ಆರೋಗ್ಯರಾಜ್ಯವಿಶೇಷ

ಬೆಂಗಳೂರಿನ ಜಯನಗರದಲ್ಲಿ ಐಸ್ ಕ್ರೀಂ ಸವಿದ ಬ್ರಿಟನ್ ಪ್ರಧಾನಿ ಪತ್ನಿ!

ಬೆಂಗಳೂರು: ಇನ್ಫೋಸಿಸ್ ಸಂಸ್ಥಾಪಕ ಎನ್‌.ಆರ್ ನಾರಾಯಣ ಮೂರ್ತಿ ಮತ್ತು ಅವರ ಮಗಳು ಬ್ರಿಟನ್‌ನ ಪ್ರಥಮ ಮಹಿಳೆ ಅಕ್ಷತಾ ಮೂರ್ತಿ ಅವರು ಒಟ್ಟಿಗೆ ಕುಳಿತು ಸಾಮಾನ್ಯರಂತೆ ಐಸ್‌ಕ್ರೀಂ ಸವಿಯುತ್ತಿರುವ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಎಲ್ಲೆಡೆ ಪ್ರಶಂಸೆಯ ಸುರಿಮಳೆ ಬಂದಿದೆ.

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ತಮ್ಮ ತಂದೆ ನಾರಾಯಣ ಮೂರ್ತಿ ಅವರೊಂದಿಗೆ ಬೆಂಗಳೂರಿನ ಜನಪ್ರಿಯ ಐಸ್ ಕ್ರೀಮ್ ಜಾಯಿಂಟ್ ಕಾರ್ನರ್ ಹೌಸ್‌ನಲ್ಲಿ ಕಾಣಿಸಿಕೊಂಡರು. ಕ್ಯಾಶುಯಲ್ ಡ್ರೆಸ್ ಧರಿಸಿದ್ದರು. ಬೆಂಗಳೂರಿನ ಜಯನಗರದಲ್ಲಿರುವ ಕಾರ್ನರ್ ಹೌಸ್‌ನಲ್ಲಿ ಅಪ್ಪ ಮಗಳು ಇಬ್ಬರು ಕುಳಿತು ಐಸ್‌ಕ್ರೀಂ ಸವಿಯುತ್ತಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಶೇರ್‌ ಮಾಡಿಕೊಂಡಿದ್ದಾರೆ.

https://youtu.be/d0-nRycivOw?si=U6zrUmq-W2Jro4UM

Comments (0)

Your email address will not be published. Required fields are marked *

Back to top button