Top Newsಜನಸಾಮಾನ್ಯರ ದನಿರಾಜ್ಯ

Panchamitra whatsapp Chat: ಇನ್ಮುಂದೆ ವಾಟ್ಸಪ್​ನಲ್ಲಿಯೇ ಪಡೆಯಿರಿ ಗ್ರಾ.ಪಂ ಸೇವೆ

ಗ್ರಾಮ ಪಂಚಾಯ್ತಿಯ ಎಲ್ಲಾ ಸೇವೆಗಳು ಇನ್ಮುಂದೆ ನಿಮ್ಮ ಅಂಗೈನಲ್ಲೇ ಕೈಗೆಟುಕಲಿವೆ. ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಲಭ್ಯ ಇರುವ ಎಲ್ಲಾ ಬಗೆಯ ಸೇವೆಗಳನ್ನು ಆನ್​ಲೈನ್​ ಮೂಲಕವೇ ಪಡೆಯಬಹುದಾಗಿದೆ.ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯ ಪಂಚಮಿತ್ರ ವಾಟ್ಸಪ್ ಚಾಟ್ ಆರಂಭಿಸಿದೆ

ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಕೆ.. ಆ ಅರ್ಜಿಗಳ ಸ್ಥಿತಿಗತಿ ಪರಿಶೀಲನೆ, ಗ್ರಾಮಪಂಚಾಯ್ತಿ ಮಟ್ಟದ ಎಲ್ಲಾ ಕುಂದುಕೊರತೆಗಳ ಬಗ್ಗೆ ಆನ್​ಲೈನ್​ನಲ್ಲಿ ದಾಖಲಿಸಿ, ಅಲ್ಲಿಯೇ ಪರಿಹಾರ ಪಡೆಯುವ ಸೌಲಭ್ಯವನ್ನು ಪಂಚಮಿತ್ರ ವಾಟ್ಸಪ್​ ಚಾಟ್​ ಮೂಲಕವೇ ಪಡೆಯುವ ಸೌಲಭ್ಯವನ್ನು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಕಲ್ಪಿಸಿದೆ.

ವಾಟ್ಸಪ್​ನಲ್ಲಿ ಗ್ರಾ.ಪಂ ಸೇವೆ ಹೇಗೆ?

  • ನಿಮ್ಮ ಮೊಬೈಲ್​ನಲ್ಲಿ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ವಾಟ್ಸಪ್ ನಂಬರ್ 82-77-50-60-00 ಅನ್ನು ಸೇವ್ ಮಾಡಿಕೊಂಡು ವಾಟ್ಸಪ್ ಚಾಟ್ ಆರಂಭಿಸಿ
  • ಮೊದಲಿಗೆ ನೀವು ಬಳಸುವ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ
  • ನಂತರ ನಿಮ್ಮ ಹೆಸರು, ವಿಳಾಸ,ಮೊಬೈಲ್ ನಂಬರ್ ದಾಖಲಿಸಿ ಲಾಗಿನ್ ಮಾಡಿಕೊಳ್ಳಿ
  • ನಂತರ ತನ್ನಿಂತಾನೆ ಕೆಲ ಆಯ್ಕೆಗಳು ಲಭ್ಯವಾಗುತ್ತಾ ಹೋಗುತ್ತದೆ
  • ಕ್ರಮ ಸಂಖ್ಯೆ ನಮೂದಿಸುವ ಮೂಲಕ ನಿಮ್ಮ ಜಿಲ್ಲೆ, ನಿಮ್ಮ ತಾಲೂಕು, ನಿಮ್ಮ ಗ್ರಾಮಪಂಚಾಯ್ತಿ ಆಯ್ಕೆ ಮಾಡಿಕೊಳ್ಳಿ
  • ನಿಮ್ಮ ಗ್ರಾಮ ಪಂಚಾಯ್ತಿಯನ್ನು ಆಯ್ಕೆ ಮಾಡಿಕೊಂಡಲ್ಲಿ ಅಲ್ಲಿ ನಿಮ್ಮ ಚುನಾಯಿತ ಪ್ರತಿನಿಧಿಗಳು, ಸಿಬ್ಬಂದಿ ಮಾಹಿತಿ ಇರುತ್ತದೆ
  • ನಿಮಗೆ ಬೇಕಾದ ಸೇವೆಯನ್ನು ಆಯ್ಕೆ ಮಾಡಿಕೊಳ್ಳಿ.. ಅದಕ್ಕೆ ಬೇಕಾದ ದಾಖಲೆಗಳನ್ನು ಆನ್​ಲೈನ್ ಮೂಲಕ ಒದಗಿಸಿ. ಅಲ್ಲಿಯೇ ಉತ್ತರ ಪಡೆದುಕೊಳ್ಳಿ
  • ಕಟ್ಟಡ ನಿರ್ಮಾಣ ಪರವಾನಗಿ, ನೀರು ಸರಬರಾಜು ಸಂಪರ್ಕ-ಕಡಿತ, ವ್ಯಾಪಾರ ಪರವಾನಗಿ ಸೇರಿ ಇತರೆ ಎಲ್ಲಾ ಸೇವೆಗಳ ಅರ್ಜಿಗಳನ್ನು ವಾಟ್ಸಪ್ ಚಾಟ್ ಮೂಲಕವೇ ಸಲ್ಲಿಸಬಹುದು.
  • ಬಳಿಕ ವಾಟ್ಸಪ್ ಚಾಟ್ ಮೂಲಕವೇ ಅವುಗಳ ಸ್ಥಿತಿಗತಿ ಪರಿಶೀಲಿಸಬಹುದು
  • ಬೀದಿ ದೀಪ ನಿರ್ವಹಣೆ, ಕುಡಿಯುವ ನೀರು, ರಸ್ತೆ-ಸೇತುವೆ ದುರಸ್ತಿ, ತ್ಯಾಜ್ಯ ನಿರ್ವಹಣೆ, ನರೇಗಾ ಯೋಜನೆ ಜಾಬ್ ಕಾರ್ಡ್, ರಸ್ತೆ ಅಗೆಯುವುದಕ್ಕೆ ಅನುಮತಿ, ಕಾರ್ಮಿಕರಿಗೆ ಉದ್ಯೋಗ ಸೇರಿ 28 ವಿಭಾಗಗಳ ಕುಂದುಕೊರತೆಗಳನ್ನು ದಾಖಲಿಸಿ, ಆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ

 

 

Comments (0)

Your email address will not be published. Required fields are marked *

Back to top button