bengaluruರಾಜಕೀಯ

ಮುಸ್ಲಿಮರಿಗೆ ಮಣಿದ ಸರ್ಕಾರ – ಸಿ.ಟಿ.ರವಿ ಗುಡುಗು!

CT ravi on Hijab statement and attack on State government

ಬೆಂಗಳೂರು: ರಾಜ್ಯ ಸರ್ಕಾರದ ಹಿಜಾಬ್ ನಿಷೇಧ ಹಿಂತೆಗೆತದ ನಿರ್ಧಾರದ ವಿರುದ್ಧ ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಮುಸ್ಲಿಂ ಮತಬ್ಯಾಂಕ್ ಕೈತಪ್ಪುವ ಭೀತಿಯಿಂದ ಹಾಗೂ ಸಮುದಾಯದ ನಾಯಕರ ಬೆದರಿಕೆಗೆ ಹೆದರಿ ಸಿದ್ದರಾಮಯ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ” ಎಂದು ಅವರು ಆರೋಪಿಸಿದ್ದಾರೆ.

ವಿವಾದ ಕೋರ್ಟ್ ನಲ್ಲಿದ್ದರೂ ಕಾಂಗ್ರೆಸ್ ಆತುರದ ನಿರ್ಧಾರ!
ಹಿಜಾಬ್ ವಿಚಾರದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಟಿ. ರವಿ, ಸರ್ಕಾರದ ನಡೆಯನ್ನು ಪ್ರಶ್ನಿಸಿದರು. “ಈ ಪ್ರಕರಣ ಸದ್ಯ ಸುಪ್ರೀಂ ಕೋರ್ಟ್‌ನ ವಿಸ್ತೃತ ಪೀಠದ ಮುಂದಿದೆ. ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೂ ಕಾಯುವ ವ್ಯವಧಾನ ಈ ಸರ್ಕಾರಕ್ಕೆ ಇಲ್ಲವೇ? ಕೋರ್ಟ್ ಆದೇಶ ಬರುವ ಮೊದಲೇ ಈ ರೀತಿ ಮಾಡುವುದು ನ್ಯಾಯಾಂಗಕ್ಕೆ ಮಾಡುವ ಅಪಚಾರ” ಎಂದು ಗುಡುಗಿದರು. ಹಿಜಾಬ್ vs ಜನಿವಾರ,ರುದ್ರಾಕ್ಷಿ ಹೋಲಿಕೆಗೆ ನಗು ತರಿಸುತ್ತದೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ಜನಿವಾರ ಮತ್ತು ರುದ್ರಾಕ್ಷಿ ಹೇಳಿಕೆಗೆ ತಿರುಗೇಟು ನೀಡಿದ ಅವರು, “ಸರ್ಕಾರದ ನಾಯಕರ ತರ್ಕ ನೋಡಿ ಮರುಕ ಹುಟ್ಟುತ್ತದೆ. ಮುಸ್ಲಿಮರು ತಾವೀಜ್ ಧರಿಸುತ್ತಾರೆ, ಕ್ರೈಸ್ತರು ಶಿಲುಬೆ ಧರಿಸುತ್ತಾರೆ ಯಾರೂ ಅದನ್ನು ವಿರೋಧಿಸಿಲ್ಲ. ಶಾಲೆಗಳಲ್ಲಿ ಸಮವಸ್ತ್ರ (Uniform) ಇರುವುದು ಶಿಸ್ತಿಗಾಗಿ ಅಲ್ಲಿ ಮತೀಯ ಭಾವನೆಗಳನ್ನು ಭಿತ್ತುವುದು ಸರಿಯಲ್ಲ,” ಎಂದರು.


“ದಾವಣಗೆರೆ ಚುನಾವಣೆ ವೇಳೆ ಮುಸ್ಲಿಮರು ‘ನಾವಿದ್ದರೆ ಮಾತ್ರ ನೀವು’ ಎಂದು ಎಚ್ಚರಿಕೆ ನೀಡಿದ್ದರು. ಈ ಬೆದರಿಕೆಗೆ ಮಣಿದು ಕಾಂಗ್ರೆಸ್ ಸರ್ಕಾರ ಹಿಜಾಬ್‌ಗೆ ಅವಕಾಶ ನೀಡಿದೆ.”ಸರ್ಕಾರ ಒಂದೋ ಈ ಆದೇಶವನ್ನು ತಕ್ಷಣ ವಾಪಸ್ ಪಡೆಯಬೇಕು, ಇಲ್ಲವೇ ಎಲ್ಲ ಮತ ಸಂಪ್ರದಾಯಗಳಿಗೂ ಮುಕ್ತ ಅವಕಾಶ ನೀಡಬೇಕು.ಆಗ ಯಾರು ಹೇಗೆ ಬರುತ್ತಾರೋ ನೀವೇ ನೋಡಿ,” ಎಂದು ಸವಾಲು ಹಾಕಿದರು.
ಶಾಲೆಗಳಲ್ಲಿ ಸಮವಸ್ತ್ರ ಸಂಹಿತೆ ಕಡ್ಡಾಯವಾಗಿರಬೇಕು. ಇವು ವಿದ್ಯಾದೇಗುಲಗಳಾಗಿದ್ದುಇಲ್ಲಿ ಧರ್ಮದ ಆಧಾರದ ಮೇಲೆ ತಾರತಮ್ಯ ಅಥವಾ ಪ್ರತ್ಯೇಕತೆ ಬೇಡ. ಕೇವಲ ಸಮವಸ್ತ್ರಕ್ಕೆ ಮಾತ್ರ ಆದ್ಯತೆ ನೀಡಬೇಕು ಎಂದು ಸಿ.ಟಿ. ರವಿ ಆಗ್ರಹಿಸಿದರು.

#CTRavi #HijabControversy #KarnatakaPolitics #CongressVsBJP #SupremeCourt #Siddaramaiah #FreedomTV #BreakingNews #KarnatakaEducation #UniformCivilCode #VotebankPolitics

Comments (0)

Your email address will not be published. Required fields are marked *

Back to top button