ಆರೋಗ್ಯರಾಜ್ಯಸುದ್ದಿ

ಮೊಟ್ಟೆ ಪ್ರಿಯರೇ ಗಮನಿಸಿ: ಇನ್ಮುಂದೆ ಪ್ರತಿಯೊಂದು ಮೊಟ್ಟೆಯ ಮೇಲೂ ‘ಎಕ್ಸ್‌ಪೈರಿ ಡೇಟ್’ ಸೀಲ್..!

ನೀವು ಮಾರುಕಟ್ಟೆಯಿಂದ ಖರೀದಿಸುವ ಮೊಟ್ಟೆಗಳು ತಾಜಾವೇ ಅಥವಾ ಹಳೆಯದೋ ಎಂಬ ಗೊಂದಲ ಇನ್ನು ಮುಂದೆ ಇರುವುದಿಲ್ಲ. ಗ್ರಾಹಕರ ಆರೋಗ್ಯದ ಹಿತದೃಷ್ಟಿಯಿಂದ ಉತ್ತರ ಪ್ರದೇಶ ಸರ್ಕಾರ ಮಹತ್ವದ ಹಾಗೂ ಕ್ರಾಂತಿಕಾರಿ ನಿರ್ಧಾರ ಕೈಗೊಂಡಿದೆ.

ಇನ್ಮುಂದೆ ಉತ್ತರ ಪ್ರದೇಶದಲ್ಲಿ ಮಾರಾಟವಾಗುವ ಪ್ರತಿಯೊಂದು ಕೋಳಿ ಮೊಟ್ಟೆಯ ಮೇಲೂ ಎಕ್ಸ್‌ಪೈರಿ ಡೇಟ್ ಅಥವಾ ಬಳಸಬೇಕಾದ ಗಡುವಿನ ದಿನಾಂಕವನ್ನು ಸ್ಪಷ್ಟವಾಗಿ ಮುದ್ರಿಸುವುದು ಕಡ್ಡಾಯವಾಗಲಿದೆ. ಆಹಾರ ಪದಾರ್ಥಗಳಿಗೆ ಇರುವ ನಿಯಮದಂತೆಯೇ ಮೊಟ್ಟೆಗೂ ಈ ನಿಯಮ ಅನ್ವಯವಾಗಲಿದೆ. ಈ ಹೊಸ ನಿಯಮವನ್ನು ಏಪ್ರಿಲ್ 1ರಿಂದ ಜಾರಿಗೆ ತರಲಾಗುತ್ತಿದೆ.

ಈ ಕ್ರಮವನ್ನು ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಜಾರಿಗೊಳಿಸಿದ್ದು, ಹಳೆಯ ಮತ್ತು ಕೆಟ್ಟ ಮೊಟ್ಟೆಗಳನ್ನು ಸೇವಿಸುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ತಡೆಯುವುದೇ ಮುಖ್ಯ ಉದ್ದೇಶವಾಗಿದೆ.

ಪ್ರತಿ ಮೊಟ್ಟೆಯ ಮೇಲೂ ದಿನಾಂಕದ ಸೀಲ್ ಇರಬೇಕಾಗಿರುವುದರಿಂದ, ಮೊಟ್ಟೆ ವ್ಯಾಪಾರದಲ್ಲಿ ಪಾರದರ್ಶಕತೆ ಹೆಚ್ಚಲಿದ್ದು, ಗ್ರಾಹಕರು ತಾಜಾ ಮೊಟ್ಟೆಗಳನ್ನು ನಿಶ್ಚಿಂತರಾಗಿ ಖರೀದಿಸಬಹುದು.

ಸದ್ಯಕ್ಕೆ ಈ ನಿಯಮ ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದರೂ, ಮುಂದಿನ ದಿನಗಳಲ್ಲಿ ಇತರ ರಾಜ್ಯಗಳಲ್ಲಿಯೂ ಜಾರಿಯಾಗುವ ಸಾಧ್ಯತೆ ಇದೆ. ಹೀಗಾಗಿ ಇನ್ಮುಂದೆ ಮೊಟ್ಟೆ ಖರೀದಿಸುವಾಗ ಅದರ ಮೇಲಿರುವ ಸೀಲ್ ಪರಿಶೀಲಿಸುವುದು ಅಗತ್ಯವಾಗಿದೆ.

Comments (0)

Your email address will not be published. Required fields are marked *

Back to top button