New delhiವೈರಲ್ ನ್ಯೂಸ್ಸುದ್ದಿ

ರಿಲ್ಸ್ ಗಾಗಿ ಎದೆಗೆ ರಿವಾಲ್ವರ್ ಇಟ್ಟು ವಿಡಿಯೋ ಮಾಡುವಾಗ ಮಿಸ್‌ಫೈರ್..!

ದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಬೇಕೆಂಬ ಹಂಬಲ ಹಾಗೂ ಅಪಾಯಕಾರಿ ರೀಲ್ಸ್ ಮಾಡುವ ಚಿಕ್ಕ ಹುಚ್ಚು, ದೆಹಲಿಯ ಯುವಕನೊಬ್ಬನ ಪ್ರಾಣವನ್ನು ಬಲಿಪಡಿಸಿದೆ. ಸಿನಿಮಾ ಶೈಲಿಯಲ್ಲಿ ರಿವಾಲ್ವರ್ ಹಿಡಿದು ರೀಲ್ಸ್ ಮಾಡುತ್ತಿದ್ದಾಗ ಅಚಾನಕ್ ಗುಂಡು ಹಾರಿದ ಪರಿಣಾಮ, ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ದೆಹಲಿಯ ದಲ್ಲುಪುರ ನಿವಾಸಿ ಪವನ್ ಎಂದು ಗುರುತಿಸಲಾಗಿದೆ. ಪವನ್ ತನ್ನ ಗೆಳೆಯನೊಂದಿಗೆ ರೀಲ್ಸ್ ಮಾಡಲು ಮುಂದಾಗಿದ್ದರು. ಪವನ್ ತನ್ನ ಬಳಿ ಇದ್ದ ರಿವಾಲ್ವರ್‌ಗೆ ಬುಲೆಟ್ ಲೋಡ್ ಮಾಡುವ ವಿಧಾನ ಮತ್ತು ಅದನ್ನು ಭಯವಿಲ್ಲದೆ ಹಿಡಿಯುವುದು ಹೇಗೆ ಎಂಬುದನ್ನು ವಿಡಿಯೋ ಮೂಲಕ ತೋರಿಸುತ್ತಿದ್ದರು.

ವಿಡಿಯೋ ಚಿತ್ರೀಕರಿಸುತ್ತಿದ್ದಾಗ ಪವನ್ ನಗುಮುಖದಿಂದಲೇ ಲೋಡೆಡ್ ರಿವಾಲ್ವರ್ ಅನ್ನು ತನ್ನ ಎದೆಗೆ ಇಟ್ಟುಕೊಂಡಿದ್ದರು. ಈ ವೇಳೆ ವಿಡಿಯೋ ಮಾಡುತ್ತಿದ್ದ ಗೆಳೆಯ “ಗುಂಡು ಹಾರಿಸಬೇಡ ಸಹೋದರ” ಎಂದು ಎಚ್ಚರಿಕೆ ನೀಡಿದರು. ಆದರೆ ಪವನ್ “ಅರೆ ಇಲ್ಲಪ್ಪ” ಎಂದು ಉತ್ತರಿಸಿದ ಕ್ಷಣವೇ ಟ್ರಿಗರ್ ಒತ್ತಲ್ಪಟ್ಟು ಗುಂಡು ಎದೆಯನ್ನು ಸೀಳಿತು ಹೋಗಿತು.

Comments (0)

Your email address will not be published. Required fields are marked *

Back to top button