bengaluruಕ್ರೈಂ ಸ್ಟೋರಿ

ಬೆಂಗಳೂರಲ್ಲಿ ಜಿಮ್ ಟ್ರೈನರ್ ಅನುಮಾನಾಸ್ಪದ ಸಾವು!

Gym trainer dies under suspicious circumstances in Bengaluru!

ಬೆಂಗಳೂರು : ನಗರದ ಹೆಬ್ಬಾಳದ ಕೆಂಪಾಪುರದಲ್ಲಿ ಜಿಮ್ ಟ್ರೈನರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಸ್ನೇಹಿತರೇ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ನಂದನ್ (25) ಹಲ್ಲೆಗೊಳಗಾಗಿ ಸಾವನ್ನಪ್ಪಿದ ಯುವಕ.

ಸ್ನೇಹಿತರೊಂದಿಗೆ ತೆರಳಿದ್ದ ವೇಳೆ ನಡೆದ ಗಲಾಟೆಯಲ್ಲಿ ಸ್ನೇಹಿತರೇ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಮೃತನ ತಾಯಿ ಗಂಭೀರ ಆರೋಪ ಮಾಡಿದ್ದು, ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶನಿವಾರ ಜಿಮ್ ಮೊದಲ ವರ್ಷದ ಆ್ಯನಿವರ್ಸರಿ ಇತ್ತು. ತಡವಾದರೆ ಬೆಳಗ್ಗೆ ಬರುತ್ತೇನೆ ಅಂತ ಮನೆಯವರಿಗೆ ಹೇಳಿ ನಂದನ್ ತೆರಳಿದ್ದರು. ಆ್ಯನಿವರ್ಸರಿ ಮುಗಿಸಿ ಇತರೆ ಸಿಬ್ಬಂದಿ ಜೊತೆ ಪರಿಚಿತರ ಅಪಾರ್ಟ್ಮೆಂಟ್‌ಗೆ ಹೋಗಿದ್ದರು. ಈ ವೇಳೆ ಗಲಾಟೆ ನಡೆದು ನಂದನ್ ಮೇಲೆ ಹಲ್ಲೆಯಾಗಿರುವ ಆರೋಪ ಕೇಳಿಬಂದಿದೆ. 

ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ನಂದನ್ ಸಾವನ್ನಪ್ಪಿದ್ದಾರೆ. ವಿಚಾರ ತಿಳಿದು ಆಸ್ಪತ್ರೆಗೆ ಜಿಮ್‌ ಟ್ರೈನರ್‌ ತಾಯಿ ತೆರಳಿದ್ದರು. ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ. ಅಪಾರ್ಟ್ಮೆಂಟ್‌ನಲ್ಲಿ ಗಲಾಟೆ ನಡೆದು ಮಾರಣಾಂತಿಕ ಹಲ್ಲೆ ಮಾಡಲಾಗಿದೆ ಎಂದು ದೂರು ನೀಡಲಾಗಿದೆ. ದೂರಿನ ಮೇರೆಗೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಾಲ್ವರ ವಿರುದ್ಧ ಅಮೃತಹಳ್ಳಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.

Comments (0)

Your email address will not be published. Required fields are marked *

Back to top button
Verified by MonsterInsights