದ್ದ ಯುವತಿಯನ್ನ ಟಾರ್ಪಲ್ ಸುತ್ತಿಕೊಂಡು ಹೆಬ್ಬಗೋಡಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಮೇಲ್ನೋಟಕ್ಕೆ ಯುವತಿ ಮೇಲೆ ಹಲ್ಲೆ, ಲೈಂಗಿಕ ದೌರ್ಜನ್ಯವಾಗಿರೋ ಖಚಿತವಾಗಿದೆ. ಅತ್ಯಾಚಾರ ಆಗಿದ್ಯೋ ಇಲ್ವೋ ಅನ್ನೋ ಬಗ್ಗೆ ವೈದ್ಯರ ವರದಿಯಿಂದಷ್ಟೇ ಗೊತ್ತಾಗಬೇಕಿದೆ.

Comments (0)

Your email address will not be published. Required fields are marked *

Back to top button
Verified by MonsterInsights