ರಾಜ್ಯ

ಬೆಂಗಳೂರಿನಲ್ಲಿ ಬೈಕ್ ಡಿಕ್ಕಿ ಹಿರಿಯ ವಕೀಲ ಸಾವು

ಬೆಂಗಳೂರು : ಬಸವನಗುಡಿಯ ಗಾಂಧಿ ಬಜಾರ್ ರಸ್ತೆಯಲ್ಲಿ ಬೈಕ್ ಡಿಕ್ಕಿಯಾಗಿ ಶಿವಮೊಗ್ಗ ಮೂಲದ ಹಿರಿಯ ವಕೀಲ ಸಾವನ್ನಪ್ಪಿದ್ದಾರೆ.

ಕೆಟಿಎಂ ಬೈಕ್ ನಲ್ಲಿ ಅತೀ ವೇಗವಾಗಿ ಬಂದು ವಕೀಲ ಡಾಕಪ್ಪ ಅವರಿಗೆ ಡಿಕ್ಕಿ ಹೊಡೆದ ಬೈಕ್ ಸವಾರ ಆದಿತ್ಯಾ (21). ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದು ಮಣಿಪಾಲ್ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಡಾಕಪ್ಪ ನಿಧನರಾಗಿದ್ದಾರೆ.

ಹೈ ಕೋರ್ಟ್ ಹಾಗೂ ಇತರ ನ್ಯಾಯಾಲಯದಲ್ಲಿ ಹಿರಿಯ ವಕೀಲರಾಗಿದ್ದ ಡಾಕಪ್ಪ. ಶಿವಮೊಗ್ಗ ಮೂಲದ ತೀರ್ಥಹಳ್ಳಿಯ ಕೌರಿ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ವಕೀಲ ವೃತ್ತಿ ಮಾಡುತ್ತಿದ್ರು. ಇನ್ನು, ವಿದ್ಯಾರ್ಥಿ ಆದಿತ್ಯಾಗೂ ಗಂಭೀರ ಗಾಯ ಆಸ್ಪತ್ರೆಗೆ ದಾಖಲಾಗಿದ್ದು, ಬಸವನಗುಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

Comments (0)

Your email address will not be published. Required fields are marked *

Back to top button