bengaluruಮನರಂಜನೆ

ಹಲ್ಕಾ ಡಾನ್’ ಚಿತ್ರಕ್ಕೆ ಜಾನ್ ವಿಜಯ್ ಖಳನಾಯಕ!

John vijay villain in Halka Don kannada movie

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಬಿಗ್ ಬಜೆಟ್ ಹಾಗೂ ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾಗಳದ್ದೆ ಹವಾ. ಅದರಲ್ಲೂ ಪರಭಾಷಾ ಸ್ಟಾರ್ ನಟರು ಕನ್ನಡದತ್ತ ಮುಖ ಮಾಡುತ್ತಿರುವುದು ಚಂದನವನದ ಬೆಳವಣಿಗೆಯನ್ನು ತೋರಿಸುತ್ತದೆ. ಇದೀಗ ಅದೇ ಸಾಲಿಗೆ ಮತ್ತೊಬ್ಬ ಸೌತ್ ಇಂಡಿಯನ್ ಸ್ಟಾರ್ ನಟ ಸೇರ್ಪಡೆಯಾಗಿದ್ದಾರೆ. ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ತಮ್ಮದೇ ಆದ ಖದರ್ ತೋರಿಸಿರುವ ಬಹುಭಾಷಾ ನಟ ಜಾನ್ ವಿಜಯ್ ಈಗ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾ ‘ಹಲ್ಕಾ ಡಾನ್’ ಅಂಗಳಕ್ಕೆ ಅದ್ದೂರಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

ಕಣ್ಣುಗಳಲ್ಲೇ ನಟಿಸುವ ರಗಡ್ ಲುಕ್ ನಟ!


‘ಟಗರು’, ‘ಸಲಗ’ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ‘ಯುಐ’ (UI) ನಂತಹ ಬ್ಲಾಕ್ ಬಸ್ಟರ್ ಚಿತ್ರಗಳನ್ನು ಕನ್ನಡ ಪ್ರೇಕ್ಷಕರಿಗೆ ಉಣಬಡಿಸಿರುವ ಖ್ಯಾತ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಅವರು ‘ವೀನಸ್ ಎಂಟರ್‌ಟೈನರ್’ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ.
ಈಗಾಗಲೇ ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ ಪ್ರಮೋದ್ ನಾಯಕನಾಗಿ ಹಾಗೂ ಸ್ಯಾಂಡಲ್‌ವುಡ್ ಕ್ರಶ್ ಅಮೃತಾ ಅಯ್ಯಂಗಾರ್ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಜಾನ್ ವಿಜಯ್ ಸೇರ್ಪಡೆಯಾಗಿದ್ದಾರೆ. ಬಹುತಾರಾಗಣ ಸಿನಿಮಾದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ಚಿತ್ರತಂಡ ಬಿಡುಗಡೆ ಮಾಡಿರುವ ಸ್ಪೆಷಲ್ ಪೋಸ್ಟರ್‌ನಲ್ಲಿ ಜಾನ್ ವಿಜಯ್ ಅವರು ಕೂಲಿಂಗ್ ಗ್ಲಾಸ್ ಧರಿಸಿ, ಸಿಗರೇಟ್ ಸೇದುತ್ತಾ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ಹಂಚಿಕೊಂಡಿರುವ ಚಿತ್ರತಂಡ “ದಿ ಗೇಮ್ ಜಸ್ಟ್ ಗಾಟ್ ಬಿಗ್ಗರ್” ಎಂದು ಬರೆದುಕೊಂಡಿದ್ದು, ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ.

ಮತ್ತೆ ಕನ್ನಡಕ್ಕೆ ಮರಳಿದ ‘ಡ್ಯಾಡಿ’ ವಿಜಯ್!
ಜಾನ್ ವಿಜಯ್ ಅವರಿಗೆ ಕನ್ನಡ ಚಿತ್ರರಂಗ ಹೊಸದೇನಲ್ಲ. ಈ ಹಿಂದೆ ಅವರು ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್‌ಕುಮಾರ್ ಅಭಿನಯದ ಸೂಪರ್ ಹಿಟ್ ‘ಪೃಥ್ವಿ’ ಹಾಗೂ ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಗಜಕೇಸರಿ’ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿದ್ದರು. ಈಗ ಬಹಳ ವರ್ಷಗಳ ಬಳಿಕ ಮತ್ತೆ ‘ಹಲ್ಕಾ ಡಾನ್’ ಚಿತ್ರದ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡುತ್ತಿದ್ದಾರೆ.

ಅತಿಥಿ ಪಾತ್ರಧಾರಿಯಾಗಿ ಡೈಲಾಗ್ ಕಿಂಗ್- ಚಿತ್ರಕ್ಕೆ ಚಲ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದು, ಚಿತ್ರದಲ್ಲಿ ‘ಡೈಲಾಗ್ ಕಿಂಗ್’ ಸಾಯಿಕುಮಾರ್ ಅವರು ಪ್ರಮುಖ ಅತಿಥಿ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಈ ಸಿನಿಮಾ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ಅದ್ಧೂರಿಯಾಗಿ ಸಿದ್ಧಗೊಳ್ಳುತ್ತಿದೆ.

ಚಿತ್ರಕ್ಕೆ ಸಂಗೀತ ನಿರ್ದೇಶನವನ್ನು . ಹರಿಕೃಷ್ಣ ಮಾಡಲಿದ್ದು, ಛಾಯಾಗ್ರಹಣವನ್ನು ಸತ್ಯಾ ಹೆಗಡೆ ವಹಿಸಿಕೊಂಡಿದ್ದಾರೆ. ಸದ್ಯ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಇಡೀ ಟೀಮ್ ಹಗಲಿರುಳು ಶ್ರಮಿಸುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ವರ್ಷ ಸಿನಿಮಾ ಬೆಳ್ಳಿಪರದೆಗೆ ಅಪ್ಪಳಿಸಲಿದೆ.

#FreedomTV #HalkaDon #JohnVijay #Pramod #AmruthaIyengar #KPSrikanth #SandalwoodNews #KannadaCinema #SaiKumar #Harikrishna #SatyaHegde #NewKannadaMovie #BreakingNews

Comments (0)

Your email address will not be published. Required fields are marked *

Back to top button