MYSOREರಾಜಕೀಯ

S.I.R ಆಪರೇಷನ್ – 86 ಲಕ್ಷ ಮತದಾರರ ಹಕ್ಕಿಗೆ ಕನ್ನ!

SIR Vote deletion

ಮೈಸೂರು: ಕರ್ನಾಟಕದಲ್ಲಿ ಮತದಾರರ ಗುರುತಿನ ಚೀಟಿ ವಿಶೇಷ ಪರಿಶೀಲನೆಯ ಮೂಲಕ ಮತದಾರರ ಹಕ್ಕಿಗೆ ಕನ್ನ ಹಾಕಲು ಬಿಜೆಪಿ ಭಾರಿ ಸಂಚು ರೂಪಿಸಿದೆ ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ. ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮತಬೇಟೆಗಾಗಿ ವಾಮಮಾರ್ಗದಲ್ಲಿ ಮಾಸ್ಟರ್ ಪ್ಲಾನ್ ರೂಪಿಸಿ ಮುಗ್ಧ ನಾಗರಕರ ಮತದಾನದ ಹಕ್ಕನ್ನು ಕಸಿಯುವುದೇ ಬಿಜೆಪಿಗೆ ಚಾಳಿ ಎಂದು ಅವರು ದಾಖಲೆ ಸಮೇತ ಆರೋಪಿಸಿದರು.

86 ಲಕ್ಷ ಮತದಾರರ ಹಕ್ಕು ಕಸಿಯುವ ಸಂಚು?
ರಾಜ್ಯದಲ್ಲಿ 15 ದಿನಗಳ ಹಿಂದೆ SIR ಪ್ರಕ್ರಿಯೆ ಮುಗಿದಿದೆ. ಕರ್ನಾಟಕದಲ್ಲಿ ಒಟ್ಟು 5.5 ಕೋಟಿ ಮತದಾರರಿದ್ದಾರೆ. ಆದರೆ, SIR ಪ್ರಕಾರ ಶೇ. 15 ರಷ್ಟು ಜನರನ್ನು ಮ್ಯಾಪಿಂಗ್ ಮಾಡಿಲ್ಲ.ಅಂದರೆ ರಾಜ್ಯದ ಸುಮಾರು 86 ಲಕ್ಷ ಮತದಾರರನ್ನು ಮತದಾನದ ಹಕ್ಕಿನಿಂದ ಹೊರಗಿಡುವ ಸಂಚು ನಡೆಯುತ್ತಿದೆ ಎಂದು ಅವರು ದೂರಿದ್ದಾರೆ.
ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 27,99,744 ಮತದಾರರಿದ್ದಾರೆ. ಆದರೆ SIR ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆ.ಚಾಮುಂಡೇಶ್ವರಿ ಕ್ಷೇತ್ರದಲ್ಲಿ 71,512 ಮತದಾರರ ಹೆಸರು ನಾಪತ್ತೆಯಾಗಿದ್ದು,ನರಸಿಂಹರಾಜ ಕ್ಷೇತ್ರದಲ್ಲಿ ಬರೋಬ್ಬರಿ 43 ಸಾವಿರ ಮುಸ್ಲಿಂ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ.ಇದು ಮುಂದಿನ ಚುನಾವಣೆಯಲ್ಲಿ ತನ್ವೀರ್ ಸೇಠ್ ಅವರಂತಹ ಅಲ್ಪಸಂಖ್ಯಾತ ನಾಯಕರ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ ಎಂದು ಹೇಳಿದರು.

2028ರ ಚುನಾವಣೆಗೆ ಬಿಜೆಪಿಯ ‘ಮಾಸ್ಟರ್’ ಪ್ಲಾನ್!
“ಮಹಾರಾಷ್ಟ್ರ,ಬಿಹಾರ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಅನೈತಿಕವಾಗಿ ಮತಗಳನ್ನು ಲೂಟಿ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈಗ 2028ರ ಚುನಾವಣೆಯನ್ನು ಗುರಿಯಾಗಿಸಿಕೊಂಡು ಕರ್ನಾಟಕದಲ್ಲಿ ಈ SIR ಅಸ್ತ್ರ ಬಳಸಲಾಗುತ್ತಿದೆ,” ಎಂದು ಲಕ್ಷ್ಮಣ್ ಕಿಡಿಕಾರಿದ್ದಾರೆ.ಮತದಾನದ ಹಕ್ಕಿನಿಂದ ವಂಚಿತರಾದವರಿಗೆ ದಾಖಲೆ ಸಲ್ಲಿಸಲು ಸೂಚಿಸಲಾಗಿದೆ.ಆದರೆ,ಈಗಿನ ತಲೆಮಾರಿನ ಜನರಿಗೆ ತಾತ,ಮುತ್ತಾತನ ಕಾಲದ ದಾಖಲೆಗಳನ್ನು ಕೇಳಿದರೆ ಎಲ್ಲಿಂದ ತಂದು ಕೊಡಲು ಸಾಧ್ಯ? ದಾಖಲೆಗಳ ಹೆಸರಿನಲ್ಲಿ ಕಿರುಕುಳ ನೀಡುತ್ತಿದ್ದು ಇದು ಉದ್ದೇಶಪೂರ್ವಕವಾಗಿ ಜನರನ್ನು ಮತದಾನದಿಂದ ದೂರವಿಡುವ ತಂತ್ರ ಎಂದು ಎಂ. ಲಕ್ಷ್ಮಣ್ ಆಕ್ರೋಶ ವ್ಯಕ್ತಪಡಿಸಿದರು.ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ಮ್ಯಾಪಿಂಗ್ ದೋಷದ ವಿರುದ್ಧ ತೀ್ವ್ರ ರೀತಿಯ ಕಾನೂನು ಹೋರಾಟ ಮತ್ತು ಜನಾಂದೋಲನಕ್ಕೆ ಸಿದ್ಧತೆ ನಡೆಸುತ್ತಿದೆ.

#MLaxman #CongressVoterAide #VoterDeletions #BJPConspiracy #MysuruNews #KarnatakaElection2028 #VoterListScam #FreedomTV #DemocracyUnderThreat #SIRMapping

Comments (0)

Your email address will not be published. Required fields are marked *

Back to top button