ರಾಜ್ಯಸುದ್ದಿ

ದರ ಕುಸಿತದಿಂದ ರೈತರಿಗೆ ಹೊಡೆತ: ಟೊಮ್ಯಾಟೋ ₹80ಕ್ಕೆ ಇಳಿಕೆ..!

ವಿಜಯನಗರ: ಜಿಲ್ಲೆಯಲ್ಲಿ ಟೊಮ್ಯಾಟೋ ಬೆಲೆ ಏಕಾಏಕಿ ಪಾತಾಳಕ್ಕೆ ಕುಸಿದಿದೆ. 1000-1200 ರೂ. ಇದ್ದ ಒಂದು ಬಾಕ್ಸ್ ಟೊಮ್ಯಾಟೋ ಬೆಲೆ 100-80 ರೂ.ಗೆ ಕುಸಿದಿದೆ. ಬೆಲೆ ಕುಸಿತದಿಂದ ರೈತರು ಹಾಗೂ ಮಾರಾಟಗಾರರು ನಷ್ಟ ಅನುಭವಿಸುತ್ತಿದ್ದಾರೆ.

ವ್ಯಾಪಾರಿಗಳು 20 ರೂ.ಗೆ 2 ರಿಂದ 4 ಕೆಜಿ ಟೊಮ್ಯಾಟೋವನ್ನು ಮಾರಾಟ ಮಾಡುತ್ತಿದ್ದಾರೆ. ಏಕಾಏಕಿ ಟೊಮ್ಯಾಟೋ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಸಾಲ ಮಾಡಿ ಟೊಮ್ಯಾಟೋ ಬೆಳೆದು ಮಾರುಕಟ್ಟೆಗೆ ತರೋ ರೈತರ ಪರಿಸ್ಥಿತಿ ಅವರಿಗೆ ತಿಳಿದಿದೆ.

ಇರಾನ್ – ಇಸ್ರೇಲ್ ಯುದ್ಧದಿಂದ ಬೇರೆ ದೇಶಗಳಿಗೆ ಟೊಮ್ಯಾಟೋ ರಫ್ತಾಗುತ್ತಿಲ್ಲ. ಅಲ್ಲದೇ ಸಿಲಿಂಡರ್ ಸಿಗದೇ ಹೋಟೆಲ್‍ಗಳು ಸರಿಯಾಗಿ ನಡೆಯದ ಹಿನ್ನೆಲೆ ಟೊಮ್ಯಾಟೋ ವ್ಯಾಪಾರ ಕುಸಿದಿದೆ.

Comments (0)

Your email address will not be published. Required fields are marked *

Back to top button