ಜಿಲ್ಲೆಮನರಂಜನೆಸಿನಿಮಾ

ಟ್ರೆಂಡಿಂಗ್ ನಲ್ಲಿ “ಜಸ್ಟ್ ಪಾಸ್” ಚಿತ್ರದ ಫಸ್ಟ್ ಕ್ಲಾಸ್ ಟ್ರೇಲರ್

 ಬೆಂಗಳೂರು :  ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಎಲ್ಲರ ಮೆಚ್ಚುಗೆ ಪಡೆದಿರುವ “ಜಸ್ಟ್ ಪಾಸ್” ಚಿತ್ರದ ಟ್ರೇಲರ್ A2 music ಮೂಲಕ ಬಿಡುಗಡೆಯಾಗಿದೆ. ಟ್ರೇಲರ್ ಕೂಡ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿದೆ.

ಟ್ರೇಲರ್ ಬಿಡುಗಡೆ ನಂತರ ಮಾತನಾಡಿದ ನಿರ್ದೇಶಕ ಕೆ.ಎಂ.ರಘು, ಚಿತ್ರ ಇಷ್ಟು ಅದ್ದೂರಿಯಾಗಿ ಬರಲು ನಮ್ಮ ನಿರ್ಮಾಪಕ ಕೆ.ವಿ.ಶಶಿಧರ್ ಅವರು ಕಾರಣ. ಯಾವುದೇ ಕೊರತೆ ಇಲ್ಲದೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಕಲಾವಿದರು ಹಾಗೂ ತಂತ್ರಜ್ಞರಿಗೂ ನಾನು ಈ ಸಮಯದಲ್ಲಿ ಧನ್ಯವಾದ ತಿಳಿಸುತ್ತೇನೆ ಎಂದರು.

ಟ್ರೇಲರ್ ನೋಡಿದ ಮೇಲೆ ನನಗೆ ಬಹಳ ಖುಷಿಯಾಗಿದೆ. ಚಿತ್ರ ಕೂಡ ಚೆನ್ನಾಗಿ ಬಂದಿದೆ. ಫೆಬ್ರವರಿ 9 ರಂದು ಬಿಡುಗಡೆಯಾಗುತ್ತಿದೆ. ನೋಡಿ,  ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕರು.

ಈ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಕನ್ನಡ ಚಿತ್ರರಂಗದಲ್ಲಿ ಒಳ್ಳೆ ಹೆಸರು ಮಾಡುತ್ತೆ ಅಂತಾರೆ ನಾಯಕ ಶ್ರೀ ನಾನು ಕೂಡ ಈ ಚಿತ್ರದಲ್ಲಿ “ಜಸ್ಟ್ ಪಾಸ್” ವಿದ್ಯಾರ್ಥಿ ಎಂದು ತಮ್ಮ ಪಾತ್ರದ ಬಗ್ಗೆ ನಾಯಕಿ ಪ್ರಣತಿ ಹೇಳಿದ್ದಾರೆ.

ಸಂಗೀತ ನಿರ್ದೇಶಕ ಹರ್ಷವರ್ಧನ್ ರಾಜ್, ಛಾಯಾಗ್ರಾಹಕ ಸುಜಯ್ ಕುಮಾರ್, ಹಾಡು ಬರೆದಿರುವ ಪ್ರಮೋದ್ ಮರವಂತೆ ಹಾಗೂ ಚಿತ್ರದಲ್ಲಿ ಅಭಿನಯಿಸಿರುವ ಬಹುತೇಕ ಕಲಾವಿದರಾದ “ಜಸ್ಟ್ ಪಾಸ್” ಚಿತ್ರದ ಕುರಿತು ಮಾತನಾಡಿದ್ದಾರೆ.

Comments (0)

Your email address will not be published. Required fields are marked *

Back to top button