Tuesday, February 10, 2026
16.6 C
Bengaluru
Google search engine
LIVE
ಮನೆ#Exclusive Newsಸಿ.ಜೆ. ರಾಯ್ ಆತ್ಮಹತ್ಯೆ ಕೇಸ್‌ನಲ್ಲಿ ಡೆತ್ ನೋಟ್ ಪತ್ತೆ; ಪತ್ರದಲ್ಲಿ ಏನಿದೆ?

ಸಿ.ಜೆ. ರಾಯ್ ಆತ್ಮಹತ್ಯೆ ಕೇಸ್‌ನಲ್ಲಿ ಡೆತ್ ನೋಟ್ ಪತ್ತೆ; ಪತ್ರದಲ್ಲಿ ಏನಿದೆ?

ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ. ರಾಯ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ಅವರು ಸಾವಿಗೂ ಮುನ್ನ ವಿವರವಾದ ಡೆತ್ ನೋಟ್ ಬರೆದಿಟ್ಟಿರುವುದು ಬೆಳಕಿಗೆ ಬಂದಿದೆ.

ಈ ಡೆತ್ ನೋಟ್ ಪೊಲೀಸರ ತನಿಖೆಗೆ ಅತ್ಯಂತ ಮಹತ್ವದ ಸುಳಿವು ನೀಡಿದ್ದು, ಅದರಲ್ಲಿ ರಾಯ್ ಅವರು ತಮ್ಮ ವೈಯಕ್ತಿಕ ಭಾವನೆಗಳು ಹಾಗೂ ವ್ಯವಹಾರದ ಭವಿಷ್ಯದ ಬಗ್ಗೆ ಸ್ಪಷ್ಟವಾಗಿ ಬರೆದಿದ್ದಾರೆ ಎನ್ನಲಾಗಿದೆ. ಇಂತಹ ಕಠಿಣ ನಿರ್ಧಾರ ಕೈಗೊಳ್ಳುತ್ತಿರುವುದಕ್ಕೆ ಕುಟುಂಬದವರ ಕ್ಷಮೆಯಾಚಿಸಿದ್ದಾರೆ. ಇದಲ್ಲದೆ, ಉದ್ಯಮಕ್ಕೆ ಸಂಬಂಧಿಸಿದಂತೆ ತಮಗೆ ಯಾರಿಂದ ಎಷ್ಟು ಹಣ ಬರಬೇಕು ಎಂಬ ಸಂಪೂರ್ಣ ವಿವರಗಳನ್ನು ದಾಖಲಿಸಿದ್ದಾರೆ. ತಮ್ಮ ಸಾವಿನ ನಂತರ ಕಾನ್ಫಿಡೆಂಟ್ ಗ್ರೂಪ್‌ನ ಉದ್ಯಮವನ್ನು ಯಾರು ಮುನ್ನಡೆಸಬೇಕು ಮತ್ತು ಉತ್ತರಾಧಿಕಾರಿಗಳು ಯಾರಾಗಬೇಕು ಎಂಬ ಬಗ್ಗೆಯೂ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ದಶಕಗಳಿಂದ ಸಂಸ್ಥೆಯ ಏಳಿಗೆಗೆ ಶ್ರಮಿಸಿದ ನಂಬಿಕಸ್ಥ ನೌಕರರನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಪ್ರಸ್ತುತ ಈ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ (SIT) ಅಧಿಕಾರಿಗಳು ಡೆತ್ ನೋಟ್ ಅನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಸಿ.ಜೆ. ರಾಯ್ ಅವರು ಈ ಹಿಂದೆಯೇ ತಮ್ಮ ವ್ಯವಹಾರ ಮತ್ತು ಸಾಲದ ವಿವರಗಳನ್ನು ಪತ್ನಿಯೊಂದಿಗೆ ಹಂಚಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಎಸ್‌ಐಟಿ ಅಧಿಕಾರಿಗಳು ಅವರ ಕುಟುಂಬಸ್ಥರಿಂದ ಹೆಚ್ಚಿನ ಹೇಳಿಕೆಗಳನ್ನು ಪಡೆಯಲಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments