ಹುಣಸೂರು: ಕುರ್ಕುರೆ ಪ್ಯಾಕೆಟ್ನಲ್ಲಿದ್ದ ಪ್ಲಾಸ್ಟಿಕ್ ಗಿಫ್ಟ್ ಬಾಲ್ ನುಂಗಿ ಬಾಲಕ ದಾರುಣ ಸಾವು

ಹುಣಸೂರು: ಕುರ್ಕುರೆ ಪಾಕೆಟ್ನಲ್ಲಿದ್ದ ಪ್ಲಾಸ್ಟಿಕ್ ಗಿಫ್ಟ್ ಬಾಲ್ ಕುರ್ಕುರೆ ಎಂದುಕೊಂಡು ನುಂಗಿ ಐದು ವರ್ಷದ ಕಂದ ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ಆ.1ರ ಶನಿವಾರ ನಡೆದಿದೆ.
ಗೌರಿಪುರ ಗ್ರಾಮದ ಸಂತೋಷ್ ಹಾಗೂ ಐಶ್ವರ್ಯ ದಂಪತಿಯ ಏಕೈಕ ಪುತ್ರ ಮುಕುಂದ್ ಮಯೂರ್ (3) ಮೃತಪಟ್ಟ ಮಗು.
ಈಗಿನ ಕಾಲಘಟ್ಟದಲ್ಲಿ ಮಕ್ಕಳನ್ನು ಸುರಕ್ಷತೆಯಿಂದ ನೋಡಿಕೊಳ್ಳುವುದೇ ಪೋಷಕರಿಗೆ ಒಂದು ಸವಾಲಾಗಿದೆ..ಯಾವ ಕ್ಷಣದಲ್ಲಿ ಯಾವ ಅಪಾಯಕ್ಕೆ ತುತ್ತಾಗುವ ಸಾಧ್ಯತೆಯಿದೆ ಎಂಬುದಕ್ಕೆ ಇಲ್ಲೊಂದು ನೈಜ ಘಟನೆ ಸಾಕ್ಷಿಯಾಗಿದೆ. ಮಗು ಅಳುತ್ತಿದ್ದಾಗ ಸಂಬಂಧಿಕರ ಮಕ್ಕಳು ಗೌರಿಪುರದ ಸ್ಥಳೀಯ ಅಂಗಡಿಯಿಂದ ಕುರುಕಲು ತಿಂಡಿಯ ಪ್ಯಾಕೆಟ್ ಕೊಡಿಸಿದ್ದಾರೆ. ಮಕ್ಕಳನ್ನು ಆಕರ್ಷಿಸಲು ಕಂಪನಿಯವರು ಪ್ಯಾಕೆಟ್ ಒಳಗೆ ಇಟ್ಟಿದ್ದ ಸಣ್ಣ ಪ್ಲಾಸ್ಟಿಕ್ ಬಾಲ್ ಅನ್ನು ಅರಿಯದ ಮಗು, ತಿಂಡಿಯೊಂದಿಗೆ ಅದನ್ನೂ ನುಂಗಿದೆ. ಬಾಲ್ ಗಂಟಲಿನಲ್ಲಿ ಸಿಕ್ಕಿಬಿದ್ದು ಮಗು ತೀವ್ರವಾಗಿ ಒದ್ದಾಡುವುದನ್ನು ಗಮನಿಸಿದ ಕುಟುಂಬಸ್ಥರು ತಕ್ಷಣವೇ ಹುಣಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗಮಧ್ಯದಲ್ಲೇ ಮಗು ಉಸಿರುಗಟ್ಟಿ ಕೊನೆಯುಸಿರೆಳೆದಿದೆ.
ಮಗುವಿನ ಸಾವಿಗೆ ಹೊಣೆ ಯಾರು?
ಮೃತ ಬಾಲಕ ಮುಕುಂದ್ ಮಯೂರ್ಗೆ ಈಗ ಐದು ವರ್ಷ ಅಷ್ಟೇ.. ಮಾಹಿತಿಯ ಪ್ರಕಾರ, ಮಗು ಕುರ್ಕುರೆ ಪಾಕೆಟ್ ಖರೀದಿಸಿದೆ. ಆ ಪಾಕೆಟ್ನ ಒಳಗೆ ಗಿಫ್ಟ್ ಬಾಲ್ ಬಂದಿದೆ. ಕುರ್ಕುರೆ ತಿಂದ ಬಳಿಕ ಗಿಫ್ಟ್ ಬಾಲ್ಅನ್ನು ಬಾಯಿಗೆ ಹಾಕಿರುವ ಮುಕುಂದ್ ಅಕಸ್ಮಿಕವಾಗಿ ನುಂಗಿದಾಗ ಗಂಟಲಲ್ಲಿ ಸಿಲುಕಿ ಉಸಿರುಗಟ್ಟಿ ಬಾಲಕ ಮೃತಪಟ್ಟಿದ್ದಾನೆ. ಈ ಆಘಾತಕಾರಿ ಘಟನೆಯಲ್ಲಿ ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟಿದೆ. ಕುರ್ಕುರೆ ಪಾಕೆಟ್ ಹೆಚ್ಚಾಗಿ ಚಿಕ್ಕ ಮಕ್ಕಳು ಇಷ್ಟಪಡ್ತಾರೆ.. ಕುರ್ಕುರೆಯಲ್ಲಿ ಪ್ಲಾಸ್ಟಿಕ್ ಗಿಫ್ಟ್ ಬಾಲ್ ಇರುವುದು ತಿಳಿಯದ ಮಕ್ಕಳು ಕುರ್ಕುರೆ ಎಂದು ತಿಂದರೆ ಅಥವಾ ನುಂಗಿ ಮಕ್ಕಳ ಜೀವಕ್ಕೆ ಅಪಾಯವಾದರೆ ಯಾರು ತಾನೆ ಹೊಣೆ? ಈಗ ಸಾವನ್ನಪ್ಪಿರುವ ಮಗುವಿಗೆ ಕೂಡ ಅದೇ ರೀತಿ ನಡೆದಿರುವ ಸಾಧ್ಯತೆ ಇದೆ.ಆಹಾರ ಪದಾರ್ಥಗಳೊಂದಿಗೆ ಇಂತಹ ಅಪಾಯಕಾರಿ ಆಟಿಕೆಗಳನ್ನು ಸೇರಿಸಿ ಮಾರಾಟ ಮಾಡುವ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ತಿನಿಸುಗಳ ಜೊತೆ ಇಂತಹ ವಸ್ತುಗಳನ್ನು ಸೇರಿಸದಂತೆ ಸರ್ಕಾರ ಕಟ್ಟುನಿಟ್ಟಿನ ಎಚ್ಚರಿಕೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.




