Tamil naduಜ್ಯೋತಿಷ್ಯರಾಜಕೀಯ

ವಿಜಯ್ ಸರ್ಕಾರದಲ್ಲಿ ಜ್ಯೋತಿಷಿ ವಿಶೇಷ ಕರ್ತವ್ಯಾಧಿಕಾರಿ!

Radhan Pandit become Special Officer

ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ಜ್ಯೋತಿಷಿ ‘ರಾಧನ್ ಪಂಡಿತ್’ ವೆಟ್ರಿವೇಲ್ ರನ್ನು ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಿಸಿರುವ ವಿಚಾರ ಕಾಡ್ಗಿಚ್ಚಿನಂತೆ ರಾಜ್ಯಾದ್ಯಂತ ಹಬ್ಬಿದೆ. ಸಿನಿಮಾ ರಂಗದಿಂದ ರಾಜಕೀಯಕ್ಕೆ ಎಂಟ್ರಿ ಪಡೆದು ಮುಖ್ಯಮಂತ್ರಿಯಾಗಿ ಇತಿಹಾಸ ಬರೆದ ಕೀರ್ತಿವಿಜಯ್ ಗೆ ಸಲ್ಲುತ್ತದೆ. ಆದರೆ ಜ್ಯೋತಿಷಿಯನ್ನು ಸರ್ಕಾರಿ ಅಧಿಕಾರಿಯನ್ನಾಗಿ ನೇಮಿಸಿರುವುದು ಎಷ್ಟರ ಮಟ್ಟಿಗೆ ಸರಿ. ಈ ನಿರ್ಧಾರ ದ್ರಾವಿಡ ತತ್ವಗಳಡಿ ಗಂಭೀರ ಚರ್ಚೆಗೆ ಗ್ರಾಸವಾಗಿದೆ.

ಭವಿಷ್ಯ ನುಡಿದವನಿಗೆ ಗಿಫ್ಟ್ ಕೊಟ್ರಾ ದಳಪತಿ

ವಿಜಯ್ ಅವರ ರಾಜಕೀಯ ನಿರ್ಧಾರಗಳು ಮತ್ತು ನಿಲುವುಗಳ ಹಿಂದೆ ಈ ವೆಟ್ರಿವೇಲ್ ಅವರ ಪ್ರಭಾವ ದಟ್ಟವಾಗಿದೆ ಎಂಬ ಮಾತುಗಳು ಮೊದಲಿನಿಂದಲೂ ಹರಿದಾಡುತ್ತಿವೆ. ವಿಜಯ್ ಜಾತಕದಲ್ಲಿ ‘ಸುನಾಮಿ ಶಕ್ತಿ’ ಇದೆ ಎಂದು ಭವಿಷ್ಯ ನುಡಿದಿದ್ದ ವೆಟ್ರಿವೇಲ್, ವಿಜಯ್ ಮುಖ್ಯಮಂತ್ರಿಯಾಗುವುದು ಖಚಿತ ಎಂದೂ ಭವಿಷ್ಯ ನುಡಿದಿದ್ದರು.ಅಷ್ಟೇ ಅಲ್ಲ, ವಿಜಯ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದ ಮುಹೂರ್ತವನ್ನೇ ಇವರೇ ನಿಗದಿಪಡಿಸಿದ್ದರು ಮತ್ತು ಇವರ ಸಲಹೆಯ ಮೇರೆಗೆ ಮುಹೂರ್ತದಲ್ಲಿ ಬದಲಾವಣೆ ಮಾಡಲಾಗಿತ್ತು.


ಜಯಲಲಿತಾ ಆಪ್ತ ಈಗ ವಿಜಯ್ ಸಲಹೆಗಾರ!

ಅಚ್ಚರಿಯ ಸಂಗತಿಯೆಂದರೆ,ಈ ವೆಟ್ರಿವೇಲ್ ಅವರು ಈ ಹಿಂದೆ ತಮಿಳುನಾಡಿನ ಪ್ರಭಾವಿ ನಾಯಕಿ, ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಕಾಲದಲ್ಲೂ ಜ್ಯೋತಿಷ್ಯ ಸಲಹೆಗಾರರಾಗಿ ಗುರುತಿಸಿಕೊಂಡಿದ್ದರು.ಈಗ ಅದೇ ಜ್ಯೋತಿಷಿ ವಿಜಯ್ ಅವರ ಆಪ್ತ ವಲಯ ಸೇರಿಕೊಂಡಿದ್ದು, ಸರ್ಕಾರದ ಭಾಗವೇ ಆಗಿದ್ದಾರೆ. ರಾಜಕೀಯ ಭವಿಷ್ಯ ಹೇಳುವ ವ್ಯಕ್ತಿ ಸರ್ಕಾರದ ಅಧಿಕೃತ ಹುದ್ದೆಯನ್ನು ಅಲಂಕರಿಸಿರುವುದು ಹೊಸ ಸಂಚಲನ ಮೂಡಿಸಿದೆ.

ದ್ರಾವಿಡ ತತ್ವಗಳಿಗೆ ಎಳ್ಳುನೀರು! ಶುರುವಾಯ್ತಾ ವಿರೋಧ?
ತಮಿಳುನಾಡು ರಾಜಕಾರಣವು ಮೂಲತಃ ಪೆರಿಯಾರ್ ಮತ್ತು ಅಣ್ಣಾದೊರೈ ಅವರ ವೈಚಾರಿಕತೆ,ತರ್ಕ ಮತ್ತು ದ್ರಾವಿಡ ಸಿದ್ಧಾಂತಗಳ ಮೇಲೆ ನಿಂತಿದೆ. ಆದರೆ,ಸಿಎಂ ವಿಜಯ್ ಜ್ಯೋತಿಷ್ಯದ ಮೇಲೆ ನಂಬಿಕೆ ಇಟ್ಟಿರುವುದು ವಿರೋಧ ಪಕ್ಷಗಳ ಟೀಕೆಗೆ ಆಹಾರವಾಗಿದೆ.

“ಸರ್ಕಾರ ನಡೆಸಲು ಬೇಕಿರುವುದು ಜನಬಲವೋ ಅಥವಾ ಜ್ಯೋತಿಷಿಯ ಬಲವೋ?” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗಳು ಎದ್ದಿವೆ. ರಾಜಕೀಯ ನಿರ್ಧಾರಗಳು, ವರ್ಗಾವಣೆಗಳು ಮತ್ತು ಹೊಸ ಯೋಜನೆಗಳ ಜಾರಿಯಲ್ಲೂ ಈ ಜ್ಯೋತಿಷಿಯ ಮಾರ್ಗದರ್ಶನ ಇರಲಿದೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ. ಒಬ್ಬ ಜ್ಯೋತಿಷಿಗೆ ರಾಜಯೋಗ ಲಭಿಸಿರುವುದು ವಿಜಯ್ ಅಭಿಮಾನಿಗಳಲ್ಲಿ ಸಂತಸ ತಂದಿದ್ದರೂ, ವಿಚಾರವಾದಿಗಳು, ಬುದ್ದಿವಂತ ನಾಗರಿಕರು ಹಾಗೂ ವಿಮರ್ಶಕರು ವಿಜಯ್ ಅವರ ಈ ನಡೆಯನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ.
ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ ತಿಳಿಸಿ.

#CMVijay #ThalapathyVijay #TVK #RadhanPandit #Vetrivel #TamilNaduPolitics #AstrologyInPolitics #DravidianIdeology #VijayOSD #FreedomTV #BreakingNews #TamilNaduNews

Comments (0)

Your email address will not be published. Required fields are marked *

Back to top button