New delhiವೆಬ್ ಸ್ಟೋರೀಸ್ಸುದ್ದಿ

ಮ್ಯಾನೇಜರ್ ಕರೆ ಬಂದ ತಕ್ಷಣ ಮೇಟ್ರೋದಲ್ಲಿ ಕೆಲಸ..!

ದೆಹಲಿ: ಕೆಲಸ ಮಾಡೋದು ಅನಿವಾರ್ಯ. ಆದರೆ ಕೆಲವರು ಈ ವರ್ಕ್ ಲೈಫ್ ಹಾಗೂ ಪರ್ಸನಲ್ ಲೈಫ್ ಬ್ಯಾಲೆನ್ಸ್ ಮಾಡಲು ಒದ್ದಾಡುವುದನ್ನು ನೋಡಿ ಈ ಯುವಕನನ್ನು ನೋಡಿದ್ರೆ ನಿಮಗೂ ಅಯ್ಯೋ ಅನಿಸಬಹುದು. ಹೌದು ಬಾಸ್ ಕಾಲ್ ಮಾಡಿದ ತಕ್ಷಣವೇ ದೆಹಲಿ ಮೆಟ್ರೋ ಪ್ರಯಾಣಿಕನೊಬ್ಬ ಕಿಕ್ಕಿರಿದ ಕೋಚ್‌ನೊಳಗೆ ಕೆಲಸ ಮಾಡಲು ಕುಳಿತ ಪೋಸ್ಟ್ ವೈರಲ್ ಆಗಿದೆ. ಇದು ಭಾರತದಲ್ಲಿನ ಕೆಲಸದ ಸಂಸ್ಕೃತಿಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಕೆಲಸದ ಸ್ಥಳಗಳಲ್ಲಿ ಕೆಲ ಉದ್ಯೋಗಿಗಳು ಅನುಭವಿಸುವ ಒತ್ತಡ ಹೇಳಲಾಗದು. ಕೆಲಸ ಮಾಡದೇ ಇದ್ದರೆ ವಿಧಿಯಿಲ್ಲ ಎನ್ನುವ ಕಾರಣಕ್ಕೆ ಎಷ್ಟೇ ಕಷ್ಟವಾದ್ರೂ ಉದ್ಯೋಗ ಬಿಡಲ್ಲ. ಇದಕ್ಕೆ ಉದಾಹರಣೆಯಂತಿದ್ದಾನೆ ಈ ಯುವಕ. ಜನದಟ್ಟಣೆಯಿಂದ ತುಂಬಿದ ದೆಹಲಿ ಮೆಟ್ರೋದ ಬೋಗಿಯೊಳಗೆ ಯುವಕನೊಬ್ಬ ಲ್ಯಾಪ್ ಟಾಪ್ ತೆರೆದು ನೆಲದ ಮೇಲೆ ಕುಳಿತು ಕೆಲಸ ಮಾಡುತ್ತಿದ್ದಾನೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆಫೀಸ್ ಕಾಲ್ ಸ್ವೀಕರಿಸಿದ ಬಳಿಕ ಯುವಕ ಕೆಲಸದಲ್ಲಿ ತೊಡಗಿಕೊಂಡಿರುವುದು ಕಂಡುಬಂದಿದೆ. ಯುವಕನೊಬ್ಬ ಲ್ಯಾಪ್‌ಟಾಪ್‌ನ್ನು ತೊಡೆಯ ಮೇಲೆ ಇರಿಸಿಕೊಂಡು ನೆಲದ ಮೇಲೆ ಕುಳಿತಿರುವುದನ್ನು ಕಾಣಬಹುದು. ಇನ್ನೊಂದು ಕೈಯಲ್ಲಿ ಫೋನ್ ಹಿಡಿದುಕೊಂಡಿದ್ದಾನೆ. ಈ ದೃಶ್ಯವು ಕೆಲಸದ ಒತ್ತಡದಲ್ಲಿ ಉದ್ಯೋಗಿಗಳು ಹೇಗೆ ಎದುರಿಸುತ್ತಿದ್ದಾರೆ.

Comments (0)

Your email address will not be published. Required fields are marked *

Back to top button