Freedom TVರಾಜಕೀಯ

ವಿಜಯ್ ಪರ ಬ್ಯಾಟ್ ಬೀಸಿದ ಖರ್ಗೆ

TVK ಬೆಂಬಲಕ್ಕೆ ಸಿದ್ಧವೆಂದ ಕಾಂಗ್ರೆಸ್ ಅಧ್ಯಕ್ಷ!

ನವದೆಹಲಿ: AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟಿವಿಕೆ ಜೊತೆ ಕೈಜೋಡಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಇತ್ತ ಡಿಎಂಕೆ ಮೈತ್ರಿ ಕಳೆದುಕೊಂಡ ಕಾಂಗ್ರೆಸ್ ನಮ್ಮ ಪಕ್ಷದ ಬೆನ್ನಿಗೆ ಚೂರಿ ಹಾಕಿದೆ ಎಂದು ಹೇಳಿಕೊಂಡು ಓಡಾಡ್ತಿದೆ. ಇದ್ಯಾವುದನ್ನೂ ಲೆಕ್ಕಿಸದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಅವರೊಂದಿಗೆ ಸುದೀರ್ಘ ಮಾತುಕಥೆಯಲ್ಲಿದ್ದಾರೆ. ತಮಿಳುನಾಡಿನಲ್ಲಿ ಜಾತ್ಯತೀತ ಸರ್ಕಾರ ರಚನೆಗೆ ಟಿವಿಕೆಯನ್ನು ಬೆಂಬಲಿಸಲು ಮನವಿ ಮಾಡುತ್ತಿದ್ದು, ಸಿಪಿಐ ಮೇಲೆ ಒತ್ತಡ ಹೇರುತ್ತಿರುವುದನ್ನು ನೋಡಿದರೆ ಆಡಳಿತ ಗದ್ದುಗೆ ಹಿಡಿಯಲೇ ಬೇಕೆಂಬ ಪಣ ತೊಟ್ಟಂತಿದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿಗೆ ಅಧಿಕಾರ ಸಿಗದಂತೆ ಮಾಡಲು ಖರ್ಗೆ ರಾಜಕೀಯ ಚದುರಂಗದಾಟಕ್ಕೆ ಮುಂದಾಗಿದ್ದಾರೆ. ಸಿಪಿಐ, ಡಿಎಂಕೆ ಸೇರಿದಂತೆ ಸ್ಥಳೀಯ ಮಿತ್ರಪಕ್ಷಗಳೊಂದಿಗೆ ಸಮಾಲೋಚಿಸಿ ನಿರ್ಧರಿಸುವುದಾಗಿ ರಾಜಾ ಹೇಳಿದ್ದಾರೆ ಎನ್ನಲಾಗಿದೆ. ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್ ಗೆ ಡಿಎಂಕೆ ಅಧಿಕಾರ ನೀಡಲು ಮುಂದಾಗುವುದೇ ಕಾದು ನೋಡಬೇಕು.
#MallikarjunKharge #Vijay #TVK #Congress #CPI #DRaja #TamilNaduPolitics

Comments (0)

Your email address will not be published. Required fields are marked *

Back to top button