BDA ‘ಬ್ರಹ್ಮಾಂಡ’ ಭ್ರಷ್ಟಾಚಾರ-ಗೋದ್ರೆಜ್ ಗೆ ಅಕ್ರಮ ತೀರುವಳಿ!
BDA scandal in Hommadevanahalli Godrej Project

ಬೆಂಗಳೂರು: ಬಿಡಿಎ ಟೌನ್ ಪ್ಲಾನಿಂಗ್ ವಿಭಾಗದಲ್ಲಿ ಮಿತಿಮೀರಿದ ಭ್ರಷ್ಟಾಚಾರ ನಡೆಯುತ್ತಿರುವುದಕ್ಕೆ ಹೊಮ್ಮದೇವನಹಳ್ಳಿ ಬಳಿಯ ಗೋದ್ರೇಜ್ ಪ್ರಾಪರ್ಟಿಗೆ (Godrej Properties) ಸೇರಿದ ಬಹುಮಹಡಿ ಕಟ್ಟಡದ ಪ್ರಾಜೆಕ್ಟ್‌ಗೆ ನಿಯಮಬಾಹಿರವಾಗಿ ಅನುಮೋದನೆ ನೀಡುವ ಮೂಲಕ ಅಧಿಕಾರಿಗಳು ತಮ್ಮ ಬೃಹತ್ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ.ಯಾವುದೇ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಕನಿಷ್ಠ 12 ಮೀಟರ್ ಅಗಲದ ಸಂಪರ್ಕ ರಸ್ತೆ ಇರುವುದು ಕಡ್ಡಾಯ.ಆದರೆ,ಗೋದ್ರೇಜ್‌ನ ವಿವಾದಿತ ಯೋಜನೆಯಡಿ ರಸ್ತೆಯ ಅಗಲ ಕೇವಲ 10 ಮೀಟರ್.ಈ ಯೋಜನೆಯಡಿ ಅಧಿಕಾರಿಗಳು ಲಂಚಾವತಾರದ ರೂವಾರಿಗಳಾಗಿರುವುದು ಜಗಜ್ಜಾಹೀರಾಗಿದೆ.

2024ರ ಆರಂಭವಾದ ಈ ಯೋಜನೆಗೆ ರಸ್ತೆ ಅಗಲ ಸಾಲದು ಎಂಬ ನೆಪವೊಡ್ಡಿ ಇದೇ ಅಧಿಕಾರಿಗಳು ಕಡತವನ್ನು ತಡೆಹಿಡಿದಿದ್ದರು.3 ತಿಂಗಳ ಕಾಲ ಕಡತವನ್ನು ತಡೆಹಿಡಿದು ಲಾಬಿಗೆ ಮುಂದಾಗಿದ್ದರು.ಈಗ ದಿಢೀರ್ ಆಗಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ತೀರುವಳಿ ಪ್ರಮಾಣಪತ್ರ ನೀಡಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಂದು ರಸ್ತೆಯ ವಿಸ್ತೀರ್ಣ ಕಡಿಮೆ ಇದ್ದದ್ದು ಈಗ ಹೇಗೆ ಸರಿಹೋಯ್ತು? ಇಲ್ಲಿ ಲಂಚ ಪಡೆದಿರುವುದು ಸ್ಪಷ್ಟವಾಗಿದೆ.
ಕಾರ್ಲ್ ಟನ್ ದುರಂತ ಮರೆತ ಅಧಿಕಾರಿಗಳು!
ಕಿರಿದಾದ ರಸ್ತೆ ಇರುವ ಕಡೆ ಬಹುಮಹಡಿ ಕಟ್ಟಡಗಳಿಗೆ ಅನುಮೋದನೆ ನೀಡುವುದು ಅಪಾಯಕಾರಿ. ಅಗ್ನಿ ಅವಘಡಗಳು ಸಂಭವಿಸಿದರೆ ಅಗ್ನಿಶಾಮಕ ದಳದ ವಾಹನಗಳ ಚಲನೆಗೆ ಸಾಧ್ಯವಾಗುವುದಿಲ್ಲ. ಅಗ್ನಿಶಾಮಕ ದಳದ ಅನುಮತಿ ಸಿಗುವುದು ಸಂಶಯವಿದ್ದರೂ, ಬಿಡಿಎ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಅನುಮತಿ ನೀಡಿದ್ದಾರೆ.
ಮನೆ ಖರೀದಿಸುವವರ ಭವಿಷ್ಯ ಅತಂತ್ರ!
ಬಿಡಿಎ ಅಧಿಕಾರಿಗಳ ಎಡವಟ್ಟಿನಿಂದ ಇಲ್ಲಿ ಫ್ಲಾಟ್ ಖರೀದಿಸುವ ಸಾರ್ವಜನಿಕರು ಮುಂದೆ ಕಾನೂನು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ದಟ್ಟವಾಗಿದೆ. ಸ್ಥಳೀಯ ಆಡಳಿತ ಸಂಸ್ಥೆಗಳು ಇಲ್ಲಿನ ಗೋಮಾಳ ಮತ್ತು ಗುಂಡುತೋಪು ಒತ್ತುವರಿ ಬಗ್ಗೆ ವರದಿ ನೀಡಿದ್ದರೂ, ಬಿಡಿಎ ಟೌನ್ ಪ್ಲಾನಿಂಗ್ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿ ಸಹಿ ಹಾಕಿದ್ದಾರೆ.
BDA ಆಯುಕ್ತ ಮಣಿವಣ್ಣನ್ ಎಲ್ಲಿದ್ದಾರೆ!
ಬಿಡಿಎ ಆಯುಕ್ತರಾದ ಮಣಿವಣ್ಣನ್ ಪಿ. ಕೆಳಹಂತದ ಅಧಿಕಾರಿಗಳು ಅಕ್ರಮ ಎಸಗಿರುವ ಮಾಹಿತಿ ಇದ್ದರೂ ಕಣ್ಣು ಕಿವಿ ಬಾಯಿ ಮುಚ್ಚಿ ಕುಳಿತಿರುವುದು ಹಲವು ಅನುಮಾನಗಳಿಗೆ ಆಸ್ಪದ ನೀಡಿದೆ. ಬಿಡಿಎ ಕಮಿಷನರ್ ತಕ್ಷಣವೇ ಈ ಸ್ಥಳಕ್ಕೆ ಭೇಟಿ ನೀಡಬೇಕು.ಅಕ್ರಮವಾಗಿ ಅನುಮೋದನೆ ನೀಡಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು.ಸಾರ್ವಜನಿಕರ ತೆರಿಗೆ ಹಣ ಮತ್ತು ಅವರ ಜೀವಗಳ ಜೊತೆ ಚೆಲ್ಲಾಟವಾಡುವುದನ್ನು ಕೂಡಲೆ ನಿಲ್ಲಿಸದಿದ್ದರೆ ನಗರದಲ್ಲಿ ಕಾರ್ಲ್ ಟನ್ ನಂತೆ ದುರಂತ ಸಂಭವಿಸುವುದು ಗ್ಯಾರಂಟಿ.
#BDACorruption #GodrejPropertyScam #BangaloreRealEstate #ManiivannanP #FreedomTVExclusive #Hommadevanahalli #IllegalClearance #TownPlanningScam #BengaluruNews #CorruptionAlert




