ವೆಬ್ ಸ್ಟೋರೀಸ್ವೈರಲ್ ನ್ಯೂಸ್

ಅಂದು ಗ್ಲಾಮರ್ ಅಂದವರು ಇಂದು ಪಾಪರಾಜಿ ವಿರೋಧಿಸುವುದೇಕೆ?

ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಆರಂಭವಾಗಿರುವ ‘ಪಾಪರಾಜಿಗಳ ವಿರುದ್ಧದ ಅಭಿಯಾನ’ ಗಾಂಧಿನಗರದ ಗಲ್ಲಿಗಳಲ್ಲಿ ಪರ-ವಿರೋಧದ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪಾಪರಾಜಿ ಎಂದರೆ ಪ್ರಸಿದ್ಧ ವ್ಯಕ್ತಿಗಳನ್ನು, ಅಂದರೆ ಸಿನಿಮಾ ತಾರೆಗಳು, ರಾಜಕಾರಣಿಗಳು ಅಥವಾ ಕ್ರೀಡಾಪಟುಗಳನ್ನು ಅವರು ಹೋಗುವ ಕಡೆಯಲ್ಲೆಲ್ಲಾ ಹಿಂಬಾಲಿಸಿ, ಅವರ ಅನುಮತಿ ಇಲ್ಲದಿದ್ದರೂ ಅವರ ಖಾಸಗಿ ಕ್ಷಣಗಳನ್ನು ಫೋಟೋ ಅಥವಾ ವಿಡಿಯೋ ತೆಗೆಯುವ ಸ್ವತಂತ್ರ ಛಾಯಾಗ್ರಾಹಕರು ಎಂದರ್ಥ.ಅನೇಕ ಬಾರಿ ಸ್ಟಾರ್ಸ್ ಗಳು ತಮ್ಮ ವೈಯಕ್ತಿಕ ಜೀವನಕ್ಕೆ ತೊಂದರೆಯಾಗುತ್ತಿದೆ ಎಂದು ಕಿಡಿಕಾರುತ್ತಾರೆ. ಈಗ ಸ್ಯಾಂಡಲ್‌ವುಡ್ ನಟಿಯರು ನಡೆಸುತ್ತಿರುವ ಅಭಿಯಾನವೂ ಇದೇ …

ಒಂದು ಕಾಲದಲ್ಲಿ ರಕ್ಷಿತಾ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತಿದ್ದ ರೀತಿನೇ ಬೇರೆ ಇತ್ತು. ‘ಸುಂಟರಗಾಳಿ’, ‘ಕಲಾಸಿಪಾಳ್ಯ’ ಅಂತಹ ಮಾಸ್ ಸಿನಿಮಾಗಳಲ್ಲಿ ರಕ್ಷಿತಾ ಅವರು ಅದೆಷ್ಟು ಗ್ಲಾಮರಸ್ ಆಗಿ, ಮಾಡರ್ನ್ ಡ್ರೆಸ್‌ಗಳಲ್ಲಿ ಕಾಣಿಸಿಕೊಂಡಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅಂದು ಸಿನಿಮಾ ಗೆಲ್ಲಲು ಗ್ಲಾಮರ್ ಬೇಕಿತ್ತು, ಅಂದು ಕ್ಯಾಮೆರಾಗಳು ಹತ್ತಿರ ಬಂದರೆ ಇಷ್ಟವಾಗುತ್ತಿತ್ತು. ಈಗ ಪಾಪರಾಜಿಗಳ ಮೇಲೆ ಗೂಬೆ ಕೂರಿಸುತ್ತಾ, ತಮ್ಮ ಹಳೆಯ ವರ್ಚಸ್ಸು ಮರೆಯಾಗುತ್ತಿರುವುದನ್ನು ಮುಚ್ಚಿ ಹಾಕಲು ಈ ತರಹದ ‘ಹೈಲೈಟ್’ ಸುದ್ದಿಗಳ ಮೊರೆ ಹೋಗುತ್ತಿದ್ದಾರೆ ಎಂಬುದು ಕೆಲವರ ಅಭಿಪ್ರಾಯ.

‘ಕಾಂತಾರ’ ಸುಂದರಿ ಸಪ್ತಮಿ ಗೌಡ ಅವರ ವಿಷಯಕ್ಕೆ ಬಂದರೆ, ಸಿನಿಮಾಗಳಲ್ಲಿ ಸೀರೆ ಉಟ್ಟು ಹಳ್ಳಿ ಹುಡುಗಿಯಂತೆ ಕಾಣಿಸಿಕೊಂಡರೂ, ಫೋಟೋಶೂಟ್‌ಗಳಲ್ಲಿ ಅವರು ಹಾಕುವ ಬಟ್ಟೆಗಳು ಅಪ್ಪಟ ಮಾಡರ್ನ್ ಆಗಿರುತ್ತವೆ. ಅತಿ ಚಿಕ್ಕದಾದ ಡ್ರೆಸ್‌ಗಳನ್ನು ಹಾಕಿ ಪೋಸ್ ಕೊಡುವಾಗ ನಟಿಯರಿಗೆ ಅದು ಕಲೆ ಅನಿಸುತ್ತದೆ, ಆದರೆ ಅದೇ ಬಟ್ಟೆಯಲ್ಲಿ ಕಾರ್ಯಕ್ರಮಕ್ಕೆ ಬಂದಾಗ ಕ್ಯಾಮೆರಾ ಅತ್ತ ತಿರುಗಿದರೆ ಅದು ಅಂಗಾಂಗ ಪ್ರದರ್ಶನ ಅನಿಸುತ್ತದೆ ಎನ್ನುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ ಪ್ರಶ್ನೆ. ಕಲಾವಿದರಾದ ಮೇಲೆ ಲೈಮ್‌ಲೈಟ್‌ನಲ್ಲಿ ಇರಲು ಇಷ್ಟಪಡುತ್ತಾರೆ, ತಾವೇ ಖುದ್ದಾಗಿ ಹಾರ್ಟ್ ಎಮೋಜಿ ಬರುವಂತಹ ಹಾಟ್ ಪೋಸ್ಟ್‌ಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡುತ್ತಾರೆ. ಆದರೆ ಈಗ ಪಾಪರಾಜಿಗಳು ವ್ಯೂವ್ಸ್ ಮಾಡುತ್ತಾರೆ ಎಂದು ಆರೋಪ ಮಾಡುವುದು ಕೇವಲ ಪ್ರಚಾರಕ್ಕಾಗಿ ಮಾಡುತ್ತಿರುವ ಗಿಮಿಕ್ ಎಂಬಂತೆ ಕಾಣುತ್ತಿದೆ.

ಒಂದು ಕಾಲದ ಕ್ರೇಜಿ ಕ್ವೀನ್ ಆಗಿದ್ದ ರಕ್ಷಿತಾ ಪ್ರೇಮ್ ಅವರಂತೂ ಈಗ ಸದ್ಯಕ್ಕೆ ಯಾವುದೇ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಇಲ್ಲದೆ ಸುಮ್ಮನೆ ಕುಳಿತಿದ್ದಾರೆ. ಟಿವಿ ಶೋಗಳಲ್ಲೂ ಅವರ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿಲ್ಲ. ಇಂತಹ ಸಮಯದಲ್ಲಿ ಯಾವುದಾದರೂ ಒಂದು ಸೆನ್ಸೇಷನಲ್ ವಿಷಯ ಹಿಡಿದುಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುವುದು ಅನಿವಾರ್ಯವಾಗಿದೆ. ಹಿಂದೆ ಸಿನಿಮಾಗಳಲ್ಲಿ ತಾವೇ ಮಿನಿ ಸ್ಕರ್ಟ್, ಸ್ಲೀವ್‌ಲೆಸ್ ಬಟ್ಟೆಗಳನ್ನು ಹಾಕಿ ಮಿಂಚಿದವರು ಈಗ ಅದೇ ರೀತಿಯ ಫೋಟೋ ಅಥವಾ ವಿಡಿಯೋ ತೆಗೆದರೆ ಅದು ತಪ್ಪು ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಬಾಲಿವುಡ್‌ನಿಂದ ಬಂದ ಸಂಸ್ಕೃತಿ ಇಲ್ಲಿ ಬೇಡ ಎನ್ನುವ ನಟಿಯರು, ಅದೇ ಬಾಲಿವುಡ್‌ನ ಮಾದರಿಯಲ್ಲೇ ಜಿಮ್ ಲುಕ್ ಅಥವಾ ವೆಕೇಶನ್ ಫೋಟೋಗಳನ್ನು ಅಪ್‌ಲೋಡ್ ಮಾಡುವುದನ್ನು ನಿಲ್ಲಿಸಿಲ್ಲ. ಕಲಾವಿದರಾದವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಸಹಜವಾಗಿಯೇ ಜನರ ಕಣ್ಣು ಮತ್ತು ಕ್ಯಾಮೆರಾಗಳು ಅವರತ್ತ ತಿರುಗುತ್ತವೆ. ಅದನ್ನು ಸ್ವೀಕರಿಸುವ ಬದಲು ಅಭಿಯಾನದ ಹೆಸರಿನಲ್ಲಿ ನಿರ್ಬಂಧ ಹೇರಲು ಮುಂದಾಗುವುದು ಎಷ್ಟರ ಮಟ್ಟಿಗೆ ಸರಿ .. ಎಲ್ಲವನ್ನೂ ಗಮನಿಸಿದರೆ, ಇದು ಕೇವಲ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಲು ಮಾಡುತ್ತಿರುವ ಗಿಮಿಕ್ ಎಂದು ಸಿನಿ ಪ್ರೇಕ್ಷಕರೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Comments (0)

Your email address will not be published. Required fields are marked *

Back to top button