ರಾಜ್ಯಸುದ್ದಿ

ಬಾಗ್ ಮಾನೆ ಮೆಟ್ರೋ ನಿಲ್ದಾಣ: 40 ಕೋಟಿ ರೂ. ಮೊತ್ತದ ಬೃಹತ್ ಒಪ್ಪಂದಕ್ಕೆ ಸಹಿ..!

ಬೆಂಗಳೂರು: ಸಿಲ್ಕ್ ಬೋರ್ಡ್‌ನಿಂದ ಕೆ.ಆರ್ ಪುರಂ ಮಾರ್ಗದಲ್ಲಿ ಬರುವ ‘ಡಿಆರ್‌ಡಿಒ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೆಟ್ರೋ ಸ್ಟೇಷನ್’ ಇನ್ನು ಮುಂದೆ ‘ಬಾಗ್ ಮಾನೆ’ (Bagmane) ಎಂಬ ಹೆಸರನ್ನು ಹೊಂದಲಿದೆ. ಈ ಹೆಸರಿಡುವ ಹಕ್ಕಿಗಾಗಿ ಬಾಗ್ಮನೆ ಡೆವಲಪರ್ಸ್‌ ಪ್ರೈವೆಟ್‌ ಲಿಮಿಟೆಡ್ ಸಂಸ್ಥೆಯು ಬಿಎಂಆರ್‌ಸಿಎಲ್‌ ಜೊತೆಗೆ 40 ಕೋಟಿ ರೂಪಾಯಿಗಳ ಬೃಹತ್ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದವು ಒಟ್ಟು 20 ವರ್ಷಗಳ ಅವಧಿಗೆ ಚಾಲ್ತಿಯಲ್ಲಿರಲಿದ್ದು, ಕಂಪನಿಯು ಈಗಾಗಲೇ 20 ಕೋಟಿ ರೂಪಾಯಿಗಳನ್ನು ಮುಂಗಡವಾಗಿ ಪಾವತಿಸಿದೆ. ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಡಾ. ಜೆ. ರವಿಶಂಕರ್‌ ಮತ್ತು ಬಾಗ್ ಮಾನೆ ಡೆವಲಪರ್ಸ್‌ ಪರವಾಗಿ ಆದಿತ್ಯ ಬಾಗ್ ಮಾನೆ ಅವರು ಈ ಪ್ರಕ್ರಿಯೆಯನ್ನು ಅಧಿಕೃತಗೊಳಿಸಿದ್ದಾರೆ.

ಪ್ರೆಸ್ಟಿಜ್ ಗ್ರೂಪ್ ಬೆಳ್ಳಂದೂರು: ಇದು ಸುಮಾರು 90 ಕೋಟಿ ರೂ.ಗಳ ಬೃಹತ್ ಒಪ್ಪಂದವಾಗಿದೆ.
ಬಯೋಕಾನ್ ಹೆಬ್ಬಗೋಡಿ: ಬಯೋಕಾನ್ ಸಂಸ್ಥೆಯ ಸಹಯೋಗದೊಂದಿಗೆ ಹೆಸರಿಸಲಾಗಿದೆ.
ಡೆಲ್ಟಾ ಎಲೆಕ್ಟ್ರಾನಿಕ್ ಸಿಟಿ: ಎಲೆಕ್ಟ್ರಾನಿಕ್ ಸಿಟಿ ಭಾಗದ ಪ್ರಮುಖ ನಿಲ್ದಾಣ.
ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 19.75 ಕಿಮೀ ಉದ್ದದ ಈ ಮೆಟ್ರೋ ಮಾರ್ಗವು ಸದ್ಯ ವೇಗವಾಗಿ ಸಿದ್ಧಗೊಳ್ಳುತ್ತಿದ್ದು, ಈ ವರ್ಷದ ಡಿಸೆಂಬರ್ (2026) ವೇಳೆಗೆ ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆಯಿದೆ. ಇದೇ ಮಾರ್ಗದ ಇನ್ನೂ ಎರಡು ನಿಲ್ದಾಣಗಳಿಗೆ ಖಾಸಗಿ ಕಂಪನಿಗಳ ಹೆಸರಿಡುವ ಕುರಿತು ಮಾತುಕತೆಗಳು ನಡೆಯುತ್ತಿವೆ. ಇಂತಹ ಒಪ್ಪಂದಗಳಿಂದ ಬರುವ ಆದಾಯವು ಮೆಟ್ರೋದ ದೈನಂದಿನ ನಿರ್ವಹಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ದೊಡ್ಡ ಮಟ್ಟದ ನೆರವು ನೀಡಲಿದೆ.

Comments (0)

Your email address will not be published. Required fields are marked *

Back to top button