ರಾಜ್ಯ

ನಂದಿನಿ ದೋಸೆ, ಇಡ್ಲಿ ಹಿಟ್ಟುಗೆ  ಡಿಮ್ಯಾಂಡಪ್ಪೋ.. ಡಿಮ್ಯಾಂಡ್..!

ಬೆಂಗಳೂರು : ನಂದಿನಿ ದೋಸೆ, ಇಡ್ಲಿ ಹಿಟ್ಟಿಗೆ ದಿನೇ ದಿನೇ ಬೇಡಿಕೆ ಜಾಸ್ತಿಯಾಗಿದ್ದು, ಈ ನಿಟ್ಟಿನಲ್ಲಿ ದಾಖಲೆ ಮಟ್ಟದಲ್ಲಿ ಹೆಚ್ಚಿನ ಮಾರಾಟ ಮಾಡುವ ಉದ್ದೇಶದಿಂದ ಕೆಎಂಎಫ್ ಇದೀಗ ಇ-ಕಾಮರ್ಸ್ ಸೈಟ್‌ಗೆ ಲಗ್ಗೆಯಿಟ್ಟಿದೆ.

ಇತ್ತೀಚಿನ ದಿನಗಳಲ್ಲಿ ನಂದಿನಿ ಇಡ್ಲಿ ಹಾಗೂ ದೋಸೆ ಹಿಟ್ಟಿನ ಉತ್ಪಾದನೆಗಿಂತ ಬೇಡಿಕೆ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಕೆಎಂಎಫ್ ಸಂಸ್ಥೆಯು ಉತ್ಪಾದನೆ ಜೊತೆಗೆ ಮಾರಾಟವನ್ನು ಹೆಚ್ಚಿಸಲು ಪ್ಲ್ಯಾನ್‌ ಮಾಡಿದೆ. ಇದೀಗ ನಂದಿನಿ ದೋಸೆ ಹಾಗೂ ಇಡ್ಲಿ ಹಿಟ್ಟು ಆನ್‌ಲೈನ್‌ನಲ್ಲಿಯೂ ಸಿಗಲಿದ್ದು, ನಿಮ್ಮ ಮನೆಗೆ ಬಂದು ತಲುಪಲಿದೆ.

ನಾಲ್ಕು ತಿಂಗಳಲ್ಲಿ ಖಾಸಗಿ ಕಂಪನಿಗಳಿಗೆ ಪೈಪೋಟಿ ನೀಡ್ತಿರೋ ನಂದಿನಿ ಹಿಟ್ಟು.. ನಂದಿನಿ ಹಿಟ್ಟಿಗೆ ಬೇಡಿಕೆ ಬರುತ್ತಿದ್ದಂತೆ ನಂದಿನಿ ಹಾಲು, ಮೊಸರಿನ ಜತೆ ಸಪ್ಪೈ ಈ ಮೊದಲು ಪ್ರತ್ಯೇಕವಾಗಿ ಹಿಟ್ಟು ಪೂರೈಕೆ ಮಾಡುತ್ತಿದ್ದ ಕೆಎಂಎಫ್ ಆರಂಭದ ದಿನಗಳಲ್ಲಿ  ಕೇವಲ 500 ಕೆಜಿ ನಂದಿನಿ ಇಡ್ಲಿ, ದೋಸೆ ಹಿಟ್ಟು ಮಾರಾಟವಾಗುತ್ತಿತ್ತು.. ಇದೀಗ ನಿತ್ಯ ಇಡ್ಲಿ, ದೋಸೆ ಹಿಟ್ಟು 3500 ಕೆಜಿ ಮಾರಾಟ ಮಾಡ್ತಿರೋ ಕೆಎಂಎಫ್ ಮುಂದಿನ ತಿಂಗಳಿಂದ 5000 ಕೆಜಿ ನಂದಿನಿ ದೋಸೆ, ಇಡ್ಲಿ ಹಿಟ್ಟು ಮಾರಾಟದ ಗುರಿಯನ್ನು ಹೊಂದಿದೆ..

ನಂದಿನಿ ದೋಸೆ, ಇಡ್ಲಿ ಹಿಟ್ಟಿಗೆ ಮನಸೋತ ರಾಜ್ಯದ ನಂದಿನಿ ಗ್ರಾಹಕರು ರಾಜ್ಯದ ನಂದಿನಿ ಪಾರ್ಲರ್ ಗಳಲ್ಲಿ ಮಾರಾಟವಾಗ್ತಿರೋ ನಂದಿನಿ ಹಿಟ್ಟು  ರೆಡಿ ಟು ಕುಕ್ ಪರಿಕಲ್ಪನೆಯಡಿ ಇಡ್ಲಿ, ದೋಸೆ ಹಿಟ್ಟು ಮಾರುಕಟ್ಟೆಗೆ ಪರಿಚಯ.. ನಂದಿನಿ ಹಿಟ್ಟು ಉತ್ಪಾದನೆ ಮತ್ತು ಪ್ಯಾಕಿಂಗ್ ಖಾಸಗಿ ಏಜೆನ್ಸಿಗೆ ನೀಡಿರೋ ಕೆಎಂಎಫ್…

Comments (0)

Your email address will not be published. Required fields are marked *

Back to top button
Verified by MonsterInsights