Tuesday, February 10, 2026
19.8 C
Bengaluru
Google search engine
LIVE
ಮನೆರಾಜ್ಯನಮ್ಮ ಮೆಟ್ರೋ ಪ್ರಯಾಣಿಕರೇ ಎಚ್ಚರ: ನಿಮ್ಮ ಮೇಲೆ ಇರಲಿದೆ 'ಹೋಮ್ ಗಾರ್ಡ್' ಕಣ್ಣು

ನಮ್ಮ ಮೆಟ್ರೋ ಪ್ರಯಾಣಿಕರೇ ಎಚ್ಚರ: ನಿಮ್ಮ ಮೇಲೆ ಇರಲಿದೆ ‘ಹೋಮ್ ಗಾರ್ಡ್’ ಕಣ್ಣು

ಬೆಂಗಳೂರು: ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವಾಗ ನಿಮ್ಮಿಷ್ಟದಂತೆ ವರ್ತಿಸುವ ಕಾಲ ಮುಗಿಯಿತು. ಸಹ-ಪ್ರಯಾಣಿಕರಿಗೆ ತೊಂದರೆ ನೀಡುವ, ಮೆಟ್ರೋ ನಿಯಮಗಳನ್ನು ಗಾಳಿಗೆ ತೂರುವವರಿಗೆ ಬಿಸಿ ಮುಟ್ಟಿಸಲು ಬಿಎಂಆರ್‌ಸಿಎಲ್ (BMRCL) ಈಗ ‘ಮೆಟ್ರೋ ಶಿಷ್ಟಾಚಾರ’ (Metro Etiquette) ಅಭಿಯಾನಕ್ಕೆ ಮುಂದಾಗಿದೆ.

ಕಳೆದ ಒಂದು ವರ್ಷದಲ್ಲಿ ಬರೊಬ್ಬರಿ 1 ಲಕ್ಷಕ್ಕೂ ಹೆಚ್ಚು ಉಲ್ಲಂಘನೆ ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ, ಪ್ರತಿಯೊಂದು ರೈಲಿನಲ್ಲಿ ಇಬ್ಬರು ಹೋಮ್ ಗಾರ್ಡ್‌ಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಉಲ್ಲಂಘನೆಯ ಅಂಕಿ-ಅಂಶಗಳು (ಕಳೆದ ಒಂದು ವರ್ಷ)

ಹೆಡ್‌ಫೋನ್ ಇಲ್ಲದೆ ಸಂಗೀತ/ವಿಡಿಯೋ ವೀಕ್ಷಣೆ: 57,538 ಪ್ರಕರಣಗಳು.

ಮೀಸಲಿಟ್ಟ ಸೀಟು ಬಿಟ್ಟುಕೊಡದಿರುವುದು: 37,038 ಪ್ರಕರಣಗಳು

ಆಹಾರ ಸೇವನೆ: 1,907 ಪ್ರಕರಣಗಳು.

ಗುಟ್ಕಾ ಅಥವಾ ಪಾನ್ ಅಗಿಯುವುದು: 1,677 ಪ್ರಕರಣಗಳು.

ದಂಡದ ದರಪಟ್ಟಿ: ಯಾವ ತಪ್ಪಿಗೆ ಎಷ್ಟು ಶಿಕ್ಷೆ?

ಮೆಟ್ರೋ ರೈಲ್ವೆ ಕಾಯ್ದೆ 2002ರ ಅಡಿಯಲ್ಲಿ ಈ ಕೆಳಗಿನ ದಂಡಗಳನ್ನು ವಿಧಿಸಲಾಗುತ್ತದೆ.

ರೈಲಿನಲ್ಲಿ ಯಾರಾದರೂ ಅಶಿಸ್ತು ತೋರುತ್ತಿದ್ದರೆ ಅಥವಾ ಗುಟ್ಕಾ ಸೇವಿಸುತ್ತಿದ್ದರೆ ಪ್ರಯಾಣಿಕರು ತಕ್ಷಣ ಈ ಕೆಳಗಿನ ಕ್ರಮ ಕೈಗೊಳ್ಳಬಹುದು. ಪ್ರತಿ ಬಾಗಿಲಿನ ಪಕ್ಕದಲ್ಲಿರುವ ಬಟನ್ ಒತ್ತಿ ನೇರವಾಗಿ ರೈಲು ಚಾಲಕನಿಗೆ ಮಾಹಿತಿ ನೀಡಬಹುದು. ಟೋಲ್ ಫ್ರೀ ಸಂಖ್ಯೆ 1800-425-12345 ಅಥವಾ 080-23019111 ಗೆ ಕರೆ ಮಾಡಿ ದೂರು ಸಲ್ಲಿಸಬಹುದು. ಇನ್ನು ಮೆಟ್ರೋ ಸಾರ್ವಜನಿಕ ಆಸ್ತಿ. ಇಲ್ಲಿ ಇತರರಿಗೆ ತೊಂದರೆ ನೀಡದೆ ನಾಗರಿಕ ಪ್ರಜ್ಞೆ ಮೆರೆಯುವುದು ಪ್ರತಿಯೊಬ್ಬ ಪ್ರಯಾಣಿಕನ ಜವಾಬ್ದಾರಿ,” ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments