
ಅಧಿಕೃತ ಆದೇಶ ಘೋಷಿಸಿದ ವಿಜಯ್ ಸರ್ಕಾರ

ಚೆನ್ನೈ: ತಮಿಳುನಾಡು ಸಿಎಂ ಜೋಸೆಫ್ ವಿಜಯ್ ನೇತೃತ್ವದ ತಮಿಳುನಾಡಿನ ನೂತನ ಸರ್ಕಾರ ಮಹಿಳೆಯರ ರಕ್ಷಣೆಗೆ ಆದ್ಯತೆ ನೀಡಿದ್ದು, ಅವರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ‘ಸಿಂಗಪ್ಪೆಣ್ ವಿಶೇಷ ಕಾರ್ಯಪಡೆ’ (“Lion Woman” Special Task Force) ರಚಿಸಲು ಆದೇಶಿಸಿದೆ. ತಮ್ಮ ಪ್ರಣಾಳಿಕೆಯಲ್ಲಿ ಮಹಿಳೆಯರ ರಕ್ಷಣೆಗೆ ಬದ್ಧ ಎಂದಿದ್ದ ವಿಜಯ್ ಸರ್ಕಾರ ಮಹಿಳಾಮಣಿಗಳಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದೆ.
ಮುಖ್ಯಮಂತ್ರಿಗಳ ನೇರ ಮೇಲ್ವಿಚಾರಣೆ
ಈ ವಿಶೇಷ ಘಟಕವು ನೇರವಾಗಿ ಮುಖ್ಯಮಂತ್ರಿ ವಿಜಯ್ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸಲಿದೆ. ಮಹಿಳೆಯರ ಸುರಕ್ಷತೆಯನ್ನು ಸುಧಾರಿಸುವುದು, ಅಪರಾಧ ನಿಯಂತ್ರಣ ಮತ್ತು ತ್ವರಿತ ರಕ್ಷಣಾ ಕಾರ್ಯತಂತ್ರಗಳನ್ನು ಜಾರಿಗೆ ತರುವುದೇ ಈ ಪಡೆಯ ಮುಖ್ಯ ಉದ್ದೇಶವಾಗಿದೆ. ಸರ್ಕಾರಿ ಆದೇಶದ ಪ್ರಕಾರ, ಮುಖ್ಯಮಂತ್ರಿಗಳ ನೇರ ಮೇಲ್ವಿಚಾರಣೆಯಲ್ಲಿ ಈ ವಿಶೇಷ ಘಟಕವು ಕಾರ್ಯನಿರ್ವಹಿಸಲಿದೆ. ಮೊದಲ ಹಂತದಲ್ಲಿ, ಒಬ್ಬ ಪೊಲೀಸ್ ಮಹಾನಿರ್ದೇಶಕ, ಒಬ್ಬ ಪೊಲೀಸ್ ವರಿಷ್ಠಾಧಿಕಾರಿ, ಇಬ್ಬರು ಉಪ ಪೊಲೀಸ್ ವರಿಷ್ಠಾಧಿಕಾರಿಗಳು, ನಾಲ್ಕು ಇನ್ಸ್‌ಪೆಕ್ಟರ್‌ಗಳು, ಎಂಟು ಸಬ್-ಇನ್ಸ್ ಪೆಕ್ಟರ್ ಗಳು ಮತ್ತು ಇತರ ಶ್ರೇಣಿಯ 20 ಸಿಬ್ಬಂದಿ ಸೇರಿದಂತೆ ಹಲವಾರು ಹುದ್ದೆಗಳನ್ನು ಮಂಜೂರು ಮಾಡಲಾಗಿದೆ.
ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ಸಿಎಂ ವಿಜಯ್ ಅವರು ತಮ್ಮ ಕಾರ್ಯಾಲಯಕ್ಕೆ ಸಮರ್ಥ ಅಧಿಕಾರಿಗಳನ್ನು ನೇಮಿಸಿಕೊಂಡಿದ್ದಾರೆ.ಪಿ. ಸೆಂಥಿಲ್‌ಕುಮಾರ್ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದು, ಜಿ. ಲಕ್ಷ್ಮಿ ಪ್ರಿಯಾ ಮುಖ್ಯಮಂತ್ರಿಗಳ ಎರಡನೇ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ.
ಅಧಿಕಾರ ವಹಿಸಿಕೊಂಡ ಮೊದಲ ದಿನವೇ ವಿಜಯ್ ಅವರು ಜನಪ್ರಿಯ ಯೋಜನೆಗಳಾದ
ಉಚಿತ ವಿದ್ಯುತ್ – ಗೃಹ ಬಳಕೆಗೆ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ.
ಮಾದಕ ದ್ರವ್ಯ ಮುಕ್ತ ರಾಜ್ಯ-ರಾಜ್ಯಾದ್ಯಂತ ಮಾದಕವಸ್ತು ಕಳ್ಳಸಾಗಣೆ ವಿರೋಧಿ ಘಟಕಗಳ ಸ್ಥಾಪನೆ
ಮಹಿಳಾ ಸುರಕ್ಷತೆ – ‘ಸಿಂಗಪ್ಪೆಣ್’ ವಿಶೇಷ ಕಾರ್ಯಪಡೆ ರಚನೆ
ಕಡತಗಳಿಗೆ ಸಹಿ ಹಾಕುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಸಂಸ್ಥಾಪಕರೂ ಆಗಿರುವ ವಿಜಯ್, ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೇವಲ 24 ಗಂಟೆಗಳಲ್ಲಿ ಇಷ್ಟೊಂದು ಮಹತ್ವದ ನಿರ್ಧಾರಗಳನ್ನು ಕೈಗೊಂಡಿರುವುದು ರಾಜ್ಯದ ಜನರಲ್ಲಿ ಭರವಸೆ ಮೂಡಿಸಿದೆ.
#CMVijay #ThalapathyVijay #TVK #TamilNaduNews #SingappenTaskForce #WomenSafety #FreeElectricity #TamilNaduPolitics #FreedomTV #VijayAsCM #Singappen




