bengaluruರಾಜಕೀಯ

‘SIR’ ಆಪರೇಷನ್, ಲೀಡರ್ಸ್ ನಡುಕ – ಬೆಂಗಳೂರಿನಲ್ಲೇ 4 ಲಕ್ಷ ನಕಲಿ ಮತದಾರರು!

SIR process in Bangalore 4 lakh duplicate voters in City itself

ಬೆಂಗಳೂರು: ರಾಜಧಾನಿ ಬೆಂಗಳೂರಿನ ರಾಜಕೀಯ ನಾಯಕರ ಹೃದಯ ಬಡಿತ ಹೆಚ್ಚಾಗಿದೆ. ಪ್ರಮುಖ ಕಾರಣ ‘SIR’ (Systematic & Intensive Revision / ಮತದಾರರ ಪಟ್ಟಿ ಪರಿಷ್ಕರಣೆ). ಕಳೆದ ಎರಡು ದಿನಗಳಿಂದ ಬೆಂಗಳೂರಿನಾದ್ಯಂತ ಬಿರುಸಿನಿಂದ ನಡೆಯುತ್ತಿರುವ ಮನೆ ಮನೆ ಸಮೀಕ್ಷೆ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವು ಹಲವು ಅಚ್ಚರಿಯ ಮತ್ತು ಆಘಾತಕಾರಿ ಮಾಹಿತಿಗಳನ್ನು ಹೊರಹಾಕುತ್ತಿದೆ. ಅಂತಿಮ ಮತದಾರರ ಪಟ್ಟಿಯಿಂದ ಅನರ್ಹರ ಹೆಸರುಗಳನ್ನು ಸಂಪೂರ್ಣವಾಗಿ ಕೈಬಿಡಲು ‘SIR’ ತರಬೇತಿ ಪಡೆದ ಅಧಿಕಾರಿಗಳ ತಂಡ ಸಜ್ಜಾಗಿದ್ದು, ಇದು ಹಲವು ಹಾಲಿ-ಮಾಜಿ ಶಾಸಕರ ನಿದ್ದೆಗೆಡಿಸಿದೆ.

4 ಲಕ್ಷ ಕಳ್ಳ ಮತದಾರರು! ಬಯಲಾಯ್ತು ಅಕ್ರಮ!


ಬೆಂಗಳೂರು ಮಹಾನಗರ ವ್ಯಾಪ್ತಿಯ ಐದು ನಗರ ಪಾಲಿಕೆಗಳ 28 ವಿಧಾನಸಭಾ ಕ್ಷೇತ್ರಗಳಲ್ಲಿ ಸದ್ಯ ಸುಮಾರು 97 ಲಕ್ಷ ಮತದಾರರಿದ್ದಾರೆ. ಆದರೆ, ಪ್ರಸ್ತುತ ನಡೆಯುತ್ತಿರುವ ‘SIR’ ಪರಿಷ್ಕರಣೆ ವೇಳೆ ಪ್ರಾಥಮಿಕವಾಗಿ ಸಿಕ್ಕಿರುವ ಮಾಹಿತಿ ಇಡೀ ರಾಜಕೀಯ ವಲಯ ಬೆಚ್ಚಿಬೀಳಿಸಿದೆ. ಸುಮಾರು 3 ರಿಂದ 4 ಲಕ್ಷ ಮಂದಿ ಬೆಂಗಳೂರಿನ ಜೊತೆಗೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಅಥವಾ ಹೊರ ರಾಜ್ಯಗಳ ಮತದಾರರ ಪಟ್ಟಿಯಲ್ಲೂ ಹೆಸರು ಹೊಂದಿರುವುದು ಪತ್ತೆಯಾಗಿದೆ. ಸುಮಾರು 11 ಸಾವಿರಕ್ಕೂ ಹೆಚ್ಚು ಮಂದಿ ಒಂದೇ ವಿಧಾನಸಭಾ ಕ್ಷೇತ್ರದ ವಿವಿಧ ಮತಗಟ್ಟೆಗಳ ಪಟ್ಟಿಯಲ್ಲಿ ಹೆಸರು ಹೊಂದಿರುವುದು ಬೆಳಕಿಗೆ ಬಂದಿದೆ.

ಸದ್ಯ ಚಾಲ್ತಿಯಲ್ಲಿರುವ ಈ ವಿಶೇಷ ಪರಿಷ್ಕರಣೆ (SIR) ವೇಳೆ ಮೃತರಾದವರು, ಕಾಯಂ ಆಗಿ ವಿಳಾಸ ಬದಲಿಸಿದವರು ಹಾಗೂ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಅಕ್ರಮವಾಗಿ ಹೆಸರು ಹೊಂದಿರುವ ಮತದಾರರನ್ನು ಜಾಲಾಡಿ ಗುರುತಿಸಲಾಗುತ್ತಿದೆ. ಚುನಾವಣಾ ನಿಯಮಾವಳಿಗಳ ಪ್ರಕಾರ ಒಬ್ಬ ಮತದಾರನ ಹೆಸರು ದೇಶದ ಯಾವುದೇ ಒಂದು ಮತಗಟ್ಟೆಯಲ್ಲಿ ಮಾತ್ರ ಇರಲು ಕಾನೂನಿನಲ್ಲಿ ಅವಕಾಶವಿದೆ. ಹೀಗಾಗಿ ನಕಲಿ ಮತಗಳನ್ನು ನೆಚ್ಚಿಕೊಂಡಿದ್ದ ನಾಯಕರಿಗೆ ಈ ಆಪರೇಷನ್ ದೊಡ್ಡ ಶಾಕ್ ನೀಡಿದೆ.

ಯಶವಂತಪುರ ಕ್ಷೇತ್ರದಲ್ಲೇ ಅತಿ ಹೆಚ್ಚು ಅಕ್ರಮ!
ಮೂಲಗಳ ಪ್ರಕಾರ, ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ‘ಕಳಪೆ’ ಅಥವಾ ನಕಲಿ ಮತದಾರರು ಇರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಕಲಿ ವೋಟರ್‌ಗಳನ್ನು ಸೃಷ್ಟಿಸಿದ್ದ ನಾಯಕರಿಗೆ ಈಗ ಈ ವೋಟ್‌ಗಳು ಡಿಲೀಟ್ ಆಗುವ ಭೀತಿ ಎದುರಾಗಿದೆ. ಅನರ್ಹರನ್ನು ಪಟ್ಟಿಯಿಂದ ಹೊರಹಾಕಿ, ಅಂತಿಮವಾಗಿ ಪಾರದರ್ಶಕ ಮತದಾರರ ಪಟ್ಟಿ ಬಿಡುಗಡೆ ಮಾಡಲು ಚುನಾವಣಾ ವಿಭಾಗದ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

#VoterListRevision #SIR #BengaluruVoters #FakeVoters #KarnatakaPolitics #ElectionCommission #Yeshwanthpur #BBMPNews #PoliticalSensation #FreedomTVKannada #BreakingNews #BengaluruPolitics

Comments (0)

Your email address will not be published. Required fields are marked *

Back to top button