Wednesday, December 10, 2025
26.6 C
Bengaluru
Google search engine
LIVE
ಮನೆರಾಜ್ಯಮನೆಯ ಗೋಡೆಗೆ ಡಿಕ್ಕಿ ಹೋಡೆದ ಸಿಮೆಂಟ್​ ಲಾರಿ; ಗೋಡೆ ಕುಸಿದು ಮಗು ಸಾವು

ಮನೆಯ ಗೋಡೆಗೆ ಡಿಕ್ಕಿ ಹೋಡೆದ ಸಿಮೆಂಟ್​ ಲಾರಿ; ಗೋಡೆ ಕುಸಿದು ಮಗು ಸಾವು

ಬೆಂಗಳೂರು: ವಿದ್ಯುತ್​​​​​ ವೈರಿಂಗ್​​​​​​​​​​​​​​​​ ತಂತಿ ಸಿಮೆಂಟ್​​ ಮಿಕ್ಸರ್​​ ಲಾರಿಗೆ ತಗುಲಿ ಲಾರಿಯನ್ನು ಎಳೆದೊಯ್ದು ಪರಿಣಾಮ ಮನೆಯ ಗೋಡೆಗೆ ಡಿಕ್ಕಿ ಹೋಡೆದಿದ್ದು, ಗೋಡೆ ಕುಸಿದು ಮಗು ಸಾವನ್ನಪ್ಪಿರುವ ಘಟನೆ ನಗರದ ಕುಂದಲಹಳ್ಳಿ ಕಾಲೋನಿಯಲ್ಲಿ ನಡೆದಿದೆ.

ಮೃತ ಮಗುವನ್ನು ಸಿದ್ದಪ್ಪ ಹಾಗೂ ಲಾವಣ್ಯ ದಂಪತಿಯ ಪುತ್ರ ಪ್ರಣವ್ (1 ವರ್ಷ 8 ತಿಂಗಳು) ಎಂದು ಗುರುತಿಸಲಾಗಿದೆ. ನ.7ರ ಸಂಜೆ ಹೊಸ ಮನೆಯೊಂದರ ಮೋಲ್ಡಿಂಗ್ ಕೆಲಸ ಮುಗಿಸಿ ಸಿಮೆಂಟ್ ಮಿಕ್ಸರ್ ಲಾರಿ ಹೋಗುತ್ತಿತ್ತು. ಈ ವೇಳೆ ಮೇಲೆ ಹಾದು ಹೋಗಿರುವ ವೈರಿಂಗ್ ವಿದ್ಯುತ್ ತಂತಿ ಲಾರಿಗೆ ಸಿಲುಕಿಕೊಂಡಿದೆ. ತಕ್ಷಣ ಸ್ಥಳೀಯರು ಕೂಗಿಕೊಂಡಿದ್ದಾರೆ. ಆದರೆ ಚಾಲಕ ಗಮನಿಸದೇ ಲಾರಿ ಚಲಾಯಿಸಿದ್ದರಿಂದ ವೈರಿಂಗ್ ಕಂಬ ಕಿತ್ತು ಬಂದಿದೆ. ಅಲ್ಲದೇ ಮನೆಯ ಗೋಡೆ ಕುಸಿದು ಆಟ ಆಡ್ತಿದ್ದ ಮಗುವಿನ ಮೇಲೆ ಬಿದ್ದಿದೆ.

ಗಂಭೀರವಾಗಿ ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಸಾವನ್ನಪ್ಪಿದೆ. ಮಗುವಿನ ಶವವನ್ನು ಬೌರಿಂಗ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಮೃತ ಮಗುವಿನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಹೆಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments